ನಂದಿನಿ ಹಾಲು ನಮ್ಮ ಕರ್ನಾಟಕದಲ್ಲಿ ತುಂಬಾನೇ ಸುಪ್ರಸಿದ್ಧ. ಆಲ್ಮೋಸ್ಟ್ ಕರ್ನಾಟಕದ ಎಲ್ಲ ಕಡೆಗಳಲ್ಲೂ ನಂದಿನಿ ಹಾಲು ಸಿಗುತ್ತದೆ. ಆದರೆ ನೀವು ಗಮನಿಸಿರಬಹುದು. ನಂದಿನಿ ಹಾಲು ಒಂದೇ ಪ್ಯಾಕೆಟ್ ಬಣ್ಣದಲ್ಲಿ ಬರುವುದಿಲ್ಲ. ನೀಲಿ ನೇರಳೆ ಹಳದಿ ಹಾಗೂ ಹಸಿರು ಬಣ್ಣದ ಪ್ಯಾಕೆಟ್ ಗಳು ಬರುತ್ತದೆ. ಹಾಗಾದರೆ ಅಷ್ಟೊಂದು ಬಣ್ಣಗಳಲ್ಲಿ ಪ್ಯಾಕೆಟ್ ಗಳು ಯಾಕೆ ಇರುತ್ತದೆ. ಅದರ ಅರ್ಥ ಏನು ಅನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ ಆದ್ದರಿಂದ ನೀವು ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ
ನೇರಳೆ ಬಣ್ಣದ ಹಾಲಿನ ಪ್ಯಾಕೆಟ್. ಗುಲಾಬಿ ಅಥವಾ ನೇರಳೆ ಹಣ್ಣಿನ ಬಣ್ಣದ ಪ್ಯಾಕೆಟನ್ನು ಗಟ್ಟಿಯಾಗಿ ಕಾಫಿಯನ್ನು ಮಾಡುವುದಕ್ಕೆ ಇಷ್ಟಪಡುವವರು ಪ್ಯಾಕೆಟನ್ನು ಖರೀದಿ ಮಾಡಬಹುದು. ಪೂರ್ತಿಯಾಗಿ ಕೆನೆಯ ಹಾಲು ಇದರ ಮೇಲೆ ಇರುತ್ತದೆ. ಪಾಯಸ ಹಾಗೂ ಇನ್ಯಾವುದೇ ಮಾಡುವ ಐಟಂಗಳಿಗೆ ಇದು ಹೇಳಿ ಮಾಡಿಸಿದ ಹಾಗೆ ಇರುತ್ತದೆ ಹಳದಿಬಣ್ಣದ ಹಾಲಿನ ಪ್ಯಾಕೆಟ್.
ಕೊಬ್ಬು ಇಳಿಸುವುದಕ್ಕೆ ಇಷ್ಟಪಡುವವರು ದಿನನಿತ್ಯ ಈ ಹಾಲನ್ನು ಎಲ್ಲಾ ಅವಶ್ಯಕತೆಗಳಿಗೆ ಬಳಸಬಹುದು. ಹಾಗೂ ಮಕ್ಕಳಿಗೆ ಬೇಕಾದ ಅವಶ್ಯಕ ಪೋಷಕಾಂಶಗಳು ಕೂಡ ಈ ಹಾಲಿನಲ್ಲಿ ಇರುತ್ತದೆ. ಹಾಗೂ ಆಸ್ಪತ್ರೆಯಲ್ಲಿ ಇರುವವರು ರೋಗಿಗಳು ಕೂಡ ಈ ಹಾಲನ್ನು ಬಳಸುವುದು ತುಂಬಾನೆ ಒಳ್ಳೆಯದು. ಹಸಿರು ಬಣ್ಣದ ಹಾಲಿನ ಪ್ಯಾಕೆಟ್. ಟಿ ಹಾಗೂ ಕಾಫಿ ಪ್ರಿಯರಿಗೆ ಈ ಹಾಲು ತುಂಬಾ ರುಚಿಯನ್ನು ನೀಡುತ್ತದೆ. ಇದಕ್ಕೆ ಕಾರಣ ಹೋಮೋ ಜನಿ ಸೈಡ್ ಅನ್ನುವ ತಳಿಯ ಹಸುವಿನ ಹಾಲು ಇದಾಗಿದ್ದು
ಕಾಫಿ ಮತ್ತು ಟೀ ಪ್ರಿಯರಿಗೆ ತುಂಬಾ ರುಚಿಯನ್ನು ತಂದುಕೊಡುತ್ತದೆ. ಹಾಗೂ ಈ ಹಾಲಿನಲ್ಲಿ ಯಾವುದೇ ಕಾರಣಕ್ಕೂ ಎಮ್ಮೆ ಹಾಲಿನ ಮಿಶ್ರಣ ಮಾಡುವುದಿಲ್ಲ. ಹಾಗಾಗಿ ಮಕ್ಕಳ ಆರೋಗ್ಯಕ್ಕೆ ಕೂಡ ಇದು ತುಂಬಾನೆ ಒಳ್ಳೆಯದು. ಎಮ್ಮೆ ಹಾಲನ್ನು ಇಷ್ಟಪಡದೆ ಇರುವವರು ಹಸಿರು ಬಣ್ಣದ ಪ್ಯಾಕೆಟನ್ನು ಖರೀದಿ ಮಾಡಬಹುದು. ನಂದಿನಿ ಗುಡ್ ಲೈಫ್ ಹಾಲು. ನಿಮಗೆ ಹಾಲು ಕಾಯಿಸಿ ಕುಡಿಯುವ ವ್ಯವಸ್ಥೆ ಇಲ್ಲದಿದ್ದಾಗ ಈ ಹಾಲನ್ನು ಖರೀದಿ ಮಾಡಬಹುದು. ಯಾಕೆಂದರೆ ಈ ಹಾಡನ್ನು 137 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 4 ನಿಮಿಷ ಕಾಯಿಸಿ ತಣ್ಣಗೆ ಮಾಡಿರುತ್ತಾರೆ.