ನಿಂತುಕೊಂಡು ನೀರನ್ನು ಕುಡಿಯುವುದರಿಂದ ನಮ್ಮ ಆರೋಗ್ಯದ ಮೇಲೆ ಆಗುವಂಥ ಅಡ್ಡ ಪರಿಣಾಮಗಳು ನಮ್ಮಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಯೋಣ. ಮೊದಲನೆಯದಾಗಿ ನಿಂತುಕೊಂಡು ನೀರನ್ನು ಕುಡಿಯುವುದರಿಂದ ದೇಹದ ಆಮ್ಲತೆ ಹೆಚ್ಚಾಗುತ್ತದೆ ನೀವು ಅಂದುಕೊಂಡು ಇರುವುದಿಲ್ಲ ನಿಂತು ನೀರು ಕುಡಿಯುವುದರಿಂದ ಹೀಗೆ ಆಗುತ್ತದೆ ಎಂದು. ಆದರೆ ನೀವೇನಾದರೂ ನಿಂತುಕೊಂಡು ನೀರು ಕುಡಿದರೆ ನಿಮ್ಮಲ್ಲಿ ಆಮ್ಲತೆ ಹೆಚ್ಚಾಗಿ ಗ್ಯಾಸ್ಟಿಕ್ ನಂಥ ಸಮಸ್ಯೆ ಉಂಟಾಗುತ್ತದೆ.

ಇನ್ನು ಹೆಚ್ಚಿನ ಸಮಸ್ಯೆ ಎಂದರೆ ಸಂಧಿವಾತದ ಸಮಸ್ಯೆ ವಯಸ್ಸಾದ ನಂತರ ಎಷ್ಟು ಜನರಿಗೆ ಮಂಡಿ ನೋವು ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ. ಅದಕ್ಕೆ ಮೂಲ ಕಾರಣವೆಂದರೆ ನಿಂತು ನೀರನ್ನು ಕುಡಿಯುವುದರಿಂದ ಈ ರೀತಿ ಸಮಸ್ಯೆ ನಮ್ಮಲ್ಲಿ ಉಂಟಾಗುತ್ತದೆ ಈ ಮಂಡಿ ನೋವಿನ ಸಮಸ್ಯೆಗೆ ಸಂಧಿ ವಾತದ ಸಮಸ್ಯೆಗೆ ಎಂದಿಗೂ ಕೂಡ ಉಪಯುಕ್ತ ಔಷಧಿ ದೊರೆತಿಲ್ಲ. ಆದ ಕಾರಣ ನೆನಪಿನಲ್ಲಿ ಇಡೀ.

ನಿಂತು ನೀರನ್ನು ಕುಡಿಯುವುದರಿಂದ ವಯಸ್ಸಾದ ಕಾಲದಲ್ಲಿ ಮಂಡಿ ನೋವು ಸಂಧಿ ವಾಕ್ಯದ ಸಮಸ್ಯೆ ಉಂಟಾಗಬಹುದು. ಇನ್ನು ಮತ್ತೊಂದು ವಿಚಾರೇನೆಂದರೆ ನೀವು ತಿಂದ ಆಹಾರ ಜೀರ್ಣವಾಗುತ್ತದೆ. ಹೌದು ಯಾವಾಗ ನೀವು ನಿಂತು ನೀರನ್ನು ಕುಡಿಯುತ್ತೀರಾ ಆಗ ನೀವು ತಿಂದ ಆಹಾರ ಸಂಪೂರ್ಣವಾಗಿ ಜೀರ್ಣ ಆಗುವುದಿಲ್ಲ. ತಿಂದ ಆಹಾರ ಜೀರ್ಣವಾಗದೆ ಇದ್ದಾಗ ಏನಾಗುತ್ತದೆ ಅಂತ ನಿಮಗೆ ತಿಳಿದಿದೆ. ಇನ್ನು ಮುಖ್ಯವಾಗಿ ಮಲಬದ್ಧತೆ ಉಂಟಾಗುತ್ತದೆ.

ಅಸಿಡಿಟಿ ಉಂಟಾಗುತ್ತದೆ ಹಾಗಾಗಿ ನಿಂತು ನೀರನ್ನು ಕುಡಿಯುವ ಅಭ್ಯಾಸವನ್ನು ಬಿಟ್ಟುಬಿಡಿ. ನಿಂತು ನೀರನ್ನು ಕುಡಿಯುವುದರಿಂದ ಬಾಯಾರಿಕೆ ತಣಿಸುವುದಿಲ್ಲ ಮತ್ತೆ ನಿಮಗೆ ಪದೇಪದೇ ನೀರು ಕುಡಿಯುವ ಭಾವನೆ ಕೂಡ ಉಂಟಾಗುತ್ತದೆ. ಈ ರೀತಿ ಎಲ್ಲ ನರರೋಗ ಸಮಸ್ಯೆಗಳು ಉಂಟಾಗಬಾರದು ಎಂದರೆ ನಾವು ಕೂತುಕೊಂಡು ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಆದಲ್ಲಿ ನಾವು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುತ್ತೇವೆ.

ನಿಂತು ನೀರು ಕುಡಿಯುವುದರಿಂದ ಕಿಡ್ನಿಯು ಕೆಲವು ಬಾರಿ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ನೀರು ಒಮ್ಮೆಲೆ ದೇಹ ಸೇರುವುದರಿಂದ ಕಿಡ್ನಿಯು ನೀರನ್ನು ಸರಿಯಾಗಿ ಸೋಸುವುದಿಲ್ಲ. ಇದರಿಂದ ಮೂತ್ರನಾಳಗಳಿಗೆ ಕಲ್ಮಷ ಪ್ರವೇಶಿಸಿ ರಕ್ತದೊಂದಿಗೆ ಮಿಶ್ರಣವಾಗಬಹುದು. ಇದರಿಂದ ಕಿಡ್ನಿಗೆ ಹಾನಿಯುಂಟಾಗಿ, ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು.

ಆರಾಮದಲ್ಲಿ ಕುಳಿತು ಒಂದೊಂದೆ ಗುಟುಕಾಗಿ ನೀರನ್ನು ಕುಡಿದರೆ ಬಾಯಾರಿಕೆ ತಣಿಯುತ್ತದೆ. ಅದರ ಬದಲು ಅರ್ಜೆಂಟಿನಲ್ಲಿ ನಿಂತುಕೊಂಡು ನೀರನ್ನು ಕುಡಿದರೆ ಬಾಯಾರಿಕೆ ಕಡಿಮೆಯಾಗದೆ ಮತ್ತೆ ಮತ್ತೆ ನೀರನ್ನು ಕುಡಿಯಬೇಕು ಎನಿಸುತ್ತದೆ. ಇದು ನೀರು ಕುಡಿದ ಸಂತೃಪ್ತಿಯನ್ನೂ ನೀಡುವುದಿಲ್ಲ. ಆದ್ದರಿಂದ ಆದಷ್ಟು ಕುಳಿತುಕೊಂಡೇ ನೀರನ್ನು ಸೇವಿಸಿ. ಆರೋಗ್ಯಕ್ಕೂ ಒಳ್ಳೆಯದು. ಮತ್ತು ನರಗಳು ಸ್ಥಿರವಾಗಿರುತ್ತವೆ.

ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ನಿಂತು ನೀರು ಕುಡಿಯುವುದರಿಂದ ಆಮ್ಲೀಯ ಮಟ್ಟ ಏರಿಕೆಯಾಗಿ ಅಜೀರ್ಣವಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಕುಳಿತುಕೊಂಡು ನೀರು ಕುಡಿಯುವುದು ಉತ್ತಮವಾಗಿದೆ. ಅದರಲ್ಲೂ ಒಂದೇ ಸಲಕ್ಕೆ ನೀರು ಕುಡಿಯುವದಕ್ಕಿಂತ ಗುಟುಕಾಗಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು.

Leave a Reply

Your email address will not be published. Required fields are marked *