WhatsApp Group Join Now

ನಮಸ್ತೇ ಪ್ರಿಯ ಓದುಗರೇ, ದೇಹದಲ್ಲಿ ಶಕ್ತಿ ಇದ್ದರೆ ಮಾತ್ರ ಮನುಷ್ಯನು ಎಂಥಹ ಬಂಡೆ ಕಲ್ಲನ್ನು ಕೂಡ ಎತ್ತಬಹುದು ಅಲ್ವಾ ಗೆಳೆಯರೇ. ಅದೇ ಮನುಷ್ಯನ ದೇಹದಲ್ಲಿ ಶಕ್ತಿಯ ಕೊರತೆ ಇದ್ದರೆ ಆತನು ಪಕ್ಕದಲ್ಲಿರುವ ಕಡ್ಡಿಯನ್ನು ಕೂಡ ಎತ್ತಿಡಲು ಆಗುವುದಿಲ್ಲ. ಮನುಷ್ಯನಲ್ಲಿ ವಯಸ್ಸಾದಂತೆ ಶಕ್ತಿ ಕುಂಠಿತಗೊಳ್ಳುವುದು ಸಹಜ. ಆದರೆ ವಯಸ್ಸಿಗೂ ಮುನ್ನ ದೇಹದಲ್ಲಿ ಸುಸ್ತು ಆಯಾಸ ನಿಶ್ಯಕ್ತಿ ತುಂಬಿಕೊಂಡರೆ ತುಂಬಾನೆ ಕಷ್ಟವಾಗುತ್ತದೇ. ಆದರೆ ಕೇವಲ ಈ ಮೂರು ಕಾಳುಗಳನ್ನು ಸೇವನೆ ಮಾಡುವುದರಿಂದ ನಿಮ್ಮಲ್ಲಿ ನಿಶ್ಯಕ್ತಿ ಅನ್ನುವುದು ಉಂಟಾಗುವುದಿಲ್ಲ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಆ ಮೂರು ಕಾಳುಗಳು ಯಾವುವು? ಮತ್ತು ಆ ಮೂರು ಕಾಳುಗಳನ್ನು ತಿನ್ನುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿಸಿ ಕೊಡುತ್ತೇವೆ. ಈ ಮೂರು ಕಾಳುಗಳನ್ನು ತಿನ್ನುವುದರಿಂದ ನಿಮ್ಮಲ್ಲಿ ಸ್ಟ್ಯಾಮಿನಾ ಅಧಿಕವಾಗುತ್ತದೆ. ನಮ್ಮ ದೇಹವು ಆರೋಗ್ಯವಾಗಿ ಇರಬೇಕೆಂದರೆ ಮತ್ತು ದೇಹವು ಸಧೃಢವಾಗಿ ಇರಬೇಕೆಂದರೆ ನಿತ್ಯವೂ ಸ್ವಲ್ಪ ಭಾಗ ನಾವು ಕಾಳುಗಳನ್ನು ಸೇವಿಸಲೇಬೇಕು. ಕಾಳುಗಳ ಸೇವನೆ ಮಾಡುವುದರಿಂದ ಕ್ಯಾಲಷಿಯಂ ಕೊರತೆ ಉಂಟಾಗುವುದಿಲ್ಲ.

ಕಾಳುಗಳನ್ನು ತಿನ್ನುವುದರಿಂದ ನಮ್ಮ ಆರೋಗ್ಯದಲ್ಲಿ ಯಾವ ರೀತಿಯ ಬದಲಾವಣೆಗಳು ಆಗುತ್ತವೆ ಅಂತ ನೀವೇ ಕಾಣುತ್ತೀರಿ. ಹೌದು ಉತ್ತಮವಾದ ಆರೋಗ್ಯಕ್ಕೆ ಹಸಿ ಕಾಳುಗಳು ಅಥವಾ ನೆನೆಸಿದ ಕಾಳುಗಳು ತುಂಬಾನೇ ಉತ್ತಮ. ಮೊದಲನೆಯದು ಕಡಲೆಕಾಳು ಕಡಲೇ ಕಾಳಿನಲ್ಲಿ ಬಾದಾಮಿಯಲ್ಲಿರುವ ಪೌಷ್ಟಿಕಾಂಶಗಳಿಗೆ ಸಮ ಅಂತ ಹೇಳಬಹುದು. ಈ ಕಡಲೆ ಕಾಳುಗಳನ್ನು ರಾತ್ರಿವಿಡೀ ನೆನೆಸಿಟ್ಟು ಬೆಳಿಗ್ಗೆ ಎದ್ದು ಉಪಹಾರ ಮಾಡುವ ವೇಳೆಯಲ್ಲಿ ಸೇವಿಸಬೇಕು. ನಿಶ್ಶಕ್ತಿಯನ್ನು ಹೋಗಲಾಡಿಸಲು ಇದು ಹೇಳಿ ಮಾಡಿಸಿರುವ ಸೂಪರ್ ಬೀಜವಾಗಿದೆ. ನಿತ್ಯವೂ ಒಂದು ಹಿಡಿಯಷ್ಟು ತಿನ್ನಲು ಕಷ್ಟವಾದರೆ ಕನಿಷ್ಠ ಒಂದು ವಾರದಲ್ಲಿ ಮೂರು ಬಾರಿಯಾದರೂ ತಿನ್ನಬೇಕು. ಈ ಕಡಲೆ ಕಾಳುಗಳನ್ನು 15-18 ವರ್ಷ ಮೇಲ್ಪಟ್ಟವರು ಎಲ್ಲರೂ ಸೇವಿಸಬಹುದು. ಈ ಕಡಲೆ ಕಾಳು ತಿನ್ನುವುದರಿಂದ ಉತ್ತಮವಾದ ಆರೋಗ್ಯವು ಲಭಿಸುತ್ತದೆ. ಎರಡನೆಯದು ಹುರುಳಿ ಕಾಳುಗಳು, ಇವು ದೇಹಕ್ಕೆ ಅಧಿಕ ಮಟ್ಟದ ಆರೋಗ್ಯವನ್ನು ಒದಗಿಸುತ್ತದೆ ಬೆಳೆಯುವ ಮಕ್ಕಳಿಗೆ ಅಗತ್ಯವಾದ ಪೋಷಕಾಂಶವನ್ನು ಒದಗಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಈ ಹುರುಳಿ ಕಾಳುಗಳನ್ನು ಬೇಸಿಗೆ ಸಮಯದಲ್ಲಿ ನಿತ್ಯವೂ ಎರಡು ಬಾರಿ ಸೇವಸಬೇಕು. ಆದರೆ ಮಳೆಗಾಲ ಚಳಿಗಾಲದಲ್ಲಿ ಮೂರು ನಾಲ್ಕು ಚಮಚ ಸೇವಿಸಬಹುದು. ಈ ಕಾಳುಗಳನ್ನು ರಾತ್ರಿ ನೆನೆಸಿಟ್ಟು ಮಾರನೆಯ ದಿನ ಸೇವಿಸಬೇಕು. ಇನ್ನು ಕೆಲವರಿಗೆ ಕಣ್ಣಿನಲ್ಲಿ ಸತತವಾಗಿ ನೀರು ಬರುವ ಕಾಯಿಲೆ ಇರುತ್ತದೆ.

ಹೀಗಾಗಿ ಅವರು ಈ ಹುರುಳಿ ಕಾಳುಗಳನ್ನು ನೀರನಲ್ಲಿ ನೆನೆಸಿಟ್ಟು ಬೆಳ್ಳಿಗೆ ತಿನ್ನುವುದರಿಂದ ಅಥವಾ ಜಗಿದು ತಿನ್ನುವುದರಿಂದ ಈ ಕಣ್ಣಿನಲ್ಲಿ ನೀರು ಬರುವ ಸಮಸ್ಯೆಯನ್ನು ದೂರ ಮಾಡಬಹುದು. ಈ ಹುರುಳಿ ಕಾಳಿನಲ್ಲಿ ಐರನ್, ಫಾಸ್ಫರಸ್ ಕ್ಯಾಲಷಿಯಂ ಅಧಿಕವಾಗಿರುತ್ತವೆ. ಈ ಕಾಳುಗಳನ್ನು ಯಾವ ವಯಸ್ಸಿವರು ಕೂಡ ಸೇವಿಸಬಹುದು. ಪಿತ್ತಕೋಶದ ಸಮಸ್ಯೆ ಇದ್ದವರು ಈ ಹುರುಳಿ ಕಾಳುಗಳನ್ನು ತಿನ್ನುವುದನ್ನು ರೂಢಸಿಕೊಂಡರೆ ಆರೋಗ್ಯವು ಉತ್ತಮವಾಗುತ್ತದೆ. ಹೃದಯದ ಕಾಯಿಲೆ ಗಾಳನ್ನು ನಿವಾರಣೆ ಮಾಡುತ್ತದೆ. ಇನ್ನು ಹೆಸರು ಕಾಳು. ಈ ಕಾಳುಗಳ ಬಗ್ಗೆ ಯಾರಿಗೆ ಮಾಹಿತಿ ಇಲ್ಲ ಹೇಳಿ ಗೆಳೆಯರೇ, ಮೊಳಕೆ ಬಂದ ಹೆಸರು ಕಾಳುಗಳನ್ನು ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳು ದೊರೆಯುತ್ತವೆ. ಈ ಹೆಸರು ಕಾಳುಗಳನ್ನು ರಾತ್ರಿವಿಡೀ ನೆನೆಸಿ ಮಾರನೆಯ ದಿನ ನೀರನ್ನು ತೆಗೆದು ಬಿಟ್ಟರೇ ಮೊಳಕೆ ಬರುತ್ತದೆ.ಈ ರೀತಿ ಮೊಳಕೆ ಬಂದ ಕಾಳುಗಳನ್ನು ತಿನ್ನುವುದರಿಂದ ಮಂಡಿ ನೋವು ಬರುವುದಿಲ್ಲ. ಇನ್ನು ಡಯೆಟ್ ಮಾಡುವವರು ಮೊಳಕೆ ಬಂದ ಕಾಳುಗಳನ್ನು ಹೆಚ್ಚಾಗಿ ಸೇವಿಸುತ್ತಾರೆ ಏಕೆಂದರೆ ಅವುಗಳು ಹೊಟ್ಟೆ ತುಂಬಿದ ಹಾಗೆ ಭಾಸವಾಗುತ್ತದೆ. ಹಾಗೆಯೇ ಈ ಕಾಳುಗಳು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. ಬೇಕರಿ ಉತ್ಪನ್ನಗಳನ್ನು ತಿನ್ನುವುದನ್ನು ಬಿಟ್ಟು ಕಾಳುಗಳ ಸೇವನೆ ಮಾಡುವುದನ್ನು ರೂಢಿಸಿಕೊಳ್ಳಿ. ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

WhatsApp Group Join Now

Leave a Reply

Your email address will not be published. Required fields are marked *