ನಮಗೆಲ್ಲ ಗೊತ್ತು ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸುವುದು ದೇಹಕ್ಕೆ ತುಂಬಾ ಒಳ್ಳೆಯದು ಅಂತ. ಹಾಗಾಗಿ ನಮ್ಮ ಮಕ್ಕಳಿಗೂ ಕೂಡ ನಾವು ತರಕಾರಿ ಹಣ್ಣುಗಳನ್ನು ಕೊಡುತ್ತಾ ಇರುತ್ತೀವಿ. ಆದರೆ ಅದರ ಮೇಲೆ ಒಂದು ಸ್ಟಿಕ್ಕರ್ ಅಂಟಿಸುತ್ತಾರೆ. ಇದರ ಬಗ್ಗೆ ನಾವು ಜಾಸ್ತಿ ತಲೆ ಕೆಡಿಸಿಕೊಳ್ಳುವುದಿಲ್ಲ. ಹಣ್ಣನ್ನು ತರುತ್ತಿವೆ ಸ್ಟಿಕ್ಕರ್ ಅನ್ನು ಕಿತ್ತು ಹಾಕುತ್ತೇವೆ. ಹಣ್ಣನ್ನು ತೊಳೆದು ಕಟ್ ಮಾಡಿ ತಿಂದು ಬಿಡುತ್ತೇವೆ. ಆದರೆ ಆ ಸ್ಟಿಕ್ಕರ್ ಯಾಕಿದೆ. ಸ್ಟಿಕ್ಕರ್ ಅರ್ಥ ಏನು. ಈ ರೀತಿ ನಾವು ಯೋಚನೆ ಮಾಡುವುದಕ್ಕೇ ಹೋಗುವುದಿಲ್ಲ.
ಆದರೆ ಆ ಸ್ಟಿಕ್ಕರ್ ನಲ್ಲಿ ನಾವು ತಿನ್ನುತ್ತಿರುವ ಹಣ್ಣು ಎಂತಹದು. ಅದನ್ನು ಯಾವ ರೀತಿ ಬೆಳೆಸಿದ್ದಾರೆ ಅನ್ನುವುದರ ಸಂಪೂರ್ಣ ಮಾಹಿತಿಯು ಡೀಟೇಲ್ಸ್ ಅದರಲ್ಲಿರುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಅದಕ್ಕೂ ಮೊದಲು ನೀವು ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಮೊದಲನೆಯದಾಗಿ ನಾವು ತರುವ ಹಣ್ಣು ಹಾಗೂ ತರಕಾರಿಗಳಲ್ಲಿ ಈ ರೀತಿಯಾದಂತಹ ಸ್ಟಿಕ್ಕರ್ಸ್ ಅನ್ನು ನಾವು ನೋಡಬಹುದು. ಅದರಲ್ಲಿರುವ ನಂಬರ್ಸ್ ಮೂಲಕ
ನಾವು ಹಣ್ಣು ಹಾಗೂ ತರಕಾರಿಗಳನ್ನು ಯಾವ ಬೆಳೆಯ ಪದ್ದತಿ ಬೆಳೆಸಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬಹುದು. ಉದಾಹರಣೆಗೆ ಹಣ್ಣಿನ ಮೇಲೆ ಮೂರು ಅಥವಾ 4 ನಂಬರ್ ಇಂದ ಶುರುವಾಗುವ 4 ಡಿಜಿಟಲ್ ಕೋಡ್ ಇದ್ದರೆ ಆ ಹಣ್ಣನ್ನು ಬೆಳೆಯುವಾಗ ರಾಸಾಯನಿಕ ಅಥವಾ ಕೀಟನಾಶಕಗಳನ್ನು ಬಳಸಿದ್ದಾರೆ ಎಂದು ಅರ್ಥ. ಇಂತಹ ಹಣ್ಣು ನೋಡುವುದಕ್ಕೆ ಕಲರ್ ಹಾಗೂ ಶೈನಿಂಗ್ ಇದ್ದರುನು ಇದು ಆರೋಗ್ಯಕ್ಕೆ ಹಾನಿಕಾರ. ಹಾಗಾಗಿ ಇಂತಹ ಹಣ್ಣನ್ನು ಯೂಸ್ ಮಾಡದ್ ಇದ್ದರೇನೇ ಒಳ್ಳೆಯದು.
ಹಾಗೂ 8ನೇ ನಂಬರ್ ಇಂದ ಶುರುವಾಗುವ 5 ಅಂಕಿಗಳ ಡಿಜಿಟಲ್ ಕೋಡ್ ಇದ್ದರೆ ಆ ಹಣ್ಣನ್ನು ಜೆರ್ರಿ ಟಿಕಲಿ ಮೊಡಿಫೈ ಮಾಡಿ ಬೆಳೆದಿದ್ದಾರೆ ಅಂತ ಅರ್ಥ. ಹಾಗಾಗಿ ಇಂಥ ಹಣ್ಣನ್ನು ಸೇವಿಸುವುದು ಕೂಡ ಆರೋಗ್ಯಕ್ಕೆ ಅಷ್ಟೇನೂ ಒಳ್ಳೆಯದು ಅಲ್ಲ. ಹಾಗೆ 9ನೇ ನಂಬರ್ ಇಂದ ಶುರುವಾಗುವ 5 ಅಂಕಿಗಳ ಡಿಜಿಟಲ್ ಕೋಡ್ ಇದ್ದರೆ ಮಾತ್ರ ನೀವು ಯಾವುದೇ ಭಯಪಡುವ ಅಗತ್ಯ ಇರುವುದಿಲ್ಲ. ನೀವು ಆ ಹಣ್ಣನ್ನು ಆರಾಮಾಗಿ ಖರೀದಿ ಮಾಡಬಹುದು. ಯಾಕೆಂದರೆ ಅದನ್ನು ಹಂಡ್ರೆಡ್ ಪರ್ಸೆಂಟ್ ಆರ್ಗನಿಕ್ ಆಗಿ ಬೆಳೆದಿರುತ್ತಾರೆ. ಅದರಲ್ಲಿ ಯಾವುದೇ ಕೆಮಿಕಲ್ ಗಳು ಇರುವುದಿಲ್ಲ.