ನೀವು ಪ್ರತಿದಿನ ಬೆಳಗ್ಗೆ ಸ್ನಾನ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಆದರೆ ಬಿಸಿನೀರಿನಲ್ಲಿ ಸ್ನಾನ ಮಾಡುವುದು ಒಳಿತ ಅಥವಾ ತಣ್ಣೀರಿನಲ್ಲಿ ಸ್ನಾನ ಮಾಡುವುದು ಒಳಿತ ಅನ್ನೋದು ತುಂಬಾ ಮುಖ್ಯ.
ಇತ್ತೀಚಿನ ದಿನಗಳಲ್ಲಿ ಸಂಶೋಧನೆಗಳು ಹೇಳುವಂತೆ ಪುರುಷರು ತಣ್ಣೀರಿನಲ್ಲಿ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಆದ್ರೆ ಬಿಸಿನೀರಿನಲ್ಲಿ ಮಾಡುವುದು ತುಂಬಾ ಅಪಾಯಕಾರಿ ಆಗಿದೆ ಯಾಕೆ ಅನ್ನೋದು ಇಲ್ಲಿದೆ ನೋಡಿ.
ಪ್ರತಿದಿನ ಬಿಸಿನೀರಿನಲ್ಲಿ ಪುರುಷರು ಸ್ನಾನ ಮಾಡುವುದರಿಂದ ಆಗುವ ಪರಿಣಾಮಗಳೆಂದರೆ: ವಾತಾವರಣದಲ್ಲಿ ಚಳಿ ಹೆಚ್ಚಿದ್ದಾಗ ಪುರುಷರು ಬಿಸಿನೀರಿನಲ್ಲಿ ಸ್ನಾನ ಮಾಡಿದರೆ ಹೃದಯಕ್ಕೆ ಸಂಬಂದಿಸಿದ ಖಾಯಿಲೆಗಳು ಕಂಡುಬರುತ್ತವೆ. ಹೃದಯಾಘಾತ ಆಗುವ ಸಂಭವ ಹೆಚ್ಚಿರುತ್ತದೆ.
ನೀವು ಪ್ರತಿದಿನ ಬಿಸಿನೀರಿನಲ್ಲಿ ಸ್ನಾನ ಮಾಡಿದರೆ ನಪುಂಸಕತೆ ಕಂಡುಬರುತ್ತದೆ. ಪುರುಷರ ತಾಪಮಾನಕ್ಕಿಂತಲೂ ಕಡಿಮೆ ತಾಪಮಾನದಲ್ಲಿ ಪುರುಷರ ವೀರ್ಯಾಣು ಉತ್ಪತ್ತಿಯಾಗುತ್ತದೆ. ಅದರಲ್ಲೂ ಪುರುಷರ ವೃಷಣ ದೇಹದ ಹೊರಭಾಗದಲ್ಲಿದು ಇದಕ್ಕೆ ಬಿಸಿನೀರು ಹೆಚ್ಚಾಗಿ ಬೀಳುವುದರಿಂದ ನಿಮ್ಮ ವೀರ್ಯಾಣು ಉತ್ಪತ್ತಿ ಕಡಮೆಯಾಗುತ್ತದೆ.
ತಲೆಸುತ್ತುವುದು. ಪುರುಷರು ಹೆಚ್ಚಾಗಿ ಪ್ರತಿದಿನ ಬಿಸಿನೀರಿನ ಸ್ನಾನ ಮಾಡುವುದು ಒಳ್ಳೇದಲ್ಲ ಇದರಿಂದ ತಲೆ ನೋವು ಮತ್ತು ತಲೆಸುತ್ತುವುದು ಹೆಚ್ಚಾಗುತ್ತದೆ.
ಚರ್ಮ ಸೀಳಬಹುದು. ಅಂದರೆ ನಿಮ್ಮ ಚರ್ಮದಲ್ಲಿ ಸೂಕ್ಷ್ಮ ರಂದ್ರಗಳಿದು ಅದರಲ್ಲಿ ಬಿಸಿನೀರು ಹೋದಾಗ ನಿಮ್ಮ ಚರ್ಮ ಒಣಗುತ್ತದೆ.ನಿಮ್ಮ ಸೌಂದರ್ಯ ಕುಗ್ಗಿಸುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಹೌದು ಮದ್ಯಪಾನ ಮತ್ತು ಇನ್ನಿತರ ಚಟಗಳಿರುವ ಪುರುಷರು ಬಿಸಿನೀರಿನಲ್ಲಿ ಸ್ನಾನ ಮಾಡಿದರೆ ಹಲುವು ರೀತಿಯ ಖಾಯಿಲೆಗಳು ಹೆಚ್ಚಾಗುತ್ತವೆ.
ಹೀಗೆ ಬಿಸಿನೀರು ಸ್ನಾನ ಮಾಡುವುದರಿಂದ ಹಲವು ರೀತಿಯ ತೊಂದರೆಗಳು ಪುರುಷರಿಗೆ ಬರುವ ಲಕ್ಷಣಗಳಿವೆ. ಹಾಗಾಗಿ ಆದೊಷ್ಟು ನೀವು ಬಿಸಿನೀರಿನ ಸ್ನಾನ ಬಿಟ್ಟು ತಣ್ಣೀರಿನಲ್ಲಿ ಸ್ನಾನ ಮಾಡುವು ಉತ್ತಮ ಆರೋಗ್ಯಕ್ಕೆ ಒಳ್ಳೇದು.