WhatsApp Group Join Now

ವಿಶ್ವ ಅನ್ನೋ ಒಬ್ಬ ಹುಡುಗ ದೀಪಾ ಅನ್ನೋ ಹುಡುಗಿನ ಸುಮಾರು ೫ ವರ್ಷದಿಂದ ಲವ್ ಮಾಡತಾ ಇರ್ತಾನೆ. ಈ ವಿಚಾರ ದೀಪಾಗು ಸಹ ಗೊತ್ತಿರುತ್ತದೆ.

ಹೀಗೆ ಹಲವು ದಿನಗಳ ನಂತರ ಹೇಗೋ ಹುಡುಗಿಗೂ ಅಂದ್ರೆ ದೀಪಾಗು ಈ ವಿಚಾರ ಗೊತ್ತಿದೆ ಅಂದುಕೊಂಡು. ಒಂದು ದಿನ ದೀಪಾ ಹತ್ತಿರ ಹೋಗಿ ಪ್ರಪೋಸ್ ಮಾಡ್ತಾನೆ. ಆದರೆ ಅಲ್ಲಿ ನಡೆದಿದ್ದೇ ಬೇರೆ.

ದೀಪಾ ಜಸ್ಟ್ ಗೋ ಟು ಹೆಲ್ ಅಂತಾಳೆ. ಮಾಡೋಕೆ ಕೆಲಸ ಇಲ್ವಾ ನಿಂಗೆ ಅಂತ ಹೇಳ್ತಾಳೆ. ಆದರೆ ವಿಶ್ವ ಆ ಹುಡುಗಿನ ಮರೆಯೋದು ಕಷ್ಟ ಆಗಿರುತ್ತೆ. ಅಂತಹ ಸಂದರ್ಭದಲ್ಲಿ ಅವಳನ್ನ ದೂರದಿಂದನೇ ನೋಡಿ ಖುಷಿ ಆಗುತ್ತಾ ಲವ್ ಮಾಡತಾನೆ ಇರ್ತಾನೆ.

ಇದನ್ನು ನೋಡಿದ ದೀಪಾ ವಿಶ್ವ ಹತ್ತಿರ ಬಂದು ಹೇ ಉ ಚೀಪ್ ಗೈ ನೀನು ನನ್ನ ಯಾಕೆ ನೋಡ್ತೀಯ ಅಂತ ಹೇಳಿ ಅವನ ಮನಸಿಗೆ ತುಂಬ ನೋವು ಆಗುವ ರೀತಿಯಲ್ಲಿ ಮಾತಾಡ್ತಾಳೆ. ವಿಶ್ವ ಹೇಳ್ತಾನೆ ನಾನು ನಿನ್ನ ತುಂಬ ಇಷ್ಟ ಪಡತ್ತಿನಿ ನಾನು ಒಬ್ಬ ಗ್ರೇಟ್ ಲವರ್ ಅಂತ ಹೇಳ್ತಾನೆ.

ದೀಪಾ : ನೀನು ತುಂಬ ಹಳ್ಳಿ ಹುಡುಗ ನಿಂಗೆ ಏನ್ ಗೊತ್ತು ನಾನು ಏನು ಅಂತ ನಿಂಗೆ ಗೊತ್ತಾ. ನಾನು ಈ ಏರಿಯಾದ ದೊಡ್ಡ ಶ್ರೀಮಂತನ ಮಗಳು ಅಂತ ಹೇಳಿ ನಗ್ತಾಳೆ. ವಿಶ್ವ: ನೀನು ಎಷ್ಟೇ ರಿಚ್ ಇರಬವುದು ಆದರೆ ನನ್ನ ಹಾರ್ಟ್ ಬಿಟ್ಸ್ ಓನ್ಲಿ ನೀನು ಅಂತ ಹೇಳ್ತಾನೆ.

ದೀಪಾ : ಹೇ ಜಸ್ಟ್ ಗೆಟ್ ಔಟು ಪ್ರಮ್ ಹಿಯರ್ ಅಂತ ಬಾಯಿಗೇ ಬಂದ ಹಾಗೆ ಬೈದು ಹೋಗ್ತಾಳೆ. ಹೀಗೆ ಕೆಲವು ದಿನಗಳ ನಂತರ. ವಿಶ್ವ ದಾರಿ ಮದ್ಯೆ ತನ್ನ ಪ್ರೇಯಸಿಯ ನೆನಪಿಸಿಕೊಂಡು ಹಗಲು ಕನಸು ಕಾಣುತ್ತ ಬರುತಿದ್ದ ವೇಳೆ.

ವೇಗವಾಗಿ ಬಂದ ವಾಹನ ವಿಶ್ವ ಗುದ್ದಿ ಹೋಗುತ್ತದೆ. ಆಗ ವಿಶ್ವ ತನ್ನ ಕೊನೆ ಉಸಿರಿನ ಸಮಯದಲ್ಲಿಯೂ ತನ್ನ ಪ್ರೇಯಸಿಯ ಜಪ ಮಾಡುತ್ತ ಸತ್ತು ಹೋಗುತ್ತಾನೆ.

ಮತ್ತೆ ಕೆಲವು ದಿನಗಳ ನಂತರ ದೀಪಾಗೆ ಶಾಂತು ಅನ್ನೋ ಹುಡುಗನ ಜೊತೆ ಲವ್ ಆಗುತ್ತೆ. ದೀಪಾ ಮತ್ತು ಶಾಂತು ಪ್ರೀತಿಯ ಹಕ್ಕಿಗಳಾಗಿ ತುಂಬ ಹ್ಯಾಪಿಯಾಗಿ ಇರ್ತಾರೆ. ಹಾಗೆ ಸ್ವಲ್ಪ ದಿನಗಳ ನಂತರ ಇಬ್ಬರು ಒಂದು ರಸ್ತೆಯಲ್ಲಿ ಬರುತ್ತಾ ಇರ್ತಾರೆ.

ಆಗ ಶಾಂತು ದೀಪಾಳನ್ನು ಕೇಳ್ತಾನೆ ನಿಂಗೆ ವಿಶ್ವ ಅನ್ನೋ ಹುಡುಗ ಗೊತ್ತಾ. ಈ ರಸ್ತೆಯಲ್ಲಿ
ಅಪಘಾತವಾಗಿ ಸತ್ತೋಗಿದ್ದ ಅಂತ ಆಗ ಇಲ್ಲಪಾ ನಂಗೆ ಯಾರು ಗೊತ್ತಿಲ್ಲ ಅಂತಾಳೆ.

ಆಗ ಶಾಂತು ಹೇಳ್ತಾನೆ ವಿಶ್ವ ನನಿಗೂ ಸರಿಯಾಗಿ ಗೊತ್ತಿಲ್ಲಪ್ಪ ನಂಗೆ ಒಂದು ವರ್ಷದ ಹಿಂದೆ ಹಾರ್ಟ್ ಅಪರೇಷೆನ್ ಆದಾಗ ಅವನದ್ದೇ ಹಾರ್ಟ್ ನಂಗೆ ಹಾಕಿದರಂತೆ ತುಂಬಾ ಒಳ್ಳೆ ಹುಡುಗ ಅಂತೆ ಐ ಲೈಕ್ ಹಿಮ್ ಅಂತಾನೆ.

ಆದರೆ ನಾವು ಇದನ್ನು ಓದಿದಾಗ ಅನ್ಸೋದು ಒಂದೇ ಮಾತು ಮುದ್ದಾದ ಮತ್ತು ನಿಷ್ಕಲ್ಮಶವಾದ ಪ್ರೀತಿ ಯಾವತ್ತು ಮಿಸ್ ಆಗಲ್ಲ ನಮ್ಮ ಪ್ರೀತಿ ಯಾರಿಗೆ ಸೇರಬೇಕೋ ಅವರಿಗೆ ಸೇರೋದು ಖಂಡಿತ ನಿಜ ಅನ್ಸುತ್ತೆ ನೀವು ಏನ್ ಅಂತೀರಾ.

WhatsApp Group Join Now

Leave a Reply

Your email address will not be published. Required fields are marked *