ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ನಂಬರ್ ಬದಲಿಸಲು ಮುನ್ನ ಯೋಚನೆ ಮಾಡಿ. ಸ್ವಲ್ಪ ಮೈಮರೆತರೂ ನಿಮ್ಮ ಖಾತೆಯಲ್ಲಿರುವ ಹಣಕ್ಕೆ ಕನ್ನ ಬೀಳುವುದು ಖಚಿತ. ಏಕೆಂದರೆ ರಾಜ್ಯದಲ್ಲೇ ನಡೆದ ಘಟನೆ ಬ್ಯಾಂಕ್ ಖಾತೆದಾರರನ್ನು ಆತಂಕಕ್ಕೆ ತಳ್ಳಿದೆ. ವ್ಯಕ್ತಿಯೊಬ್ಬರು ಬದಲಿಸಿದ್ದ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದ ಮೊಬೈಲ್ ಸಂಖ್ಯೆಯನ್ನು ಪಡೆದ ಮತ್ತೋರ್ವ ವ್ಯಕ್ತಿ ಪೇಟಿಎಂ ವ್ಯಾಲೆಟ್ ಬಳಸಿ ಅವರ ಖಾತೆಗೆ ಕನ್ನ ಹಾಕಿರುವ ಪ್ರಕರಣ ನಡದೇ ಹೋಗಿದೆ. ಈ ಸಂಬಂಧ ಸೈಬರ್ ಅಪರಾಧ ತಡೆಗಟ್ಟಲು ಮತ್ತು ಭದ್ರತೆ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಈಗಾಗಲೇ ಲಿಂಕ್ ಆದೇಶ ನೀಡಿ ಸುತ್ತೋಲೆ ಹೊರಡಿಸಿದೆ. ಈ ಸೇವೆಗಳನ್ನು ಪಡೆಯುವಾಗ ಮೊಬೈಲ್ಗೆ ಬರುವ ಒನ್ ಟೈಮ್ ಪಾಸ್ವರ್ಡ್(ಒಟಿಪಿ) ಅತಿ ಮುಖ್ಯವಾಗಿರುತ್ತವೆ. ಇದರ ಮೇಲೆ ನಿಗಾ ವಹಿಸದೆ ಇದ್ದರೆ ಬ್ಯಾಂಕ್ ಖಾತೆ ಖಾಲಿ ಆಗಲಿದೆ.
ಏನಿದು ಘಟನೆ: ಕೊಡಗು ಜಿಲ್ಲೆ ಕುಶಾಲನಗರ ಮೂಲದ ದುಬೈ ನಿವಾಸಿ ಅಶ್ರಫ್ ಎಂಬುವವರು ತನ್ನ ಬ್ಯಾಂಕ್ ಖಾತೆ ಮತ್ತು ಪೇಟಿಎಂ ವ್ಯಾಲೆಟ್ಗೆ ಲಿಂಕ್ ಮಾಡಿದ್ದರು. ಇನ್ನು ಇತ್ತೀಚೆಗಷ್ಟೇ ತಮ್ಮ ಮೊಬೈಲ್ ನಂಬರನ್ನು ಸ್ಥಗಿತ ಮಾಡಿಕೊಳ್ಳುವ ಮೂಲಕ ಹಣ ಕಳೆದುಕೊಂಡಿದ್ದಾರೆ. ಅಶ್ರಫ್ ತಮ್ಮ ಮೊಬೈಲ್ ನಂಬರ್ ಅನ್ನು ಕುಶಾಲನಗದ ಬ್ಯಾಂಕ್ ಒಂದರ ಖಾತೆಗೆ ಮತ್ತು ಪೇಟಿಎಂ ವ್ಯಾಲೆಟ್ಗೆ ಲಿಂಕ್ ಮಾಡಿದ್ದರು. ನಂತರ ಕೆಲವು ದಿನ ಆ ಮೊಬೈಲ್ ನಂಬರ್ ನನ್ನು ಬಳಸದೇ ಮತ್ತೊಂದು ಸಿಮ್ ಬಳಸಲು ಆರಂಭಿಸಿದ್ದಾರೆ. ನಂಬರ್ ರದ್ದಾಗಿದೆ. ಆಗ ಹೊಸ ನಿಮ್ ಖರೀದಿಸಲು ಹೋದ ದಾವಣಗೆರೆಯ ಭರತ್ ಎಂಬ ಮತ್ತೋರ್ವ ವ್ಯಕ್ತಿಗೆ ಅಶ್ರಫ್ ಅವರ ಹಳೆ ಮೊಬೈಲ್ ನಂಬರ್ ಸಿಕ್ಕಿದೆ. ಭರತ್ ಹೊಸ ಸಿಮ್ ಹಾಕಿಕೊಂಡಾಗ ಆಶ್ರಫ್ ಬ್ಯಾಂಕಿಂಗ್ ಸಂದೇಶಗಳು ಹೋಗಲು ಆರಂಭವಾಗಿದೆ.
ಆಗ ಸಿಕ್ಕಿದೆ ಚಾನ್ಸ್ ಅಂತ ಉಪಯೋಗಿಸಿಕೊಂಡ ಭರತ್, ತಮ್ಮ ಮೊಬೈಲ್ಗೆ ಪೇಟಿಎಂ ವ್ಯಾಲೆಟ್ ಆಕ್ಟಿವ್ ಮಾಡಿಕೊಂಡಿದ್ದು, ಆಶ್ರಫ್ ಬ್ಯಾಂಕ್ ಖಾತೆ ದಕ್ಕೆ ಸಿಂಕ್ ಆಗಿತ್ತು. ಆಗ ತಕ್ಷಣವೇ ಭರತ್ ಪೇಟಿಎಂ ವ್ಯಾಲೆಟ್ನಿಂದ ತನ್ನ ಬ್ಯಾಂಕ್ ಖಾತೆಗೆ 4 ದಿನಗಳಲ್ಲಿ 79,994 ರೂ.ಗಳನ್ನು ವರ್ಗಾವಣೆ ಮಾಡಿಕೊಂಡಿದ್ಧಾರೆ.
ನಿಮ್ಮ ನಂಬರ್ ಬದಲಿಸಿದರೆ ಏನು ಮಾಡಬೇಕು ಅನ್ನೋದು ಇಲ್ಲಿದೆ ನೋಡಿ: ಮೊಬೈಲ್ ಸಂಖ್ಯೆ ಸ್ಥಗಿತಗೊಂಡಾಗ ಕಂಪನಿಗೆ ಕರೆ ಮಾಡಿ ದೂರು ನೀಡಿ, ಹತ್ತಿರದ ಶಾಪ್ಗೆ ಹೋಗಿ ಹೊಸ ಸಿಮ್ ಕಾರ್ಡ್ ಖರೀದಿಸಿ, ಬ್ಯಾಂಕ್ಗೆ ಹೋಗಿ ಹಳೆ ನಂಬರ್ ತೆಗೆಸಿ ಹೊಸ ಸಂಖ್ಯೆ ಲಿಂಕ್ ಮಾಡಿ.ಬ್ಯಾಂಕಿಂಗ್ ಸೇವೆಗಳ ಸಂದೇಶ ಮೊಬೈಲ್ಗೆ ಬರುವಂತೆ ಸೇವೆ ಪಡೆಯಿರಿ.
ಸಿಮ್ ಕಂಪನಿಗಳು ಸತತ 3 ತಿಂಗಳು ಸ್ಥಗಿತಗೊಳ್ಳುವ ಸಿಮ್ ಹೊಸ ಗ್ರಾಹಕನಿಗೆ ಮಾರಾಟ ಮಾಡುವ ಅಧಿಕಾರ ಹೊಂದಿವೆ ಎಂಬ ಮಾಹಿತಿ ಇದೆ. ಸಿಮ್ ಜತೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ, ಆಧಾರ್ ಇನ್ನಿತರ ಎಲ್ಲ ಸಂಪರ್ಕವನ್ನು ಕಡಿತ ಮಾಡಿ ಬಳಿಕವೇ ಹೊಸ ಗ್ರಾಹಕನಿಗೆ ಮಾರಾಟ ಮಾಡಬೇಕು ಎಂಬ ಕಾನೂನನ್ನು ಕೇಂದ್ರ ಸರ್ಕಾರ ತರಬೇಕೆಂಬುದು ಸೈಬರ್ ಕ್ರೈಂ ಪೊಲೀಸ್ ಅಧಿಕಾರಿಗಳ ಅಭಿಪ್ರಾಯ. ಸಂಗ್ರಹ ಮಾಹಿತಿ.