ಹೌದು ಎಲ್ಲರೂ ತಮ್ಮ ಮನೆಯ ಮುಂದೆ ಬೆಳಗಿನ ಸಮಯದಲ್ಲಿ ಮತ್ತು ಹಬ್ಬ ಹರಿದಿನಗಳಲ್ಲಿ ಮನೆ ಮುಂದೆ ಚಂದ ಕಾಣಲಿ ಅಂತ ವಿವಿಧ ರೀತಿಯಾದ ರಂಗೋಲಿಗಳನ್ನು ಬಿಡಿಸುತ್ತಾರೆ, ಆದರೆ ಈ ರಂಗೋಲಿಗಳಿಗೂ ಒಂದು ಮಹತ್ವ ಇದೆ ಅನ್ನೋದನ್ನ ಜನ ಮರೆತಿದ್ದಾರೆ ಅನ್ಸುತ್ತೆ ಯಾಕೆ ಏನು ಅನ್ನೋದು ಮುಂದೆ ಇದೆ ನೋಡಿ.
ಮನೆಯ ಮುಂದಿನ ನೆಲವನ್ನು ಪೊರಕೆಯಿಂದ ಗುಡಿಸುವಾಗ ನೆಲದ ಮೇಲೆ ಸೂಕ್ಷ್ಮ ರೇಖೆಗಳು ನಿರ್ಮಾಣವಾಗಿ ಅವುಗಳಲ್ಲಿ ಒಂದು ರೀತಿಯ ಸ್ಪಂದನಗಳು ನಿರ್ಮಾಣವಾಗುತ್ತವೆ. ಈ ರೇಖೆಗಳು ಅನಿಯುತವಾಗಿರುವುದರಿಂದ ಅವುಗಳ ಸ್ಪಂದನಗಳು ಸಹ ಅನಿಯುತವಾಗಿರುತ್ತವೆ. ಈ ಸ್ಪಂದನಗಳು ಶರೀರಕ್ಕೆ, ಕಣ್ಣುಗಳಿಗೆ ಮತ್ತು ಮನಸ್ಸಿಗೆ ಹಾನಿಕಾರಕವಾಗಿರುತ್ತವೆ. ಈ ಅನಿಷ್ಟ ಸ್ಪಂದನಗಳನ್ನು ತಡೆಗಟ್ಟಲು ನೆಲದ ಮೇಲೆ ರಂಗೋಲಿಯಿಂದ ಕೋನಗಳನ್ನು ಮತ್ತು ಶುಭಚಿಹ್ನೆಗಳನ್ನು ಬಿಡಿಸುತ್ತಾರೆ.
ರಂಗೋಲಿ ಬಿಡಿಸುವಾಗ ಈ ರೀತಿಯ ರಂಗೋಲಿಗಳನ್ನು ಬಿಡಿಸಬಾರದು, ದೇವರು ದೇವತೆಗಳ ರೂಪದ ರಂಗೋಲಿಯನ್ನು ಬಿಡಿಸಬಾರದು ಯಾಕೆಂದರೆ ರಂಗೋಲಿಗೆ ಸಗುಣ ಈಶ್ವರೀ ಶಕ್ತಿಯ ಬಂಧನವು ಬರುತ್ತದೆ. ಇದರಿಂದ ರಂಗೋಲಿಯ ಕಾರ್ಯಕ್ಷಮತೆಯು ಕಡಿಮೆಯಾಗುತ್ತದೆ.
ಆದ್ದರಿಂದ ಶುಭ ಚಿನ್ನೆಗಳಾದ ಸ್ವಸ್ತಿಕ ಅಥವಾ ಚುಕ್ಕೆಗಳಿರುವ ರಂಗೋಲಿಗೆ ನಿರ್ಗುಣ ಶಕ್ತಿಯ ಆಧಾರವಿರುವುದರಿಂದ ಅದರ ಕ್ಷಮತೆಯು ಹೆಚ್ಚಾಗಿ, ಪ್ರಕಟ ಶಕ್ತಿಯಿಂದ ಹೆಚ್ಚು ಪ್ರಮಾಣದಲ್ಲಿ ಕಾರ್ಯವನ್ನು ಮಾಡಲು ಸಾಧ್ಯವಾಗುತ್ತದೆ.