ಇದು ನಿಮಗೆ ತಿಳಿದಿರಲಿ ಏಂಕೆದರೆ ನಮ್ಮ ಶರೀರದಲ್ಲಿ ಪ್ರವಹಿಸುವ ರಕ್ತದಲ್ಲಿರುವ ಕೆಲವು ವ್ಯರ್ಥ ಪದಾರ್ಥಗಳ ಮಿಶ್ರಣವೇ ಮೂತ್ರ. ವ್ಯರ್ಥ ಪದಾರ್ಥಗಳನ್ನು ಮೂತ್ರ ಪಿಂಡಗಳು ಸೋಸುತ್ತವೆ. ಹೀಗೆ ಬಿಡುಗಡೆಯಾದ ನಿಮ್ಮ ಮೂತ್ರ ನಿಮ್ಮ ದೇಹದಮೂತ್ರಾಶಯವನ್ನು ತಲುಪುತ್ತದೆ. ಮೂತ್ರಾಶಯ ತುಂಬಿದ ಕೂಡಲೇ, ಮೂತ್ರ ವಿಸರ್ಜನೆ ಮಾಡಬೇಕೆಂಬ ಸಂಕೇತ ಮಿದುಳಿನಿಂದ ಬರುತ್ತದೆ.
ಆಗ ನಾವು ಮೂತ್ರ ವಿಸರ್ಜಿಸುತ್ತೇವೆ. ಮೂತ್ರ ವಿಸರ್ಜನೆಯ ವಿಷಯಕ್ಕೆ ಬಂದರೆ, ಸ್ತ್ರೀಯರು ಹಾಗೂ ಪುರಷರು ಭಿನ್ನ ರೀತಿಯಲ್ಲಿ ವಿಸರ್ಜಿಸುತ್ತಾರೆ. ಸ್ತ್ರೀಯರು ಕುಳಿತು ವಿಸರ್ಜಿಸಿದರೆ, ಪುರುಷರು ನಿಂತುಕೊಂಡು ಮೂತ್ರ ವಿಸರ್ಜಿಸುತ್ತಾರೆ. ಕೆಲವು ಪುರುಷರು ಸಹ ಕುಳಿತೇ ಮೂತ್ರ ವಿಸರ್ಜಿಸುತ್ತಾರೆ. ನಿಮಗೊಂದು ವಿಷಯ ಗೊತ್ತಾ? ಪುರುಷರು ನಿಂತುಕೊಂಡಲ್ಲದೆ ಕುಳಿತು ಮೂತ್ರ ವಿಸರ್ಜಿಸುವುದು ಒಳ್ಳೆಯದಂತೆ.
ಪ್ರಪಂಚದಾದ್ಯಂತ ಇರುವ ಪುರುಷರಲ್ಲಿ ಮೂರನೇ ಒಂದು ಭಾಗ ಕುಳಿತೇ ಮೂತ್ರ ವಿಸರ್ಜಿಸುತ್ತಾರಂತೆ. ಹೀಗೆ ಮೂತ್ರ ವಿಸರ್ಜನೆ ಮಾಡುವವರಲ್ಲಿ ಬಹಳಷ್ಟು ಮಂದಿ ಆರೋಗ್ಯಕರವಾದ ಜೀವನ ನಡೆಸುತ್ತಿದ್ದಾರಂತೆ. ಅನೇಕ ಜನರಿಗೆ ಮೂತ್ರಾಶಯ ಸಂಬಂಧಿ ಸಮಸ್ಯೆಗಳು ಇಲ್ಲವಂತೆ. ಅಷ್ಟೇಕೆ ನಮ್ಮ ತಾತ, ಮುತ್ತಾತಂದಿರೂ ಕುಳಿತೇ ಮೂತ್ರ ವಿಸರ್ಜನೆ ಮಾಡುತ್ತಿದ್ದುದನ್ನು ಗಮನಿಸಿದ್ದೀರಾ? ಆದರೆ, ಈಗ ಬಹಳಷ್ಟು ಜನರು ನಿಂತೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರಂತೆ.
ಸಾಮಾನ್ಯವಾಗಿ ಮೂತ್ರದಲ್ಲಿ ಇರುವುದು ವ್ಯರ್ಥ ಪದಾರ್ಥಗಳೇ. ವ್ಯಾಧಿಗ್ರಸ್ತರ ಮೂತ್ರದಲ್ಲಿ ಕೆಲವೊಮ್ಮೆ ಬ್ಯಾಕ್ಟೀರಿಯಾಗಳು ಇರುತ್ತವೆ. ಇದರಿಂದ ಅವರು ನಿಂತು ಮೂತ್ರ ವಿಸರ್ಜಿಸಿದರೆ, ಬ್ಯಾಕ್ಟೀರಿಯಾಗಳು ಹರಡಿಕೊಳ್ಳುತ್ತವೆ. ಹೀಗೆ ಹರಡಿರುವ ಬ್ಯಾಕ್ಟೀರಿಯಾಗಳು ಇತರರ ಶರೀರದೊಳಗೆ ಸುಲಭವಾಗಿ ಪ್ರವೇಶಿಸುತ್ತವೆ. ಆದುದರಿಂದ ಕುಳಿತು ಮೂತ್ರ ವಿಸರ್ಜಿಸಿದರೆ, ಬ್ಯಾಕ್ಟೀರಿಯಾಗಳು ಹರಡದೆ, ಒಂದೇ ಕಡೆ ಇರುತ್ತವೆ.
ನೀವು ಕುಳಿತು ಮೂತ್ರ ವಿಸರ್ಜಿಸುವುದರಿಂದ ನಿಮ್ಮ ಶರೀರಕ್ಕೆ ಶುಭ್ರತೆಯನ್ನು ನೀಡಿದಂತಾಗುತ್ತದೆ. ಮೂತ್ರಾಶಯ, ಲೈಂಗಿಕ ಸಮಸ್ಯೆಯುಳ್ಳವರು ಕುಳಿತು ಮೂತ್ರ ವಿಸರ್ಜಿಸಿದರೆ ನಿಮ್ಮ ಆಯಾ ಸಮಸ್ಯೆಗಳು ಕಡಿಮೆಯಾಗುವ ಅವಕಾಶಗಳು ಹೆಚ್ಚಾಗಿರುತ್ತವೆ. ಕುಳಿತು ಮೂತ್ರ ವಿಸರ್ಜಿಸಿದರೆ, ಮೂತ್ರಾಶಯದಿಂದ ಮೂತ್ರ ಸಂಪೂರ್ಣ ಹೊರ ಹೋಗುತ್ತದೆ. ಇದರಿಂದ ಮೂತ್ರ ಪಿಂಡಗಳಲ್ಲಿ ಕಲ್ಲುಗಳು, ಮೂತ್ರಾಶಯ ಸಮಸ್ಯೆಗಳಿರುವವರಿಗೆ ಒಳಿತಾಗುತ್ತದೆ.