WhatsApp Group Join Now

ನಮಸ್ತೇ ಪ್ರಿಯ ಓದುಗರೇ, ಚಹಾ ಭಾರತದ ಅತ್ಯಂತ ಜನಪ್ರಿಯವಾಗಿದೆ. ಚಿಕ್ಕ ಹಳ್ಳಿಯಿಂದ ಹಿಡಿದು ದೊಡ್ಡ ನಗರದವರೆಗೂ ಚಹಾ ಎಲ್ಲವೆಡೆಗೆ ಲಭ್ಯವಾಗಿ ದೊರೆಯುತ್ತದೇ. ಅದರಲ್ಲೂ ಶುಂಠಿ ಹಾಕಿದ ಅದ್ರಕ್ ವಾಲಿ ಚಾಯ್ ಎಂದರೆ ಎಲ್ಲರಿಗೂ ಇಷ್ಟ. ಶುಂಠಿ ಕೇವಲ ರುಚಿಕಾರಕ ಮಾತ್ರವಲ್ಲ, ಶೀತ ಜ್ವರ ಮೊದಲಾದ ಸಾಮಾನ್ಯ ಕಾಯಿಲೆಗಳಿಗೆ ಔಷಧಿಯೂ ಆಗಿದೆ. ಆಯುರ್ವೇದವಂತೂ ಸಾವಿರಾರು ವರ್ಷಗಳಿಂದ ಶುಂಠಿಯನ್ನು ಔಷಧಿಯ ರೂಪದಲ್ಲಿ ಬಳಸುತ್ತಾ ಬಂದಿದೆ. ಆದರೆ ಈ ಶುಂಠಿ ಕೆಲವರ ಆರೋಗ್ಯದ ಮೇಲೇ ಪರಿಣಾಮವನ್ನು ಬೀರುತ್ತದೆ. ಶುಂಠಿ ಎಲ್ಲರಿಗೂ ಆಗಿ ಬರುವುದಿಲ್ಲ ಅವರು ತಮ್ಮ ದೇಹಕ್ಕೆ ಅನುಗುಣವಾಗಿ ಆಹಾರವನ್ನು ಸೇವನೆ ಮಾಡಬೇಕು. ಹಾಗಾದರೆ ಈ ಶುಂಠಿ ಯಾರಿಗೆ ಸೂಕ್ತವಲ್ಲ. ಯಾರು ಈ ಶುಂಠಿಯನ್ನು ಸೇವನೆ ಮಾಡಬಾರದು ಅನ್ನುವ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನಿಮಗೆ ತಿಳಿಸಿ ಕೊಡುತ್ತೇವೆ ಬನ್ನಿ. ಮೊದಲನೆಯದು ನೀವು ತುಂಬಾ ಬೆವರುತ್ತಾ ಇದ್ದರೆ ಮತ್ತು ನಿಮ್ಮ ದೇಹವು ತುಂಬಾನೆ ಉಷ್ಣದಾಯಕ ಆಗಿದ್ದರೆ ಶುಂಠಿಯನ್ನು ಸೇವನೆ ಮಾಡಬೇಡಿ.

ಬೇಸಿಗೆಯಲ್ಲಿ ದೇಹವು ಮತ್ತಷ್ಟು ಹೀಟ್ ಆಗುತ್ತದೆ ಹೀಗಾಗಿ ಇಂಥಹ ಸಮಯದಲ್ಲಿ ನೀವು ಶುಂಠಿಯನ್ನು ಮತ್ತಷ್ಟು ಸೇವನೆ ಮಾಡಿದರೆ, ನಿಮ್ಮ ದೇಹವು ಮತ್ತಷ್ಟು ಉಷ್ಣತೆಗೆ ಈಡಾಗುತ್ತದೆ. ಹೀಗಾಗಿ ದೇಹದ ಉಷ್ಣತೆ ಹೆಚ್ಚಾದಂತೆ ನಿಮಗೆ ಅನೇಕ ರೀತಿಯ ಸಮಸ್ಯೆಗಳು ಎದುರಾಗುತ್ತವೆ, ಕೂದಲು ಉದುರುವುದು, ಮೂಗಿನಿಂದ ರಕ್ತಸ್ರಾವ ಆಗುವುದು, ಹಾಗೂ ಮೊಡವೆಗಳು ಮೂಡುವುದು ಆಗುತ್ತದೆ. ಹಾಗಾಗಿ ಶುಂಠಿ ಸೇವನೆ ಮಾಡಬೇಡಿ. ಇನ್ನು ನೀವು ಶುಂಠಿ ಚಹಾ ಪ್ರಿಯರಿದ್ದರೆ ಅದನ್ನು ಮಿತಿಯಾಗಿ ಕುಡಿಯಬೇಕು.ಏಕೆಂದರೆ ಇದು ಜೀರ್ಣಾಂಗದ ಪರಿಣಾಮವನ್ನು ಬೀರುತ್ತದೆ. ಜಠರದಲ್ಲಿ ಉರಿ ಕಂಡು ಎದೆಯೂರಿ ಅಂತಹ ಅನೇಕ ಸಮಸ್ಯೆಗಳು ಕಂಡುಬರುತ್ತವೆ. ಶುಂಠಿ ಅಧಿಕವಾಗಿ ಸೇವನೆ ಮಾಡುವುದರಿಂದ ಅಸಿಡಿಟಿ ಹೆಚ್ಚುತ್ತದೆ ಮತ್ತು ತುರಿಕೆ ಕೂಡ ಶುರು ಆಗುತ್ತದೆ. ಆದ್ದರಿಂದ ಹೊಟ್ಟೆಗೆ ಸಂಭಂದ ಪಟ್ಟ ಯಾವುದೇ ಸಮಸ್ಯೆಗಳಿದ್ದರೂ ಕೂಡ ಅಧಿಕವಾಗಿ ಶುಂಠಿ ಸೇವನೆ ಮಾಡಬೇಡಿ. ಇನ್ನೂ, ರಕ್ತದೊತ್ತಡ ಸಾಮಾನ್ಯಕ್ಕಿಂತ ಕಡಿಮೆ ಇರುವ ಜನರಿಗೆ ಶುಂಠಿ ಚಹಾ ತುಂಬಾ ಹಾನಿಕಾರಕವಾಗಿದೆ. ಶುಂಠಿ ಚಹಾದ ಅತಿಯಾದ ಸೇವನೆಯಿಂದಾಗಿ, ಜನರು ತಲೆತಿರುಗುವಿಕೆ ಮತ್ತು ದುರ್ಬಲತೆಯನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಆದ್ದರಿಂದ ರಕ್ತದೊತ್ತಡ ಸಾಮಾನ್ಯಕ್ಕಿಂತ ಕಡಿಮೆ ಇರುವ ಜನರು ಶುಂಠಿ ಚಹಾವನ್ನು ಪದೇ ಪದೇ ಸೇವಿಸದಿರುವುದು ಉತ್ತಮ.

 

ಇನ್ನು ನಿಮಗೇನಾದರೂ ನೀದ್ರಾಹೀನತೆ ಸಮಸ್ಯೆ ಇದ್ದರೆ ರಾತ್ರಿ ಹೊತ್ತು ಮಲಗುವಾಗ ಶುಂಠಿ ಚಹಾ ಕುಡಿಯಬೇಡಿ. ಏಕೆಂದರೆ ಒಂದು ವೇಳೆ ರಾತ್ರಿ ನೀವು ಶುಂಠಿ ಚಹಾ ಕುಡಿದರೆ ಮತ್ತಷ್ಟು ನಿದ್ರಾಹೀನತೆ ಸಮಸ್ಯೆಗೆ ತುತ್ತಾಗುತ್ತೀರಿ. ಆದ್ದರಿಂದ ಈ ಸಮಸ್ಯೆ ಇದ್ದವರು ಶುಂಠಿ ಚಹಾ ಕುಡಿಯಬೇಡಿ. ಶುಂಠಿಯನ್ನು ಅತಿಯಾಗಿ ಸೇವಿಸಿದರೆ ಎದೆಯುರಿ, ಹೊಟ್ಟೆಯುರಿ ಹಾಗೂ ಹುಳಿತೇಗು ಎದುರಾಗುವ ಸಾಧ್ಯತೆ ಹೆಚ್ಚುತ್ತದೆ ಎಂದು ವೈದ್ಯರು ತಮ್ಮ ಅನುಭವದಿಂದ ತಿಳಿಸುತ್ತಾರೆ.  ಇನ್ನೂ ನಿಮಗೆ ಪೈಲ್ಸ್ ಅನ್ನುವ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಮೇರೆಗೆ ಈ ಶುಂಠಿಯನ್ನು ಸೇವನೆ ಮಾಡಿರಿ. ಏಕೆಂದರೆ ಶುಂಠಿ ಚಹಾ ಕುಡಿದರೆ ದೇಹವು ಮತ್ತಷ್ಟು ಹೀಟ್ ಆಗುತ್ತದೆ. ಇದರಿಂದ ಪೈಲ್ಸ್ ಸಮಸ್ಯೆಯು ಮತ್ತಷ್ಟು ಹೆಚ್ಚುತ್ತದೆ. ಆದ್ದರಿಂದ ಶುಂಠಿ ಚಹಾ ತ್ಯಜಿಸುವುದು ಒಳ್ಳೆಯದು.ಗರ್ಭವತಿಯರು ಸೇವಿಸುವ ಆಹಾರ ಕೇವಲ ಆಕೆಗೆ ಮಾತ್ರವಲ್ಲ, ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಆರೋಗ್ಯವನ್ನೂ ಬಾಧಿಸಬಹುದು. ಶುಂಠಿಯನ್ನು ದಿನಕ್ಕೆ ಗರಿಷ್ಟ 1500 ಮಿಲಿಗ್ರಾಂ ನಷ್ಟು ಮಾತ್ರವೇ ಸೇವಿಸಬಹುದು ಎಂದು ತಜ್ಞರು ವಿವರಿಸುತ್ತಾರೆ. ಒಂದು ವೇಳೆ ಈ ಪ್ರಮಾಣ ಹೆಚ್ಚಾದರೆ ಗರ್ಭಪಾತವಾಗುವ ಸಾಧ್ಯತೆ ಹೆಚ್ಚುತ್ತದೆ. ಆದ್ದರಿಂದ ಗರ್ಭವತಿಯರು ಅತಿಯಾಗಿ ಶುಂಠಿ ಸೇವನೆ ಮಾಡಬಾರದು. ನೋಡಿದ್ರಲಾ ಶುಂಠಿಯನ್ನು ಯಾರೆಲ್ಲ ಮತ್ತು ಯಾಕೆ ಸೇವನೆ ಮಾಡಬಾರದು ಅಂತ. ಹಾಗಾದರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಶುಭದಿನ.

WhatsApp Group Join Now

Leave a Reply

Your email address will not be published. Required fields are marked *