ಸಾಮಾನ್ಯವಾಗಿ ಬೆಂಕಿಯ ಜ್ವಾಲೆಯ ಬಣ್ಣವು ಹೆಚ್ಚಾಗಿ ಕಿತ್ತಾಳೆ ಬಣ್ಣದ್ದು ಆಗಿರುತ್ತದೆ. ಆದರೆ ನೀವು ಗಮನಿಸಿದರೆ ಗ್ಯಾಸ್ ಸ್ಟೋವ್ನಿಂದ ಹೊರಬರುವ ಜ್ವಾಲೆಯು ನೀಲಿ ಬಣ್ಣದ್ದು ಆಗಿರುತ್ತದೆ. ಸಾಮಾನ್ಯವಾಗಿ ಬೆಂಕಿ ಉರಿಯಲು ಇಂಧನ ಆಮ್ಲಜನಕ ಮತ್ತು ಶಾಖದ ಅವಶ್ಯಕತೆ ಇರುತ್ತದೆ ಆದರೆ ಜ್ವಾಲೆಯ ಬಣ್ಣವು ಎರಡು ವಿಷಯಗಳ ಮೇಲೆ ಮಾತ್ರ ಅವಲಂಬಿತವಾಗಿರುತ್ತದೆ ಮೊದಲನೆಯದು ಯಾವ ರೀತಿಯ ಇಂಧನ ಬಳಸುತ್ತಿದ್ದಾರೆ ಎಂಬುದರ ಮೇಲೆ.
ಜ್ವಾಲಿಯ ಬಣ್ಣವು ಬೆಂಕಿಯನ್ನು ಉಂಟುಮಾಡುವ ಇಂಧನದ ಪ್ರಕಾರವನ್ನು ಅವಲಂಬಿಸಿರುತ್ತದೆ ಯಾವ ಸ್ಟವನ್ನು ಸಾಮಾನ್ಯವಾಗಿ ಎಲ್ ಪಿ ಜಿ ಯನ್ನು ಇಂಧನವಾಗಿ ಬಳಸುತ್ತಾರೆ. ಬ್ಯುಟನ್ನಂತಹ ಅನಿಲ ಗುಣಗಳನ್ನು ಹೊಂದಿರುತ್ತದೆ ಈ ಹೈಡ್ರೋಕಾರ್ಬನ್ ಅನಿಲಗಳು ಇಂಗಾಲವನ್ನು ಉತ್ಪಾದಿಸದೆ ಸಂಪೂರ್ಣವಾಗಿ ಉರಿಯುತ್ತದೆ.
ಇನ್ನು ಎರಡನೆಯದು ಆಮ್ಲಜನಕ ಗ್ಯಾಸ್ ಸ್ಟವ್ ಬರ್ನರ್ ಗಳನ್ನು ದಹನ ಪ್ರಕ್ರಿಯೆಗೆ ಅಗತ್ಯ ಪ್ರಮಾಣದಲ್ಲಿ ಆಮ್ಲಜನಕವನ್ನು ಪಡೆಯುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದರಿಂದ ಇಂಧನವನ್ನು ಅದರ ಕನಿಷ್ಠ ತೀಕ್ಷ್ಣತೆಯಿಂದ ಸುಡುವಂತೆ ಮಾಡುತ್ತವೆ. ಮತ್ತು ಯಾವುದೇ ವ್ಯರ್ಥವನ್ನು ಬಿಡುವುದಿಲ್ಲ ಮರದ ಕಟ್ಟಿಗೆಗಳನ್ನು ಬಳಸಿ ಬೆಂಕಿಯನ್ನು ಹಚ್ಚಿದಾಗ ಜ್ವಾಲೆಯ ಬಣ್ಣವು ಕಿತ್ತಾಳೆ ಬಣ್ಣದಲ್ಲಿ ಉರಿಯುವುದನ್ನು ನಾವು ಆಗಾಗ ನೋಡಿದ್ದೇವೆ. ಏಕೆಂದರೆ ಈ ದಹನ ಪ್ರಕ್ರಿಯೆಯು ಇಂಗಾಲವನ್ನು ಉಂಟುಮಾಡುತ್ತದೆ ಆಮ್ಲಜನಕದ ಸರಿಯಾದ ಪ್ರಮಾಣವನ್ನು ಸ್ವೀಕರಿಸುವುದಿಲ್ಲ ಮತ್ತು ಸುಡದ ಇಂಗಾಲದ ಸಣ್ಣ ಕಣಗಳು ಕಿತ್ತಾಳೆ ಬಣ್ಣದಲ್ಲಿ ಕಾಣಲು ಕಾರಣವಾಗಿದೆ.
ಇನ್ನ ಸಾಮಾನ್ಯವಾಗಿ ನೋಡುವ ಹೊರ ವಲಯದಲ್ಲಿ ಸಾಕಷ್ಟು ಪ್ರಮಾಣದ ಆಮ್ಲಜನಕದ ಕಾರಣದಿಂದ ಈ ಭಾಗದಲ್ಲಿ ಸಂಪೂರ್ಣ ದಹನ ಕ್ರಿಯೆ ನಡೆಯುವುದರಿಂದ ಇದು ನೀಲಿ ಬಣ್ಣದ್ದಾಗಿದೆ. ಇದು ಜ್ವಾಲೆಯ ಅತ್ಯಂತ ಬಿಸಿಯಾದ ಭಾಗವಾಗಿದೆ.
ಮಧ್ಯ ವಲಯದಲ್ಲಿ ಆಮ್ಲಜನಕದ ಕೊರತೆಯಿಂದ ಈ ಭಾಗದಲ್ಲಿ ಅಪೂರ್ಣ ದಹನ ಕ್ರಿಯೆ ನಡೆಯುವುದರಿಂದ ಮಧ್ಯ ವಲಯದ ಬಣ್ಣ ಹಳದಿ.
ಇದು ಜ್ವಾಲೆಯ ಹೊರ ಭಾಗಕ್ಕಿಂತ ಕಡಿಮೆ ಬಿಸಿ ಭಾಗವಾಗಿದೆ. ಇತ್ತೀಚಿಗೆ ನಮ್ಮ ಗ್ಯಾಸ್ ನ ಬೆಲೆ ಗಗನಕ್ಕೆ ಏರುತ್ತಿದೆ ಹಾಗಾಗಿ ನೀವು ಗ್ಯಾಸ್ ನ ಎಷ್ಟು ಉಳಿತಾಯ ಮಾಡುತ್ತೀರೋ ಅಷ್ಟು ನಿಮಗೆ ಲಾಭ ಕೊಡುತ್ತದೆ. ಗ್ಯಾಸ್ ನ್ನು ಉಳಿತಾಯ ಮಾಡಲು ನಿಯಮಿತವಾಗಿ ಬರ್ನರ್ ನ್ನು ಶುಚಿ ಮಾಡುತ್ತಲಿರಬೇಕು. ಬೆಂಕಿಯ ಬಣ್ಣವನ್ನು ಗಮನಿಸಿ ಮತ್ತು ಅದು ನೀಲಿ ಇದ್ದರೆ ಆಗ ಸರಿಯಾಗಿದೆ ಎಂದು ಹೇಳಬಹುದು.
ಆದರೆ ಕೆಂಪು, ಹಳದಿ ಅಥವಾ ಕಿತ್ತಳೆ ಬಣ್ಣದಲ್ಲಿದ್ದರೆ, ಆಗ ಅದು ಸರಿಯಾಗಿ ಉರಿಯುತ್ತಿಲ್ಲ ಎಂದರ್ಥ.ಬರ್ನರ್ ನ್ನು ನಿಯಮಿತವಾಗಿ ಶುಚಿ ಮಾಡುತ್ತಲಿದ್ದರೆ, ಅದರಿಂದ ಬೆಂಕಿಯ ಬಣ್ಣವು ನೀಲಿ ಆಗಿರುವುದು. ಇದರಿಂದ ಗ್ಯಾಸ್ ನಷ್ಟವಾಗುವುದು ತಪ್ಪುವುದು.