ಊಟದಲ್ಲಿ ನಿಯಮಿತ ಅಯೋಡೀನ್ ಮತ್ತು ವಿಟಮಿನ್ ಎ ಬಳಕೆಯಿಂದ ಹೈಪೋ ಥೈರಾಯಿಡ್ ಅನ್ನು ಕಡಿಮೆ ಮಾಡಬಹುದು. ಅಯೋಡೀನ್ ಅಂಶವು ಸಮುದ್ರದ ತಟದಲ್ಲಿ ಬೆಳೆದ ಸಿಗುವ ಆಹಾರ ಪದಾರ್ಥಗಳಲ್ಲಿ ಹೇರಳವಾಗಿ ಲಭಿಸುತ್ತದೆ.

ಐಯೊಡೀಜ್ಡ್ ಉಪ್ಪುಗಳನ್ನು ಬಳಸಬೇಕು. ಸೊಪ್ಪು ತರಕಾರಿ, ಹಾಲು ಮತ್ತು ಹಾಲಿನ ಇತರ ಪದಾರ್ಥಗಳಲ್ಲಿ ಅಯೋಡೀನ್ ಲಭಿಸುವುದರಿಂದ ಹೆಚ್ಚಾಗಿ ಸೇವಿಸಿ.

ಹೂಕೋಸು, ಎಲೆಕೋಸು, ಬ್ರೊಕೋಲಿ, ಕ್ಯಾನೋಲ ಎಣ್ಣೆ, ಸಿರಿಧಾನ್ಯ, ಸೋಯಾಬೀನ್ಸ್, ಗೋಧಿ, ಮೆಕ್ಕೇಜೋಳಗಳು ಅಯೋಡೀನ್ ಹೀರುವಿಕೆಯನ್ನು ತಡೆಗಟ್ಟಿ ಥೈರಾಯಿಡ್ ಗ್ರಂಥಿಯ ಕಾರ್ಯದಕ್ಷತೆಯನ್ನು ಕಡಿಮೆ ಮಾಡುವುದರಿಂದ ಈ ಪದಾರ್ಥಗಳಿಂದ ದೂರವಿರಿ.

ವಿಟಮಿನ್ ಡಿ ಕೊರತೆಯು ಪರೋಕ್ಷವಾಗಿ ಹೈಪೋ ಥೈರಾಯಿಡ್ ಸಮಸ್ಯೆಗೆ ಕಾರಣವಾಗುವುದರಿಂದ ವಿಟಮಿನ್ ಡಿ ಉಳ್ಳ ಆಹಾರಗಳಾದ ಹಾಲು, ಮೀನು, ಮೊಟ್ಟೆ ಮತ್ತು ಅಣಬೆಗಳನ್ನು ಸೇವಿಸಿ. ಬಿಸಿಲಿನಲ್ಲಿ ಕನಿಷ್ಠ ಅರ್ಧ ಗಂಟೆ ವ್ಯಾಯಾಮ ಮಾಡಿ.

ಸೆಲೆನಿಯಮ್ ಥೈರಾಯಿಡ್ ಗ್ರಂಥಿಯ ಕಾರ್ಯದಕ್ಷತೆಯನ್ನು ಹೆಚ್ಚು ಮಾಡುತ್ತದೆ. ಆದ್ದರಿಂದ ಪಾಲಕ್ ಸೊಪ್ಪು, ಕೆಂಪಕ್ಕಿ, ಬ್ರೆಜಿಲ್ ನಟ್ಸ್ ಗಳನ್ನೂ ನಿಯಮಿತವಾಗಿ ದಿನನಿತ್ಯ ಸೇವಿಸಿ.

ಹೈಪೋ ಥೈರಾಯಿಡ್ ಸಮಸ್ಯೆಯಲ್ಲಿ ವಿಟಮಿನ್ ಬಿ೧೨ ಕೊರತೆಯು ಕಂಡುಬರುವುದರಿಂದ ಹೆಚ್ಚು ಬಿ೧೨ ಉಳ್ಳ ಮೊಟ್ಟೆ, ಪಾಲಕ್, ಉಪ್ಪಿನಕಾಯಿ, ಚೀಸ್, ಡೇರಿ ಆಹಾರಗಳನ್ನ ಯಥೇಚ್ಛವಾಗಿ ಸೇವಿಸಿ.

ಈ ಸಮಸ್ಯೆಯಲ್ಲಿ ಮೆಟಾಬಾಲಿಕ್ ರೇಟ್ ಕಡಿಮೆಯಾಗುವುದರಿಂದ ಅದನ್ನು ಹೆಚ್ಚಿಸಲು ಕನಿಷ್ಠ ೧ ಗಂಟೆ ವ್ಯಾಯಾಮ ಮಾಡುವುದು ಉತ್ತಮ.

ಕ್ಯಾಲ್ಸಿಯಂ ಮಾತ್ರೆ ಅಥವಾ ಕ್ಯಾಲ್ಸಿಯಂ ಯುಕ್ತ ಆಹಾರಗಳನ್ನು ಥೈರಾಯಿಡ್ ಮಾತ್ರೆಗಳನ್ನು ಸೇವಿಸಿದ ೪ ಗಂಟೆಯ ನಂತರ ಸೇವಿಸಬೇಕು ಏಕೆಂದರೆ ಕ್ಯಾಲ್ಸಿಯಂ ಥೈರಾಕ್ಸಿನ್ ಹೀರುವಿಕೆಯನ್ನು ಕಡಿಮೆ ಮಾಡುತ್ತದೆ.

ಕಾಫಿ ಅಥವಾ ನಾರುಭರಿತ ಆಹಾರಗಳು ಥೈರಾಯಿಡ್ ಮಾತ್ರೆಗಳ ಹೀರುವಿಕೆಯನ್ನು ಕಡಿಮೆ ಮಾಡುವುದರಿಂದ ಮಾತ್ರೆ ಮತ್ತು ಆಹಾರ/ ಪೇಯಗಳ ಸೇವನೆಯ ಮಧ್ಯೆ ಕನಿಷ್ಠ ೧ ಗಂಟೆಯ ಅಂತರವಿರಬೇಕು.

Leave a Reply

Your email address will not be published. Required fields are marked *