ಹಾಲು ಸತ್ವಪೂರ್ಣ ಆಹಾರ. ಹಾಲಿಗಿಂತ ಉತ್ತಮವಾದ ಆಹಾರ ಬೇರೊಂದಿಲ್ಲ. ಇದು ಎಲ್ಲಾ ಪೋಷಕಾಂಶಗಳನ್ನು ಹೊಂದಿದೆ. ಇದು ಮಕ್ಕಳು, ವೃದ್ಧರು, ರೋಗಿಗಳು,ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಅಗತ್ಯವಾಗಿ ಕೊಡುವ ಆಹಾರ. 1. ಕರಿ ಹಸುವಿನ ಹಾಲು ಅತ್ಯಂತ ಶ್ರೇಷ್ಠವಾದದ್ದು. ಇದರಲ್ಲಿ ನಮ್ಮ ದೇಹದ ಬೆಳವಣಿಗೆಗೆ ಬೇಕಾದ ವಿಶೇಷ ಜೀವಸತ್ವಗಳು ಮತ್ತು ಪೋಷಕಾಂಶಗಳು ಇರುತ್ತವೆ. 2. ಕುರಿಯ ಹಾಲು ದುರ್ಬಲರಿಗೆ ಅತ್ಯುತ್ತಮ ಆಹಾರ. ಇದಕ್ಕೆ ನಿಂಬೆ ರಸ ಸೇರಿಸಿ ಕುಡಿಯುವುದರಿಂದ ರಕ್ತ ಬೇಧಿ ನಿಲ್ಲುತ್ತದೆ. ಒಂದು ಬಟ್ಟಲು ಕಾಯಿಸಿದ ಹಾಳುವೆ ಅರ್ಧ ಚಮಚ ಅರಿಶಿಣ ಪುಡಿಯನ್ನು ಒಂದು ಚಮಚ ಜೇುತುಪ್ಪವನ್ನು ಸೇರಿಸಿ ಎರೆಡು ಮೂರು ಬಾರಿ ಕುಡಿದರೆ ರೋಗ ಲಕ್ಷಣವುಳ್ಳ ಬಾಯಾರಿಕೆ ನಿವಾರಣೆ ಆಗುತ್ತದೆ. 3. ನೀರಿಗೆ ಸ್ವಲ್ಪ ಹಾಲು ಸೇರಿಸಿ ಮುಖ ತೊಳೆಯುವುದರಿಂದ ಮುಖ ಚರ್ಮ ಒಡೆಯುವುದಿಲ್ಲ. ಪ್ರತಿ ದಿನ ಬೆಳಿಗ್ಗೆ ಒಂದು ಬಟ್ಟಲು ನೊರೆ ಹಾಲನ್ನು ಎರೆಡು ಮೂರು ದಿನಗಳ ಕಾಲ ಕುಡಿಯುವುದರಿಂದ ಬಾಯಿ ಹುಣ್ಣು ಗುಣವಾಗುತ್ತದೆ. 4. ಐದಾರು ತೊಟ್ಟು ಎದೆ ಹಾಲನ್ನು ಆಗಾಗ್ಗೆ ಮೂಗಿನ ಹೊಳ್ಳೆಗಳಿಗೆ ಹಾಕುತ್ತಿದ್ದಾರೆ ಮೂಗಿನಿಂದ ರಕ್ತ ಬರುತ್ತಿದ್ದರೆ ನಿಲ್ಲುತ್ತದೆ. 5. ಹಸುವಿನ ಹಾಲು ಮತ್ತು ಎದೆ ಹಾಲಿನಲ್ಲಿ ಒಣ ಶುಂಠಿ ತೇದು, ಆ ಗಂಧವನ್ನು ಹಣೆಗೆ ಪಟ್ಟು ಹಾಕಿಕೊಂಡರೆ ತಲೆನೋವು ಕಡಿಮೆ ಮಾಡುತ್ತದೆ. 6. ನಾಲ್ಕು ಟಿ ಚಮಚ ಹಾಲಿಗೆ ಒಂದು ಚಿಟಿಕೆ ಅಡಿಗೆ ಉಪ್ಪು ಸೇರಿಸಿ ಇದನ್ನು ಮುಖಕ್ಕೆ ಹಚ್ಚಿಕೊಂಡರೆ ಮುಖದ ಚರ್ಮ ಸುಕ್ಕು ಗಟ್ಟುವುದಿಲ್ಲ.

7. ಆಗ ತಾನೆ ಕರೆದ ಒಂದು ಬಟ್ಟಲು ಹಸುವಿನ ನೊರೆ ಹಾಲಿಗೆ ಒಂದು ನಿಂಬೆಹಣ್ಣಿನ ರಸ ಹಿಂಡಿ ತಕ್ಷಣ ಕುಡಿದರೆ ರಕ್ತ ಮೂಲವ್ಯಾಧಿಗೆ ಬಹಳ ಒಳ್ಳೆಯದು. ಒಂದು ವಾರ ಈ ರೀತಿ ಮಾಡಬೇಕು. 8. ನಾಲ್ಕೈದು ಏಲಕ್ಕಿಯನ್ನು ಸ್ವಲ್ಪ ಹಾಲಿನಲ್ಲಿ ನುಣ್ಣ್ಣಗೆ ಅರೆದು ಒಂದು ಬಟ್ಟಲು ಎಳೆನೀರಿನೊಂದಿಗೆ ಬೆರೆಸಿ ಕುಡಿದರೆ ಕಟ್ಟುಮೂತ್ರ ನಿವಾರಣೆ ಆಗುತ್ತದೆ. 9. ಎರೆಡು ಮೂರು ಬಾದಾಮಿ ಬೀಜಗಳನ್ನು ಸ್ವಲ್ಪ ಹಾಲಿನಲ್ಲಿ ನುಣ್ಣಗೆ ಅರೆದು, ಎರೆಡು ಚಮಚ ಹಾಲಿನೊಂದಿಗೆ ಬೆರೆಸಿ, ಬ್ರೆಡ್ಡಿನ ಚೂರುಗಳನ್ನು ಇದರಲ್ಲಿ ಅದ್ದಿ ಮುಖದ ಮೇಲೆ ಉಜ್ಜಿ, ಈ ರೀತಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ 15 ನಿಮಿಷ ಮಾಡಿದರೆ ಒಂದು ವಾರದೊಳಗೆ ಮೊಡವೆಗಳು ಮಾಯ ಆಗುತ್ತವೆ. ಕಪ್ಪು ಕಲೆಗಳು ಹೋಗುತ್ತವೆ, ಚರ್ಮದ ಬಣ್ಣ ಬದಲಾಗಿ ಮುಖದ ಕಾಂತಿ ಹೆಚ್ಚುತ್ತದೆ. 10. ಅರಿಶಿಣ ಗಂಧವನ್ನು ಹಾಲಿನ ಕೆನೆಯಲ್ಲಿ ಮಸೆದು ಓಡೆದಿರುವ ತುಟಿ, ಅಂಗೈ, ಅಂಗಾಲುಗಳಿಗೆ ಹಚ್ಚುವುದರಿಂದ ಗುಣವಾಗುತ್ತದೆ. 11. ಬೆಣ್ಣೆ ಸೇವಿಸುವುದರಿಂದ ಪಿತ್ತ ಶಮನ ಆಗುತ್ತದೆ. ಆಯಾಸ ಪರಿಹಾರ ಆಗುತ್ತದೆ. ಕೆಮ್ಮು, ದಮ್ಮು ಶಾಂತವಾಗುತ್ತದೆ. ಬಾಯಾರಿಕೆ ನಿವಾರಣೆ ಆಗುತ್ತದೆ ಮತ್ತು ವೀರ್ಯ ವೃದ್ಧಿಯಾಗುತ್ತದೆ. 12. ಬೆಣ್ಣೆಯಿಂದ ತಯಾರಿಸಿದ ಕಾಡಿಗೆಯನ್ನು ಕಣ್ಣಿಗೆ ಹಚ್ಚುವುದರಿಂದ ಕಣ್ಣು ಬೇನೆ ಗುಣವಾಗುತ್ತದೆ ಹಾಗೂ ಕೂದಲಿಗೆ ಬೆಣ್ಣೆ ಹಚ್ಚುತ್ತಿದ್ದರೆ ಕೂದಲಿನ ಕಾಂತಿ ಹೆಚ್ಚುತ್ತದೆ ಮತ್ತು ಬಾಲನೆರೆ ನಿವಾರಣೆ ಆಗುತ್ತದೆ. 13. ಮುಖ, ಅಂಗೈ, ಪಾದ ಮುಂತಾದ ಭಾಗಗಳಿಗೆ ಹಾಲಿನ ಕೆನೆ ಹಚ್ಚಿ ಮಾಲೀಸು ಮಾಡುವುದರಿಂದ ಬಿಸಿಲಿನಲ್ಲಿ ಚರ್ಮ ಕಪ್ಪಾಗುವುದನ್ನು ತಡೆಯಬಹುದು. 14. ಕಣ್ಣು ರಕ್ತ ಬಣ್ಣಕ್ಕೆ ತಿರುಗಿದಾಗ, ಕಣ್ಣು ಉರಿಯುತ್ತಿರುವಾಗ,ಕಣ್ಣು ಚುಚುತ್ತಿರುವಾಗ ಕೆಲವು ತೊಟ್ಟು ಶುದ್ಧವಾದ ಹಸುವಿನ ಹಾಲನ್ನು ಅಥವಾ ಎದೆ ಹಾಲನ್ನು ಕಣ್ಣಿಗೆ ಹಾಕಿದರೆ ಗುಣ ಪಡಿಸುತ್ತದೆ. 15. ಬಿಸಿ ಹಾಲಿಗೆ ಕಾಳು ಮೆಣಸಿನ ಪುಡಿ ಮತ್ತು ಕಲ್ಲು ಸಕ್ಕರೆ ಸೇರಿಸಿ ಕುಡಿದರೆ ನೆಗಡಿ ಕಡಿಮೆ ಆಗುತ್ತದೆ. 16. ಎಳೆಯ ಮಕ್ಕಳಿಗೆ ಕೆಮ್ಮು ಉಂಟಾದರೆ ಒಂದು ಟಿ ಚಮಚ ಶುದ್ಧವಾದ ಕತ್ತೆ ಹಾಲನ್ನು ದಿನಕ್ಕೆ ಒಂದು ಬಾರಿ ಕುಡಿಸಿದರೆ ಕೆಮ್ಮು ಕಡಿಮೆ ಆಗುತ್ತದೆ. 17. ಹಾಲು ಸುಲಭವಾಗಿ ಜೀರ್ಣವಾಗುವ ದ್ರವರೂಪದ ಆಹಾರ. ಆದರೂ ನೀರು ಬೇರೆಸದಿರುವ ಹಾಲು ಜೀರ್ಣವಾಗುವುದಿಲ್ಲ. ಮಕ್ಕಳಿಗೆ ಕೊಡುವ ಹಾಲಿಗೆ ಸ್ವಲ್ಪ ನೀರು ಹಾಕಿ, ಚೆನ್ನಾಗಿ ಕುದಿಸಿ ಆರಿಸಿ ಕೊಡಬೇಕು. ಎಮ್ಮೆಯ ಹಾಲು ಕುಡಿಯಲು ಯೋಗ್ಯವಲ್ಲ. ಇದನ್ನು ಕುಡಿಯುವುದರಿಂದ ಅಜೀರ್ಣ ತಲೆದೋರುತ್ತದೆ. ಇದಕ್ಕೆ ಸಾಕಷ್ಟು ನೀರು ಹಾಕಿ ಉಪಯೋಗಿಸಬೇಕು.

18. ಹಾಲನ್ನು ಬಿಸಿಯಾಗಿರುವಾಗಲೇ ಕುಡಿಯಬೇಕು. ಊಟ ಮಾಡಿದ ತಕ್ಷಣ ಕುಡಿಯಬಾರದು. ಹಾಗೆ ಕುಡಿದರೆ ಮಲಬದ್ಧತೆ ಉಂಟಾಗುತ್ತದೆ. ಊಟ ಮಾಡಿದ ಮೂರು ಗಂಟೆಗಳ ನಂತರ ಹಾಲನ್ನು ಕುಡಿಯಬೇಕು. 19. ಹಸುವಿನ ತುಪ್ಪ ಹಚ್ಚಿ ತಿಕ್ಕುವುದರಿಂದ ಅಂಗೈ, ಅಂಗಾಲು ಉರಿ ಕಡಿಮೆ ಆಗುತ್ತದೆ. 20. ಮೊಸರು ದೇಹಕ್ಕೆ ತಂಪು, ಇದು ದಾಹ ನಿವಾರಕ, ಬೇಧಿ, ರಕ್ತ ಬೇಧಿ, ಮೂಗುರಿ, ಮಲಬದ್ದತೆ, ಜ್ವರ ಮುಂತಾದ ರೋಗಗಳಲ್ಲಿ ಮೊಸರು ಗುಣಕಾರಿ, ಮೊಸರು ನಿಶ್ಯಕ್ತಿ ಕಳೆದು ಚೈತನ್ಯ ತುಂಬುವ ಅಮೃತ. ಇದನ್ನು ಪ್ರತಿ ದಿನ ಉಪಯೋಗಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. 21. ಮೂಲವ್ಯಾಧಿ ಇಂದ ನರಳುವವರು ಮೊಸರು ಅನ್ನದ ಜೊತೆ ಬೆಲ್ಲ ಸೇರಿಸಿ ಊಟ ಮಾಡುವುದರಿಂದ ಮೂಲವ್ಯಾಧಿ ಕಡಿಮೆಯಾಗುತ್ತದೆ. 22. ಕಾಮಾಲೆ ರೋಗಿಗಳು ಕುಸುಬುಲು ಅಕ್ಕಿಯಿಂದ ಮೃದುವಾದ ಅನ್ನ ಮಾಡಿ ಮೊಸರು ಅಥವಾ ಮಜ್ಜಿಗೆಯೊಂದಿಗೆ ಊಟ ಮಾಡಿದರೆ ಗುಣವುಂಟು ಮತ್ತು ಮೂರು ನಾಲ್ಕು ದಿನ ಹಸುವಿನ ಮೊಸರಿನಲ್ಲಿ ಕಲ್ಸಿದ ಅನ್ನವನ್ನು ಸೂರ್ಯೋದಯಕ್ಕೆ ಮೊದಲು ಊಟ ಮಾಡುವುದರಿಂದ ಅರೆತಲೇನೋವು ಕಡಿಮೆಯಾಗುತ್ತದೆ. 23. ಮೂಲವ್ಯಾಧಿಯಿಂದ ನರಳುವವರು ಒಂದು ಬಟ್ಟಲು ಕಡೆದು ಬೆಣ್ಣೆ ತೆಗೆದ ಹುಳಿ ಮಜ್ಜಿಗೆಯನ್ನು ಪ್ರತಿದಿನ ಬೆಳಿಗ್ಗೆ ಕುಡಿಯುವುದರಿಂದ ಗುಣ ಕಂಡು ಬರುವುದು. 24. ರಾತ್ರಿಯ ಹೊತ್ತು ಮೊಸರು ಕುಡಿಯುವುದು ಒಳ್ಳೆಯದಲ್ಲ. ಅನಿವಾರ್ಯ ಆದರೆ ಸಕ್ಕರೆ ಸೇರಿಸಿ ಕುಡಿಯಬಹುದು. 25. ಪ್ರಯಾಸದಿಂದ ಮೂತ್ರ ವಿಸರ್ಜನೆ ಆಗುವುದು,ನೆಗಡಿ ಅತಿಸಾರ ಮುಂತಾದ ರೋಗ ಲಕ್ಷಣಗಳನ್ನು ಹೊಂದಿರುವ ವರಿಗೆ ಮೊಸರು ಒಳ್ಳೆಯ ಆಹಾರ. ಇದನ್ನು ಉಪ್ಪು ಮತ್ತು ನೀರು ಸೇರಿಸಿ ಕುಡಿಯುವುದು ಒಳ್ಳೆಯದು.

Leave a Reply

Your email address will not be published. Required fields are marked *