ಪಾಪ ಪುಣ್ಯಗಳು ಕೇವಲ ಮನುಷ್ಯನಿಗೆ ಮಾತ್ರ ಮತ್ತಾವ ಜೀವಿಗೂ ಈ ಪಾಪ ಪುಣ್ಯಗಳ ಹೊರೆ ಇರುವುದಿಲ್ಲ, ಇನ್ನು ಮನುಷ್ಯ ಮಾಡುವ ಪಾಪ ಮತ್ತು ಪುಣ್ಯಗಳು.

ಪಾಪಗಳು: ವೇಧಗಳನ್ನು ಖಂಡಿಸುವುದು, ಸ್ವಧರ್ಮವನ್ನು ಬಿಟ್ಟು ಅನ್ಯ ಧರ್ಮವನ್ನು ಪಾಲನೆ ಮಾಡುವುದು.ತಂದೆತಾಯಿಗಳನ್ನು ಅವಮಾನ ಮಾಡುವವನು, ಶ್ರಾದ್ದ ಕಾರ್ಯ ಮುಗಿದಮೇಲೆ ಬ್ರಾಹ್ಮಣನಿಗೆ ದಕ್ಷಿಣೆ ಕೊಡದಿರುವವನು.

ಅಪವಿತ್ರನಾಗಿ ಪವಿತ್ರಗ್ರಂಥಗಳ ಪಠನ ಇವುಗಳು ಪಾಪ ಕಾರ್ಯಗಳು, ಹಸಿದವನಿಗೆ ಆಹಾರ ಕೊಡದಿರುವುದು ಮತ್ತು ಬಾಯಾರಿದವನಿಗೆ ನೀರು ಕೊಡದಿರುವುದು ಬ್ರಹ್ಮ ಹತ್ಯ ಮಾಡಿದಷ್ಟೆ ಪಾಪ.ನಂಬಿಕೆ ದ್ರೋಹ, ಇತರರಲ್ಲಿ ತಪ್ಪು ಕಂಡು ಹಿಡಿಯುವುದು, ಇನ್ನೋಬ್ಬರ ಸ್ವತ್ತನ್ನು ಕಬಳಿಸುವುದು, ಪ್ರಾಣಿವದೆ. ಹೆಂಡತಿಯನ್ನು ಬಿಟ್ಟು ಪರ ಸ್ತ್ರೀ ಸಹವಾಸ, ಸುಳ್ಳು ಹೇಳುವುದು, ಅತಿಥಿಗಳನ್ನು ಅವಮಾನಮಾಡುವುದು ಇದೆಲ್ಲಾ ಪಾಪಕಾರ್ಯಗಳು.

ಪುಣ್ಯ ಕಾರ್ಯಗಳು: ಅಹಿಂಸೆ, ಕ್ಷಮಾಶೀಲತೆ, ದೇವರಲ್ಲಿ ಭಕ್ತಿ, ಓದಾರ್ಯ, ಧ್ಯಾನ ಸಮರ್ಪಣೆ, ಇಂದ್ರಿಯನಿಗ್ರಹ, ಮನಿಸ್ಸಿನಲ್ಲಿ ಶುದ್ದತೆ ಇವುಗಳು ಸದ್ಗುಣಗಳು, ದಾನ್ಯದಾನ, ಪ್ರಾಣಿಗಳನ್ನು ಸಾಕುವುದು, ಬಾಯಾರಿದವನಿಗೆ ನೀರು ಕೋಡುವುದು ಪುಣ್ಯಕಾರ್ಯಗಳು.

ಬ್ರಾಹ್ಮಣರಿಗೆ ಪಾದುಕೆಗಳನ್ನು ದಾನ ಮಾಡುವುದರಿಂದ ಸ್ವರ್ಗ ಪ್ರಾಪ್ತವಾಗುತ್ತದೆ,ಶಿವ ಮತ್ತು ವಿಷ್ಣು ಪೂಜೆಯಿಂದ ಶಿವಲೋಕ ಅಥವಾ ವಿಷ್ಣುಲೋಕ ಪ್ರಾಪ್ತವಾಗುತ್ತದೆ.ಈ ವಿಚಾರವು ಯಯಾತಿ ಮತ್ತು ಮಾಥಿಲಿ ಅವರ ಸಂವಾದ ಪದ್ಮಪುರಾಣ ಭೂಮಿ ಕಾಂಡದಲ್ಲಿ ಉಲ್ಲೇಖಿತ.

Leave a Reply

Your email address will not be published. Required fields are marked *