ನಮಸ್ತೆ ನಮ್ಮ ಆತ್ಮೀಯ ಓದುಗರೇ, ಸಾಂಬಾರು ಪದಾರ್ಥಗಳ ರಾಜ ಎಂದೇ ಕರೆಯಲ್ಪಡುವ ಕರಿಮೆಣಸು ಅಥವಾ ಕಾಳುಮೆಣಸು ಒಂದು ಅದ್ಭತವಾದ ದಿವ್ಯ ಔಷಧಿ ಎಂದು ಅನೇಕ ಜನರಿಗೆ ಗೊತ್ತಿಲ್ಲ. ಕಪ್ಪು ಬಂಗಾರ ಎಂದು ಕರೆಯಲ್ಪಡುವ ಕರಿಮೆಣಸಿನಲ್ಲಿ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ.ಅತಿಯಾದ ನೆಗಡಿ, ಗೂರು, ಮತ್ತು ಕೆಮ್ಮನ್ನು ಹೊಡೆದೋಡಿಸುವ ಶಕ್ತಿಯಿದೆ ಈ ಕಾಳುಮೆಣಸಿಗೆ. 1. ಮೆಣಸು ಅತ್ಯುತ್ತಮ ಜೀರ್ಣಕಾರಕ ವಸ್ತು. ಇದು ಅಜೀರ್ಣ, ಹೊಟ್ಟೆ ಉಬ್ಬರ, ಅತಿಸಾರ ಈ ರೋಗಗಳಿಗೆ ಸಿದ್ದೌಶಧಿ. 2. ಒಂದು ಚಮಚ ಕಾದ ತುಪ್ಪಕ್ಕೆ ಕಾಳು ಮೆಣಸಿನ ಪುಡಿ, ಉಪ್ಪು ಸೇರಿಸಿ ಕುದಿಸಿ. ಇದರಲ್ಲಿ ಅನ್ನ ಕಲಸಿಕೊಂಡು ಊಟ ಮಾಡಿದರೆ ಅಜೀರ್ಣದಿಂದ ಹೊಟ್ಟೆ ಉಬ್ಬರಿಸಿಕೊಂಡಿದ್ದರೆ ಕಡಿಮೆ ಆಗುತ್ತದೆ. 3. ಮೊಸರು ಅನ್ನಕ್ಕೆ ಬೆಲ್ಲ ಮತ್ತು ಕಾಳು ಮೆಣಸಿನ ಪುಡಿ ಸೇರಿಸಿ ಊಟ ಮಾಡುವುದರಿಂದ ಮೂತ್ರದ್ವಾರ ಮತ್ತು ಗುದದ್ವಾರದಲ್ಲಿ ಆಗುವ ಉರಿ ನಿವಾರಣೆ ಆಗುತ್ತದೆ. 4. ಒಂದು ಬಟ್ಟಲು ಕುಡಿಯುವ ನೀರಿಗೆ ಒಂದು ಊಟದ ಚಮಚ ಮೆಣಸನ್ನು ಜಜ್ಜಿ ಹಾಕಿ, ಒಂದು ಬೆಳ್ಳುಳ್ಳಿಯನ್ನು ಬಿಡಿಸಿ ಆ ನೀರಿಗೆ ಹಾಕಿ, ಐದು ನಿಮಿಷಗಳ ನಂತರ ಕಷಾಯವನ್ನು ಒಲೆಯಿಂದ ಕೆಳಕ್ಕಿಳಿಸಿ ಕಷಾಯವನ್ನು ಬಸಿಯಿರಿ. ಇದಕ್ಕೆ ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ಬಾರಿ ಕುಡಿದರೆ ಮಲೇರಿಯಾ ರೋಗ ನಿಾರಣೆಯಾಗುತ್ತದೆ.
5. ಬಿಸಿ ಹಾಲಿಗೆ ಕಾಳು ಮೆಣಸಿನ ಪುಡಿ ಮತ್ತು ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದಿಂದ ನೆಗಡಿ ಗುಣವಾಗುತ್ತದೆ ಮತ್ತು ತುಪ್ಪದಲ್ಲಿ ಹುರಿದ ಮೆಣಸನ್ನು ಸಮಭಾಗ ಸಕ್ಕರೆಯೊಂದಿಗೆ ಮಿಶ್ರ ಮಾಡಿ ಚೆನ್ನಾಗಿ ಪುಡಿ ಮಾಡಿ. ಈ ಪುಡಿಯನ್ನು ದಿನಕ್ಕೆ ಮೂರು ಬಾರಿ ಅರ್ಧ ಟೀ ಚಮಚ ದಷ್ಟು ತೆಗೆದುಕೊಂಡರೆ ನೆಗಡಿ ಮತ್ತು ಕೆಮ್ಮು ಕಡಿಮೆ ಆಗುತ್ತದೆ. 6. ಹಳೆ ಹುಣಸೆಹಣ್ಣು, ಪುದೀನಾ, ಮೆಣಸು, ಏಲಕ್ಕಿ ಕಾಳು ಯೋಗ್ಯ ಪ್ರಮಾಣದಲ್ಲಿ ತೆಗೆದುಕೊಂಡು ನುಣ್ಣಗೆ ಅರೆದು ಉಪ್ಪು ಹಾಕಿ ತಿನ್ನುವುದರಿಂದ ಹೊಟ್ಟೆ ನೋವು ಕಡಿಮೆ ಆಗುತ್ತದೆ. 7. ಮೆಣಸನ್ನು ಹುರಿದು ನುಣ್ಣಗೆ ಪುಡಿ ಮಾಡಿ ಕಾಲು ಚಮಚದಷ್ಟು ಚೂರ್ಣವನ್ನು ಜೇನುತುಪ್ಪದಲ್ಲಿ ಕಲಸಿ ದಿನಕ್ಕೆ ಎರೆಡು ಬಾರಿ ತೆಗೆದುಕೊಂಡರೆ, ನೆಗಡಿ ಮತ್ತು ಗೂರಲು ರೋಗಗಳು ಕಡಿಮೆ ಆಗುತ್ತದೆ. 8. ಒಂದು ವಿಳೆದೆಳೆ ಯೊಂದಿಗೆ ನಾಲ್ಕೈದು ಮೆಣಸು ಕಾಳು ಮತ್ತು ಒಂದೆರೆಡು ಹರಳು ಉಪ್ಪು ಅಗಿದು ತಿನ್ನುವುದರಿಂದ ಕಫ ನಿವಾರಣೆ ಆಗುತ್ತದೆ. 9. ಮೆಣಸನ್ನು ನುಣ್ಣಗೆ ಅರೆದು ವಸಡಿಗೆ ಹಚ್ಚಿದರೆ ಕೆಟ್ಟ ನೀರು ಸುರಿದು ಹೋಗಿ ಹಲ್ಲು ನೋವು ಕಡಿಮೆ ಆಗುತ್ತದೆ. 10. ಮೆಣಸನ್ನು ನೀರಿನಲ್ಲಿ ತೇದು ಮೊಡವೆಗಳಿಗೆ ಹಚ್ಚಿದರೆ ಗುಣ ಕಂಡು ಬರುವುದು. 11. ಚೆನ್ನಾಗಿ ಮಾಗಿದ ರಸಬಾಳೆ ಹಣ್ಣಿನೊಂದಿಗೆ ಅರ್ಧ ಟೀ ಚಮಚ ಮೆಣಸಿನ ಕಾಳಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಸೆಯಿರಿ. ಇದನ್ನು ಮೂರು ಸಮಾಭಾಗ ಮಾಡಿಕೊಂಡು ಮೂರು ಬಾರಿ ತಿನ್ನುವುದರಿಂದ ನೆಗಡಿ ಮತ್ತು ಕೆಮ್ಮು ಕಡಿಮೆ ಆಗುತ್ತದೆ.
12. ಬಿಸಿಯಾದ ಹಾಲಿಗೆ ಸ್ವಲ್ಪ ಅರಿಶಿನ ಪುಡಿ, ಕಾಳು ಮೆಣಸಿನ ಪುಡಿ ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಕುಡಿದರೆ ನೆಗಡಿ, ಕೆಮ್ಮು, ಗಂಟಲು ನೋವು ಕಡಿಮಯಾಗುತ್ತದೆ. 13. ಮೃಷ್ಟಾನ್ನ ಭೋಜನದ ನಂತರ ಒಂದೆರೆಡು ಬಟ್ಟಲು ಮೆಣಸಿನ ಸಾರು ಕುಡಿಯುವುದರಿಂದ ಅಜೀರ್ಣವಾಗುವುದಿಲ್ಲ. ಒಂದು ಊಟದ ಚಮಚ ಶ್ರೀ ತುಳಸಿಯ ರಸದಲ್ಲಿ ಎರೆಡು ಮೂರು ಚಿಟಿಕೆ ಕಾಳು ಮೆಣಸಿನ ಪುಡಿ ಮಿಶ್ರಮಾಡಿ ಸ್ವಲ್ಪ ಜೇನುತುಪ್ಪ ಸೇರಿಸಿ ದಿನಕ್ಕೆ ಎರೆಡು ಬಾರಿಯಂತೆ ಮೂರು ನಾಲ್ಕು ದಿನ ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ. 14. ನುಗ್ಗೆ ಸೊಪ್ಪಿನ ರಸದಲ್ಲಿ ಒಂದೆರೆಡು ಮೆಣಸಿನ ಕಾಳನ್ನು ನುಣ್ಣಗೆ ಅರೆದು ಹಣೆ ಮತ್ತು ಕಪಾಳಗಳಿಗೆ ಹಚ್ಚುವುದರಿಂದ ತಲೆನೋವು ಬಿಟ್ಟು ಹೋಗುತ್ತದೆ. 15. ಅರ್ಧ ಟೀ ಚಮಚ ಮೆಣಸನ್ನು ಚೆನ್ನಾಗಿ ಹುರಿದು ನುಣ್ಣಗೆ ಪುಡಿ ಮಾಡಿ ಎರೆಡು ಬಟ್ಟಲು ಕುದಿಯುವ ನೀರಿಗೆ ಈ ಚೂರ್ಣವನ್ನು ಹಾಕಿ ಮತ್ತೊಮ್ಮೆ ಕುದಿಸಿ, ನಂತರ ನೀರನ್ನು ಆರಿಸಿ ಕುಡಿಯಿರಿ. ಬಾಯಾರಿಕೆಯಾದಗ ಈ ನೀರನ್ನು ಕುಡಿಯುತ್ತಿದ್ದರೆ ಅತಿಯಾದ ಬಾಯಾರಿಕೆ ನಿವಾರಣೆಯಾಗುತ್ತದೆ. 16. ಮೆಣಸು ಮತ್ತು ಬೆಳ್ಳುಳ್ಳಿಯಿಂದ ಚಟ್ಟಣಿ ಮಾಡಿ ಊಟದಲ್ಲಿ ಬಳಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ ಮತ್ತು ದೇಹಾರೋಗ್ಯ ಉತ್ತಮವಾಗುತ್ತದೆ. ಶುಭದಿನ.