ಪದೇ ಪದೇ ಕಾಡುವ ಬೆನ್ನುನೋವು ನಿವಾರಣೆಗೆ ಸಿಂಪಲ್ ಮನೆಮದ್ದು ಅದೇನು ಅಂತೀರಾ. ನೀವೆಲ್ಲರೂ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಸಾಮಾನ್ಯವಾಗಿ ವಯಸ್ಕರಿಗೆ ಬೆನ್ನುನೋವು ಕಾಡುತ್ತದೆ. ಒಂದು ಅಂದಾಜಿನ ಪ್ರಕಾರ ಶೇಕಡ 80ರಷ್ಟು ವಯಸ್ಕರು ಬೆನ್ನುನೋವಿನಿಂದ ಬಳಲುತ್ತಿರುತ್ತಾರೆ. ಕೆಲವರಲ್ಲಿ ದೀರ್ಘಾವಧಿ ಬೆನ್ನು ನೋವು ಇದ್ದರೆ ಕೆಲವರಿಗೆ ತಾತ್ಕಾಲಿಕ ನೋವು
ಇರುತ್ತದೆ. ಬೆನ್ನು ನೋವಿಗೆ ಕಾರಣಗಳು ಹಲವು. ಗಂಟೆಗಟ್ಟಲೆ ಕಚೇರಿಯಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದು ಅತಿಯಾದ ಶ್ರಮದ ಕೆಲಸ. ದೀರ್ಘಕಾಲ ವಾಹನ ಚಾಲನೆಯಿಂದ ಬೆನ್ನು ನೋವು ಕಾಡಬಹುದು. ಕ್ಯಾಲ್ಸಿಯಂ ಕೊರತೆಯಿಂದಲೂ ಬೆನ್ನು ನೋವು ಬರಬಹುದು. ಇದು ಮಹಿಳೆಯರಲ್ಲಿ ಜಾಸ್ತಿ. ಕೆಲವರಿಗೆ ಮೂಳೆ ಸವೆತದಿಂದ ಬೆನ್ನುನೋವು ಕೆಲವರಿಗೆ ಅಧಿಕ ಭಾರವಾದ ವಸ್ತುಗಳನ್ನು ಎತ್ತುವುದರಿಂದ ಬೆನ್ನು ನೋವು ಬರುತ್ತದೆ.
ಈ ಬೆನ್ನು ನೋವನ್ನು ಗುಣಪಡಿಸಲು ಸಾಂಪ್ರದಾಯಿಕ ಸರಳ ಮನೆಮದ್ದುಗಳಿವೆ. ಪ್ರತಿದಿನ ಎಂಟರಿಂದ 10 ಗ್ಲಾಸ್ ನೀರನ್ನು ಕುಡಿಯುವುದರಿಂದ ಬೆನ್ನುನೋವಿನಿಂದ ಪಾರಾಗಬಹುದು. ಬೆನ್ನು ನೋವು ಕಾಣಿಸಿಕೊಂಡ ತಕ್ಷಣ ದೊಡ್ಡ ಗ್ಲಾಸ್ ನಲ್ಲಿ ಎರಡು ಗ್ಲಾಸ್ ಶುದ್ಧವಾದ ನೀರು ಕುಡಿದರೆ ಬೆನ್ನು ನೋವು ಶಮನವಾಗುತ್ತದೆ. ಬೆನ್ನು ನೋವು ಇರುವವರು ಪ್ರತಿನಿತ್ಯ ಕ್ಯಾಲ್ಸಿಯಂ ಇರುವ ಆಹಾರ ಸೇವಿಸಬೇಕು. ಅಗತ್ಯವಿದ್ದರೆ ಕ್ಯಾಲ್ಸಿಯಂ ಮಾತ್ರೆ
ಜೊತೆಗೆ ಒಂದರಿಂದ ಎರಡು ಲೋಟ ಹಾಲು ಸೇವನೆ ಬೆನ್ನುನೋವನ್ನು ಕಡಿಮೆ ಮಾಡುತ್ತದೆ. ಧೂಮಪಾನ ಗಳಲ್ಲಿ ಬೆನ್ನು ನೋವು ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ ಧೂಮಪಾನ ಬಿಟ್ಟರೆ ಬೆನ್ನುನೋವಿನಿಂದ ಮುಕ್ತಿ ಸಿಗುತ್ತದೆ. ಕಚೇರಿಯಲ್ಲಿ ಗಂಟೆಗಟ್ಟಲೆ ಕುಳಿತು ಕೆಲಸಮಾಡುವವರು ಕೆಲಸದ ನಡುವೆ ನಿಯಮಿತವಾಗಿ ವಿಶ್ರಾಂತಿ ಪಡೆಯಿರಿ. ಮಧ್ಯಾಹ್ನದ ಊಟದ ನಂತರ ಒಂದು ಸಣ್ಣ ನಡಗೆ ಮಾಡಿ ಆಗಾಗ ಎದ್ದು ಓಡಾಡುತ್ತಿರಿ. ಬೆನ್ನು ನೋವು ಇದ್ದರೆ ಬೆಳ್ಳುಳ್ಳಿ ನೀಲಗಿರಿ ಎಣ್ಣೆ ಮಸಾಜ್ ಮಾಡಿದ್ದು ಬೆನ್ನು ನೋವನ್ನು ಕಡಿಮೆ ಮಾಡುತ್ತದೆ.