ಈಗಿನ ಕಾಲದಲ್ಲಿ ಜನರು ಲಾಭಕ್ಕಾಗಿ ಏನೇಲ್ಲ ಮಾಡುತ್ತಾರೆ. ಕೊಲೆ, ಸುಲಿಗೆ, ಇನ್ನು ಮುಂತಾದವು ಮಾಡುತ್ತಾರೆ ಕಾರಣ ಹಣಕ್ಕಾಗಿ ಎಂದು ನಾವು ನೋಡಬಹುದು. ಇದೆಲ್ಲ ಒಂದು ಕಡೆಯಾದರೆ ಆಹಾರದಲ್ಲಿ ಕಲಬೇರಕ್ಕೆ ಮಾಡುವಂತಹದನ್ನು ನಾವು ಗಮನಿಸಬಹುದು ಅಕ್ಕಿಯಲ್ಲಿ ಕಲಬೇರಕ್ಕೆ, ರಾಗಿಯಲ್ಲಿ, ಹಾಲಿನಲ್ಲಿಯೂ ಕೂಡ ಹಾಗೇ ಪನೀರ್ನಲ್ಲಿಯೂ ಕಲಬೆರಕೆ ಮಾಡುತ್ತಾರೆ.
ಅದರೆ ಈ ಪನೀರ್ ನಲ್ಲಿ ಮಾಡುವ ಈ ಮಿಶ್ರಣವನ್ನು ಹೇಗೆ ಕಂಡುಹಿಡಿಯುವುದು ಎಂದು ನೋಡಿದರೆ. ಪನೀರ್ ಶುದ್ಧತೆ ಮತ್ತು ತಾಜಾತನ ದಿಂದ ಕೊಡಿದು ಇದನ್ನು ಅಡುಗೆ ಮಾಡುವುದಕ್ಕೆ ಹೆಚ್ಚು ಬಳಸುತ್ತಾರೆ. ಇದು ಹಳ್ಳಿ ಪ್ರದೇಶಗಳಲ್ಲಿ ಕಡಿಮೆ ಆದರೂ ಕೂಡ ನಗರವಾಸಿ ಜನರಲ್ಲಿ ಹೆಚ್ಚು ಬಳಕೆ ಎಂದು ಹೇಳಬಹುದು. ಆಗಾದರೆ ಹಣದ ಆಸೆಗಾಗಿ ಇದರಲ್ಲಿಯೂ ಕೂಡ ಕಲಬೆರಕೆ ಮಾಡಿರುತ್ತಾರೆ ಇದನ್ನು ಹೇಗೆ ಕಂಡು ಹಿಡಿಯಬಹುದು ನಿಮಗೆ ಗೋತ್ತಾ.
ಶುದ್ಧ ಪನೀರ್ ತುಂಬ ಮೃದುವಾಗಿದು ಹಾಲಿನ ಸುವಾಸನೆ ಬರುತ್ತದೆ ಆದರೆ ಸಿಂಥೆಟಿಕ್ ಪನೀರ್ ಹಾಲಿನ ವಾಸನೆ ಬರುವುದಿಲ್ಲ. ಪನೀರ್ ರನ್ನು ನೀರಿನಲ್ಲಿ ಹಾಕಿ ಕುದಿಸಿ ತದ ನಂತರ ಅದು ತಣ್ಣಗಾದ ಮೇಲೆ ಅದಕ್ಕೆ ಅಯೋಡಿನ್ ದ್ರಾವಣವನ್ನು ಹಾಕಿ ಅದು ನೀಲಿ ಬಣ್ಣಕ್ಕೆ ತಿರುಗಿದರೆ ಅದಕ್ಕೆ ಸ್ಟಾರ್ಚ್ ಕಲಬೆರಕೆ ಆಗಿದೆ ಎಂದು ಗೋತ್ತಾಗುತ್ತದೆ.
ಮಾರುಕಟ್ಟೆಯಲ್ಲಿ ಸಿಗುವಂತಹ ಪನೀರ್ ನು ದಿನಾಂಕ ಪರೀಶೀಲನೆ ಮಾಡಿ ತೆಗೆದುಕೋಳ್ಳಬೇಕು ಹಾಗೆಯೇ ಫ್ರಿಜ್ ನಲ್ಲಿರುವ ಪನೀರ್ ಒಂದು ವಾರದೊಳಗೆ ಬಳಕೆ ಮಾಡಿದರೆ ಉತ್ತಮ. ಪನೀರ್ ರನ್ನು ಮನೆಯಲ್ಲಿಯೇ ತಯಾರದ ಪನೀರ್ ಬಳಕೆ ಮಾಡಿದರೆ ತುಂಬ ಉತ್ತಮ ವಾಗಿರುತ್ತದೆ ಹಾಗೂ ಉತ್ತಮ ಆರೋಗ್ಯ ಕೂಡ ಇರುತ್ತದೆ.
ಹೀಗೆ ನಮಗೆ ಕಾಣದ ಹಾಗೆ ಎಷ್ಟೇಲ್ಲ ಆಹಾರದಲ್ಲಿ ಕಲಬೆರಕೆಯು ನಡೆದಿರುತ್ತದೆ ಆಂತಹ ಸಂದರ್ಭದಲ್ಲಿ ನಾವು ಎಚ್ಚರಿಕೆ ಇಂದ ಬಳಕೆ ಮಾಡಿದರೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ಹೇಳಬಹುದು.