ಪಪ್ಪಾಯ ಹಣ್ಣು ತಿನ್ನುವ ಮಂದಿ ಈ ವಿಚಾರವನ್ನು ತಿಳಿದುಕೊಳ್ಳಬೇಕು ಪಪ್ಪಾಯ ಹಣ್ಣು ನಮ್ಮ ದೇಹಕ್ಕೆ ಎಷ್ಟು ಮಾರಕ ಮತ್ತು ಪೂರಕ ಅನ್ನೋದು ಎಷ್ಟೋ ಜನಕ್ಕೆ ಗೊತ್ತಿಲ್ಲ ಪಪ್ಪಾಯ ಹಣ್ಣು ತಿನ್ನುವುದು ಎಷ್ಟು ಸೂಕ್ತ ಮತ್ತು ಈ ಹಣ್ಣು ಸಾಮಾನ್ಯವಾಗಿ ಎಲ್ಲರು ತಿನ್ನುವುದು ಒಳಿತ ಹೇಗೆ ಎಂಬುದನ್ನು ಅನೇಕರು ಅನೇಕ ರೀತಿಯಲ್ಲಿ ಹೇಳುತ್ತಾರೆ ಆದರೆ ಕೆಲವರು ಹೇಳುತ್ತಾರೆ ಪಪ್ಪಾಯ ಹಣ್ಣು ತಿನ್ನುವುದರಿಂದ ನಮ್ಮ ದೇಹಕ್ಕೆ ಅನೇಕ ಆರೋಗ್ಯಕಾರಿ ಲಾಭಗಳಿವೇ ಅಂತ ಆದರೆ ಇನ್ನು ಅನೇಕ ತಜ್ಞರು ಹೇಳುತ್ತಾರೆ ಈ ಪಪ್ಪಾಯ ಹಣ್ಣು ತಿನ್ನುವುದರಿಂದ ಏನೆಲ್ಲಾ ಸಮಸ್ಯೆ ಆಗುತ್ತೆ ಅಂತ ಹಾಗಾದರೆ ಈ ಪಪ್ಪಾಯ ಹಣ್ಣು ತಿನ್ನುವುದರಿಂದ ಏನೆಲ್ಲಾ ಲಾಭಗಳಿವೆ ಮತ್ತು ಅದು ನಿಮ್ಮ ಆರೋಗ್ಯದ ಮೇಲೆ ಏನೆಲ್ಲಾ ಪ್ರಭಾವ ಬೀರುತ್ತೆ ಅಂತ ಈ ಕೆಳಗೆ ಹೇಳಾಗಿದೆ ನೋಡಿ.
ಪಪ್ಪಾಯ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದು ಎಂಬುದಾಗಿ ಕೆಲ ತಜ್ಞರು ತಿಳಿಸಿದ್ದಾರೆ. ಪಪ್ಪಾಯದಿಂದ ಸಿಗುವಂತ ಆರೋಗ್ಯಕಾರಿ ಲಾಭಗಳನ್ನು ನೀವು ತಿಳಿದಿರುತ್ತೀರ. ಅದು ಮಿತಿ ಮೀರಿದರೆ ಹಾಗುವಂತ ಪರಿಣಾಮಗಳನ್ನು ಕೂಡ ತಿಳಿದುಕೊಳ್ಳುವುದು ಉತ್ತಮ.
ಪಪ್ಪಾಯವನ್ನು ಗರ್ಭಿಣಿ ಮಹಿಳೆಯರು ಸೇವಿಸುವುದು ಅಪಾಯ. ಇದು ಎಲ್ಲರಿಗೂ ಗೊತ್ತಿರುವ ಸತ್ಯವೇ. ಪಪ್ಪಾಯ ತಿನ್ನುವುದರಿಂದ ಗರ್ಭಪಾತವಾಗುವ ಅಪಾಯವಿದೆ. ಇದು ಗರ್ಭಕೋಶದ ಮೇಲೆ ಪರಿಣಾಮ ಬೀರುವುದರಿಂದ ಪಪ್ಪಾಯ ಹಣ್ಣಿನ ಬೀಜ, ಬೇರು ಗರ್ಭಪಾತಕ್ಕೆ ಕಾರಣವಾಗಬಹುದು.
ಪ್ರತಿನಿತ್ಯ ಒಂದು ಕಪ್ ಗಿಂತ ಹೆಚ್ಚು ಪಪ್ಪಾಯ ಸೇವನೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಯಾಕೆಂದರೆ ಮನುಷ್ಯನ ಆಹಾರ ನಳಿಕೆಯನ್ನು ಹಾನಿಗೊಳಿಸಬಹುದು ಎನ್ನುವ ಕಾರಣಕ್ಕೆ. ನಿಮೆಗೆ ಗೊತ್ತಿರುವ ವಿಷಯ ಅತಿಯಾದರೆ ಅಮೃತವು ವಿಷ ಆಗುತ್ತೆ ಎಂಬುದು.