WhatsApp Group Join Now

ಬೆಳಗುತ್ತಿಯಲ್ಲಿರು ತೀರ್ಥ ರಾಮೇಶ್ವರ ದೇವಾಲಯಕ್ಕೆ ರಾಜ್ಯದ ಹಲವು ಕಡೆಯಿಂದ ಭಕ್ತರು ಆಗಮಿಸುತ್ತಾರೆ, ಈ ದೇವಾಲಯ ಕರ್ನಾಟಕದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನಲ್ಲಿದೆ. ಬೆಳಗುತ್ತಿಗೆ ಸುಮಾರು ೨ ಕಿ.ಮೀ.ದೂರದಲ್ಲಿರುವ ಬೆಟ್ಟದ ಮೇಲೆ ತೀರ್ಥರಾಮೇಶ್ವರ ದೇವಸ್ಥಾನವಿದೆ. ಇದು ಬಯಲು ಸೀಮೆಯ ನಡುವಣ ಬೆಟ್ಟದ ಪ್ರಕೃತಿ ರಮಣೀಯವಾದ ಪ್ರಶಾಂತ ತಾಣ.ಇದು ದಕ್ಷಿಣ ಕಾಶಿ ಎಂದೇ ಕರೆಯಲ್ಪಡುತ್ತದೆ. ಇಲ್ಲಿರುವ ನೀರಿನ ಕುಂಡ- “ತೀರ್ಥರಾಮೇಶ್ವರ ಪುಣ್ಯ ತೀರ್ಥವು” ಎಲ್ಲ ಋತುಮಾನಗಳಲ್ಲೂ ತುಂಬಿರುತ್ತದೆ. ಈ ಪುಣ್ಯತೀರ್ಥದ ನೈರ್ಮಲ್ಯವನ್ನು ಕಾಪಾಡಲಿಕ್ಕಾಗಿ ಇದರ ನೀರನ್ನು ಕೊಡದಲ್ಲಿ ತುಂಬಿ ತೆಗೆದುಕೊಂಡು ಹೋಗಿ ಬೇರೆಡೆ ಸ್ನಾನಮಾಡುತ್ತಾರೆ.

ಈ ಪುಣ್ಯತೀರ್ಥ ತೀರ್ಥರಾಮೇಶ್ವರದಲ್ಲಿ ನೀರು ಬಳಸಿಕೊಂಡಷ್ಟೂ ಅದು ಭರ್ತಿಯಾಗಿ ತುಂಬಿ ತುಳುಕದಂತಿರುವುದೇ ಇದರ ವೈಶಿಷ್ಟ ವಾಗಿದೆ. ಈ ತೀರ್ಥಕುಂಡಕ್ಕೆ ಶೋಭೆಯೆನಿಸುವಂತಹ ಕಲ್ಲಿನ ಮಂಟಪವಿದೆ. ಆ ಮಂಟಪದ ಮೇಲೆ ಮೊಸಳೆ, ಮೊಸಳೆಯ ಮೇಲೇ ಗಂಗೆ ನೀರಿನ ಕಲಶ ಹಿಡಿದು ಕುಳಿತಿರುವ ಭಂಗಿ ಗಮನ ಸೆಳೆಯುತ್ತದೆ.

ಬೆಟ್ಟದ ಝರಿಯಂತೆ ಹರಿದು ತುಂಬುವ ಈ ಪುಣ್ಯತೀರ್ಥದಲ್ಲಿ ಸ್ನಾನಮಾಡಿದರೆ, ಕಾಶಿಯಲ್ಲಿ ಗಂಗಾನದಿ ಸ್ನಾನಮಾಡಿದಷ್ಟೇ ಪುಣ್ಯ ಬರುತ್ತದೆ ಎಂಬ ಪ್ರತೀತಿ ಇದೆ. ಲಿಂಗರೂಪಿಯಾಗಿ ಕಂಗೊಳಿಸುವ ತೀರ್ಥ ರಾಮೇಶ್ವರನಿಗೆ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳು ನೆರವೇರಿದಾಗ ಹರಕೆ ಕಾಣಿಕೆಗಳನ್ನೊಪ್ಪಿಸುವುದು ವಾಡಿಕೆಯಲ್ಲಿದೆ. ಇಲ್ಲಿ ಪುಟ್ಟದೊಂದು ಬ್ರಹ್ಮದೇವರ ಗುಡಿಯೂ ಇದೆ.

WhatsApp Group Join Now

Leave a Reply

Your email address will not be published. Required fields are marked *