ಪುರುಷರೇ ನೀವು ಸೇವಿಸಲೇಬೇಕು ಈ ಆಹಾರಗಳನ್ನು ಇದು ನಿಮ್ಮ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಡರಾಗಿ ಆರೋಗ್ಯದಿಂದ ಇರಲ್ಲೂ ಇದು ನಿಮಗೆ ಸಹಾಯ ಮಾಡುತ್ತದೆ.
ಕ್ಯಾರೆಟ್
ದೇಹದಲ್ಲಿ ಹೆಚ್ಚಾಗಿ ಕಂಡುಬರುವ ಕೆಟ್ಟ ಕೊಬ್ಬನ್ನು ಬಹಳ ಸುಲಭವಾಗಿ ಹೀರಿಕೊಳ್ಳುವ ಸಾರ್ಮಾರ್ಥ್ಯ ಅಂಶ ಕ್ಯಾರೆಟ ಸೇವನೆಯಲ್ಲಿಇದೆ. ಇದರಲ್ಲಿ ದೇಹದಲ್ಲಿ ಕಂಡು ಬರುವ ವಿವಿಧ ಕ್ಯಾನ್ಸರ್ ನಿಯಂತ್ರಿಸುವ ಶಕ್ತಿ ಇದೆ. ಇನ್ನು ಚಳಿಗಾಲದಲ್ಲಿ ಹೆಚ್ಚಾಗಿ ಕಂಡು ಬರುವ ಸಂಧಿವಾತ, ಅಸ್ತಮಾ ಇವುಗಳಿಂದ ನಮ್ಮನ್ನು ಕ್ಯಾರೆಟ್ ಸೇವನೆ ಕಾಪಡುತ್ತದೆ.
ಮೊಸರು
ಮೊಸರು ಸೇವನೆಯಿಂದ ದೇಶದಲ್ಲಿ ಪ್ರತಿರೋಧಕ ವ್ಯವಸ್ಥೆಯು ಬಹಳ ಸುಲಭವಾಗಿ ಪ್ರಬಲವಾಗುತ್ತದೆ. ಜೊತೆಗೆ ಬಾರೀ ಅಪಾಯ ಉಂಟು ಮಾಡುವ ಕ್ಯಾನ್ಸರ್ ರೋಗದಿಂದ ನಮ್ಮನ್ನು ಕಾಪಡುತ್ತದೆ. ನಾವು ಸೇವಿಸುವ ಮೊಸರು ಶುದ್ದವಾಗಿ ಮತ್ತು ಮಿತವಾದ ಸೇವನೆಯಾಗಿರಬೇಕು ಆಗ ದೇಹದಲ್ಲಿ ರಕ್ತ ಪರಿಚಲನೆ ಸಹ ಬಹಳ ಸರಾಗವಾಗಿ ನಡೆಯುತ್ತದೆ.
ಕಪ್ಪು ಹುರುಳಿ
ದೇಹಕ್ಕೆ ಬಹಳ ಉತ್ತಮ ಆಹಾರವಾದ ಕಪ್ಪು ಹುರುಳಿಯಲ್ಲಿಆ್ಯಂಟಿಆಕ್ಸಿಡೆಂಟ್, ಆಂಥೋಸಿಯಾನ್ಸಿಸ್ ಹೆಚ್ಚಾಗಿರುತ್ತದೆ. ಇದರಿಂದ ನಮ್ಮ ತಲೆಯ ಮೆದುಳಿನ ಶಕ್ತಿಯನ್ನು ಹೆಚ್ಚಿಸುವ ಸಾರ್ಮಾರ್ಥ್ಯವನ್ನು ಹೊಂದಿದೆ.
ಪಾಲಕ್ ಸೊಪ್ಪು
ನೀವು ಸೇವಿಸಬೇಕಾದ ಹಸಿರು ಸೊಪ್ಪು ಪಾಲಕ್ ನಿಜ. ಹೌದು, ಬಹಳ ಆರೋಗ್ಯಕ್ಕೆ ಬಹಳ ಉತ್ತಮ ಔಷದಿ ಗುಣಹೊಂದಿರುವ ಅಂಶ ಸೊಪ್ಪಿನಲ್ಲಿದೆ. ಪಾಲಕ್ ಸೊಪ್ಪನಲ್ಲಿ ಫಾಲಟ್ ಮತ್ತು ಒಮೆಗಾ-3 ಅಂಶ ಬಹಳ ಹೇರಳವಾಗಿರುತ್ತದೆ. ನಿಮಗೆ ಏನಾದರೂ ಪಾರ್ಶ್ವವಾಯು ಮತ್ತು ಹೃದಯಾಘಾತ ಇಂತಹ ರೋಗಗಳು ನಿಮ್ಮಲ್ಲಿ ಕಾಣಿಸಿಕೊಂಡಿರೆ ಮೊದಲು ಈ ಸೊಪ್ಪನ್ನು ಸೇವಿಸಿ. ಫಾಲಟೆ ಎಂಬ ಅಂಶವು ನಿಮ್ಮ ದೇಹದ ಶಿಶ್ನಕ್ಕೆ ಸುಲಭವಾಗಿ ರಕ್ತಸಂಚಾರವನ್ನು ಹೆಚ್ಚಾಸಿ ನಿಮ್ಮ ಶರೀರಕ್ಕೆಇನ್ನು ಇತರೆ ಅನುಕೂಲಗಳನ್ನು ಮಾಡಿಕೊಡುತ್ತದೆ.
ಟೊಮೆಟೊ
ಟೊಮೆಟೊದಲ್ಲಿಇರುವ ಲೈಕೋಪೆನ್ಮತ್ತು, ಆ್ಯಂಟಿಆಕ್ಸಿಡೆಂಟ್ ಅಂಶ ದೇಹಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಟೊಮೆಟೊ ಸೇವನೆಯಿಂದ ನಮ್ಮ ದೇಹದ ಶ್ವಾಸಕೋಶ, ಚರ್ಮ, ಮೂತ್ರಕೋಶ ಮತ್ತು ದೇಹದಲ್ಲಿ ಕಂಡು ಬರುವ ಕ್ಯಾನ್ಸರ್ ನ್ನು ಸಹ ನಿಯಂತ್ರಣ ಮಾಡುತ್ತದೆ.
ಈ ಮೇಲಿನ ಆಹಾರದ ಜೊತೆಗೆ ಬ್ಲೂಬೆರ್ರಿಗಳು, ಓಟ್ಸ್ ಆಹಾರಗಳನ್ನುನೀವು ಚಾಚು ತಪ್ಪದೇ ವಾರಕ್ಕೆ ಒಮ್ಮೆ ಒಂದು ಬಾರೀ ಸೇವಿಸಿ.