ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಹುರುಳಿಕಾಳು ಸಾಕಷ್ಟು ಪೌಷ್ಠಿಕಾಂಶ ಹೊಂದಿರುವ ದ್ವಿದಳ ಧಾನ್ಯವಾಗಿದ್ದು, ಇದು ಅನೇಕ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ. ಇದನ್ನು ಸೂಪ್, ಕರಿ, ಸಲಾಡ್ ಹೀಗೆ ಹಲವಾರು ರೀತಿಯಲ್ಲಿ ಸೇವಿಸಬಹುದು. ಇತ್ತೀಚಿನ ದಿನಗಳಲ್ಲಿ ಕಾಳುಗಳ ಸೇವನೆ ಅನ್ನು ಜನರು ಮರೆತು ಹೋಗಿದ್ದಾರೆ. ಹುರುಳಿಯಿಂದ ಉಂಟಾಗುವ ಆರೋಗ್ಯದ ಲಾಭಗಳು ಅಗಣಿತವಾಗಿವೆ. ನೀವು ಯಾವುದೇ ಅನಾರೋಗ್ಯವನ್ನು ಹೆಸರಿಸಿ, ಅದರ ಮೇಲೆ ಹುರುಳಿ – ಶಕ್ತಿಯು ಕಾರ್ಯವೆಸಗುತ್ತದೆ.
ಪಾರಂಪರಿಕ ವೈದ್ಯ ಗ್ರಂಥಗಳು, ಆಸ್ತಮಾ, ಬ್ರಾಂಕೈಟಿಸ್, ಪಾಂಡುರೋಗ, ಮೂತ್ರ ಸೋರಿಕೆ, ಮೂತ್ರ ಪಿಂಡದ ಕಲ್ಲುಗಳು ಹಾಗೂ ಹೃದಯರೋಗಗಳಲ್ಲಿ ಹುರುಳಿಯ ಉಪಯೋಗವನ್ನು ವಿವರಿಸುತ್ತವೆ. ಕಾಮಾಲೆ ಅಥವಾ ಸ್ರಾವರೋಧಗಳಿಂದ ನರಳುತ್ತಿರುವವರಿಗೆ ಆಯುರ್ವೇದ ಪಾಕಪದ್ಧತಿಯು, ಹುರುಳಿಯನ್ನು ಶಿಫಾರಸ್ ಮಾಡುತ್ತದೆ. ಸಂಧಿವಾತ, ಉದರದಲ್ಲಿನ ಹುಳುಗಳು, ಕಣ್ಣಿನ ಸೋಂಕು ಹಾಗೂ ಮೂಲವ್ಯಾಧಿಗಳು ಹುರುಳಿಯ ಮುಂದೆ ಹೆದರಿ ಓಡುವುದು.
ಇದರಲ್ಲಿ ಕ್ಯಾಲ್ಷಿಯಂ ಪೊಟ್ಯಾಶಿಯಂ ಮ್ಯಾಗ್ನಿಷಿಯಂ ಕಬ್ಬಿಣ ಜಿಂಕ್ ಸತು ರಂಜಕ ಅಂಶಗಳು ಅಡಗಿವೆ. ಹುರುಳಿ ಕಾಳು ಸಾರು ಮಾನವನ ದೇಹಕ್ಕೆ ಬಹಳ ಪ್ರಯೋಜನಕಾರಿ. ಹುರುಳಿ ಕಾಳು ಫೈಬರ್ ಅಂಶವನ್ನು ಹೊಂದಿದೆ ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಕರುಳು ಹೆಚ್ಚಿನ ದ್ರವನನ್ನು ಹೀರಿಕೊಳ್ಳುತ್ತದೆ. ಅತಿಸಾರ ಕಡಿಮೆ ಚಲನ ವಲನ ಮಾಡುತ್ತದೆ. ನಿಮ್ಮ ಹೊಟ್ಟೆಯನ್ನು ತಂಪು ಆಗಿ ಇರಿಸಲು ಹುರುಳಿ ಕಾಳು ಸಹಾಯ ಮಾಡುತ್ತದೆ.
ಇನ್ನೂ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಅಂಶವು ಇರುವುದರಿಂದ ಹುರುಳಿ ಕಾಳು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಹುರುಳಿ ಕಾಳು ಸೇವನೆ ಮಾಡಿದರೆ ತೂಕವು ಕಡಿಮೆ ಆಗುತ್ತದೆ. ಮಲಬದ್ಧತೆಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅದನ್ನು ಕೂಡ ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿದೆ ಹುರುಳಿ ಕಾಳು.ಪ್ರೊಟೀನ್ ಹೇರಳವಾಗಿರುವ ಆಹಾರಗಳನ್ನು ಸೇವಿಸುವುದರಿಂದ ಹೊಟ್ಟೆ ತುಂಬಿರುವ ಅನುಭವವಾಗುವುದು ಮಾತ್ರವಲ್ಲದೆ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.
ಹೆಚ್ಚು ಪ್ರೊಟೀನ್ ಯುಕ್ತ ಪದಾರ್ಥಗಳು ತಳಭಾಗದ ಚಯಾಪಚಯ ಕ್ರಿಯೆಯ ಮಟ್ಟವನ್ನು ಸಮತೋಲನವಾಗಿ ಕಾಪಾಡಿಕೊಳ್ಳುವಂತೆ ಮಾಡುತ್ತದೆ ಇದರಿಂದಾಗಿ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ.ಹುರಳಿ ದೇಹದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ . ಇದರಿಂದ ಇದು ಮಧುಮೇಹ ಮತ್ತು ಹೆಚ್ಚಿದ ಬೊಜ್ಜಿನ ಕಾರಣದಿಂದ ಉಂಟಾಗುವ ನಿಮಿರು ದೌರ್ಬಲ್ಯದಿಂದ ಬಳಲುತ್ತಿರುವ ಪುರುಷರಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಇದು ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ ಸಾಮಾನ್ಯ ಗುಪ್ತಚರ ಕ್ರಿಯೆಗೆ ಅಗತ್ಯವಾದ ಪೋಷಕಾಂಶಗಳನ್ನು ಪೂರೈಸುತ್ತದೆ. ಕಡಿಮೆ ವೀರ್ಯಾಣುಗಳ ಸಂಖ್ಯೆ ಅಥವಾ ಒಲಿಗೋಸ್ಪೆರ್ಮಿಯಾ ಇರುವಾಗ ಈ ದ್ವಿದಳ ಧಾನ್ಯವು ಖನಿಜಗಳು ಮತ್ತು ಪ್ರೋಟೀನ್ಗಳನ್ನು ಯಥೇಚ್ಛವಾಗಿ ಪೂರೈಸಿ ವೀ-ರ್ಯಾಣುಗಳಿಗೆ ಅತ್ಯುತ್ತಮವಾದ ಪೋಷಣೆಯನ್ನು ನೀಡುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ, ರಂಜಕ, ಕಬ್ಬಿಣ ಮತ್ತು ಅಮೈನೋ ಆಸಿಡ್ಗಳು ವೀ-ರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ.
ಆಯುರ್ವೇದ ಆಚಾರ್ಯರು ಈ ಹುರುಳಿಯನ್ನು ವೀ-ರ್ಯದ ದ್ರವೀಕರಣದ ಸಮಯವನ್ನು ಕಡಿಮೆ ಮಾಡಲು ಮತ್ತು ಅದರಿಂದ ಕಲ್ಮಶಗಳನ್ನು ತೆಗೆದುಹಾಕಲು ಶಿಫಾರಸು ಮಾಡುತ್ತಾರೆ. ಅಲ್ಪ ಪ್ರಮಾಣದ ರಕ್ತಸ್ರಾವ ಅಥವಾ ಅನಿಯಮಿತ ಮುಟ್ಟಿನ ಚಕ್ರದಿಂದ ಬಳಲುತ್ತಿರುವ ಮಹಿಳೆಯರಿಗೆ ಹುರಳಿ ಬಹಳ ಉಪಯುಕ್ತ . ಇದರ ಕಬ್ಬಿಣದ ಅಂಶವು ಮುಟ್ಟಿನ ಚಕ್ರಗಳಿಂದ ನಷ್ಟವಾಗುವ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ತೂಕ ನಿರ್ವಹಣೆಯನ್ನು ಮಾಡಲು ಇದು ಸಹಾಯ ಮಾಡುವುದರಿಂದ, ಇದನ್ನು ಪಿಸಿಓಎಸ್ ಪಿಸಿಒಡಿ ಆಯುರ್ವೇದ ಡಯಟ್ನಲ್ಲಿ ಶಿಫಾರಸು ಮಾಡಲಾಗುತ್ತದೆ