ನಮಸ್ತೆ ಪ್ರಿಯ ಓದುಗರೇ, ಹಳೆಯ ಕಾಲದಲ್ಲಿ ಈ ಅರಳಿ ಮರಕ್ಕೆ ಕೊಡಲಿ ಹಾಕಲು ಬಿಡುತ್ತಿರಲಿಲ್ಲ. ಅದಕ್ಕೆ ಕಾರಣ ಏನು ಅಂದ್ರೆ ಈ ಅರಳಿ ಮರದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು ನೆಲೆಸಿರುವುದು ಎಂದು ಹೇಳುತ್ತಿದ್ದರು. ಅಂದರೆ ಅಷ್ಟು ಒಳ್ಳೆಯ ಆರೋಗ್ಯಕರ ಗುಣಗಳನ್ನ ಮತ್ತು ಅಷ್ಟು ವಿಶಿಷ್ಟತೆಯನ್ನು ಈ ಮರ ಹೊಂದಿದೆ. ಅರಳಿ ಮರದ ಎಲೆ, ನಾವು ಓಡಾಡುವ ದಾರಿಯಲ್ಲಿ ಇರುತ್ತೆ, ಯಾರೂ ಮನೆ ಕಾಂಪೌಂಡ್ ಒಳಗೆ ಇರುತ್ತೆ, ರಸ್ತೆ ಬದಿಯಲ್ಲಿ ಕೂಡ ಇರುತ್ತೆ, ಯಾವ ದೇವಸ್ಥಾನಕ್ಕೂ ಹೋದರೂ ಇರುತ್ತೆ. ಊರು ಪ್ರಾರಂಭ ಆಗುತ್ತೆ ಅಂದ್ರೆ ಊರಿನ ಬಾಗಿಲಲ್ಲಿ ಒಂದು ಅರಳಿ ಮರ ಇರ್ತ ಇತ್ತು. ಇದು ಸದಾ ಕಾಲವೂ ಆಮ್ಲ ಜನಕವನ್ನೆ ಬಿಡುಗಡೆ ಮಾಡುತ್ತಾ ಇರುತ್ತದೆ. ಮತ್ತೆ ವಾತಾವರಣದಲ್ಲಿ ಏನಾದರೂ ಅಶುದ್ಧ ತೆ ಇದ್ರೆ ಅದನ್ನೆಲ್ಲ ತಾನು ಎಳೆದುಕೊಂಡು ಬರೀ ಆಮ್ಲ ಜನಕವನ್ನು ಮಾತ್ರ ಕೊಡುತ್ತದೆ. ಅಂತಹ ವಾತಾವರಣದ ಗಾಳಿಯನ್ನು ಕುಡಿದಾಗ ನಮಗೆ ಯಾವ ರೀತಿಯ ಶ್ವಾಸಕೋಶದ ತೊಂದರೆಯೂ ಆಗುವುದಿಲ್ಲ, ಮಲಿನತೆಯೂ ಬರುವುದಿಲ್ಲ. ಹಾಗಾಗಿ ಈ ಅರಳಿ ಮರದ ಉಪಯೋಗಗಳನ್ನು ನೋಡುವುದಾದರೆ ಮೊದಲನೆಯದಾಗಿ ಇದು ಶ್ವಾಸಕೋಶದ ಶುದ್ದಿ ಮಾಡುತ್ತದೆ ಜೊತೆಗೆ ಉಸಿರಾಟದ ತೊಂದರೆಯೂ ಬಾರದಂತೆ ನೋಡಿಕೊಳ್ಳುತ್ತದೆ.
ನಾವು ವಾಸ ಮಾಡುವ ಸುತ್ತ ಮುತ್ತ ಅರಳಿ ಮರ ಇಲ್ಲ ಎಂದಾಗ ಅದೆಲ್ಲೋ ಇರುವ ಅರಳಿ ಮರದ ಎಲೆಗಳನ್ನು ತಂದು ಒಂದು ಟೀ ಮಾಡಿಕೊಂಡು ಕುಡಿದರಾಯ್ತು. ಈ ಟೀ ಕುಡಿಯುವುದರಿಂದ ಶ್ವಾಸಕೋಶದ ಶುದ್ದಿ ಆಗುವುದು ಖಂಡಿತ. ಇದನ್ನು ಸೇವನೆ ಮಾಡುವುದರಿಂದ ಚರ್ಮದಲ್ಲಿ ಬರ್ಥಕ್ಕಂತ ದೋಷಗಳು ಯಾವುದೂ ಬರುವುದಿಲ್ಲ. ಆಗಿದ್ದಾಗ್ಗೆ ತಿಂಗಳಿನಲ್ಲೇ ಒಮ್ಮೆ ಆದರೂ ಈ ಅರಳಿ ಮರದ ಟೀ ಮಾಡಬಹುದು. ಟೀ ಮಾಡಬೇಕೆಂದು ಏನೂ ಇಲ್ಲ ಚಿಗುರಿದ ಎರೆಡು ಎಲೆ ಸಿಕ್ಕಿದರೆ ಅವುಗಳನ್ನೇ ತಿಂದರೂ ಸಾಕು. ಆ ರೀತಿ ಆವಾಗಾವಾಗ ಎಲೆಗಳನ್ನು ತಿಂತ ಬಂದ್ರೆ ಚರ್ಮದ ಯಾವ ಸಮಸ್ಯೆಗಳೂ ಬರೋದಿಲ್ಲ. ನೆವೆ ಕೂಡ ಆಗೋದಿಲ್ಲ. ನೆಕ್ಸಿಮಾ ದಂತ ಯಾವ ತೊಂದರೆಗಳೂ ಬರೋದಿಲ್ಲ. ಸೋರಿಯಾಸಿಸ್, ಹಾಗೂ ಹುಳುಕಡ್ಡಿ ಆಗುವಂತದು ಯಾವ ಸಮಸ್ಯೆಯೂ ಬರೋದಿಲ್ಲ. ಈ ಎಲ್ಲಾ ಸಮಸ್ಯೆಗಳು ಬಂದಿದ್ದೆ ಆದಲ್ಲಿ ಅರಳಿ ಮರದ ತೊಗಟೆಯ ತುಂಡನ್ನು ತಂದು, ರಾತ್ರಿ ಮಲಗುವ ಮುನ್ನ ಆ ತೊಗಟೆಯನ್ನು ನೀರಲ್ಲಿ ತೊಳೆದು ಒಂದು ಲೋಟ ನೀರಿನಲ್ಲಿ ಹಾಕಿ ಮಲಗಿ. ಬೆಳಿಗ್ಗೆ ಎದ್ದ ಕೂಡಲೇ ಆ ನೆನೆಸಿಟ್ಟ ನೀರನ್ನು ಕುಡಿಯಿರಿ. ದಿನಾ ಅದೇ ತೊಗಟೆಯನ್ನ ನೀರಲ್ಲಿ ನೆನೆ ಇಡಿ. ಬೆಳಿಗ್ಗೆ ಅದೇ ನೀರನ್ನು ಕುಡಿಯಿರಿ. ಈ ರೀತಿ ಕುಡಿತಾ ಬಂದ್ರೆ ಚರ್ಮದಲ್ಲಿನ ಎಂತಹ ಸಮಸ್ಯೆಗಳಿದ್ದರೂ ಮರೆ ಆಗುತ್ತವೆ. ಮತ್ತೆ ಈ ಎಲೆಯನ್ನು ನಮಗೆ ಹೊಟ್ಟೆ ನೋವು ಬಂದಾಗ ಬಳಕೆ ಮಾಡಬಹುದು. ಯಾರಿಗಾದರೂ ಹೊಟ್ಟೆ ನೋಯುತ್ತಿದ್ದರೆ ಈ ಟೀ ಮಾಡಿಕೊಂಡು ಕುಡಿಯುವುದರಿಂದ ಯಾವುದೇ ರೀತಿಯ ಹೊಟ್ಟೆ ನೋವು ಅರ್ಧ ಗಂಟೆಯಲ್ಲಿ ಕಡಿಮೆ ಆಗುತ್ತದೆ. ಹೊಟ್ಟೆ ನೋವು ನಾನಾ ಕಾರಣಗಳಿಂದ ಬರುತ್ತೆ ಅದರಲ್ಲಿ ಗ್ಯಾಸ್ಟ್ರಿಕ್ ಇಂದ ಬರುವಂಥದ್ದು, ಹೊಟ್ಟೆ ಉಬ್ಬರದಂತ ಸಮಸ್ಯೆ ಅದನ್ನೂ ಈ ಟೀ ಉಪಶಮನ ಮಾಡುತ್ತೆ.
ತುಂಬಾ ಉಷ್ಣಾಂಶ ಜಾಸ್ತಿ ಆದಾಗ ಕೂಡ ಹೊಟ್ಟೆ ನೋವು ಬರುವುದು ಸಹಜ ಅದಕ್ಕೂ ಈ ಟೀ ಸಹಾಯ ಮಾಡುತ್ತೆ. ಇನ್ನೂ ಕರುಳಿನಲ್ಲಿ ಯಾವುದಾದರೂ ಬೇಡವಾದ ಜೀವಿಗಳು ಇದ್ದಾಗ, ಅಂದರೆ ಯಾವುದಾದರೂ ಬೇಡವಾದ ಬ್ಯಾಕ್ಟೀರಿಯಾ ಹುಟ್ಟಿಕೊಂ ಡಾಗ ಆ ನೋವನ್ನೂ ಸಹ ಈ ಟೀ ಶಮನ ಮಾಡುತ್ತೆ. ಮತ್ತೊಂದು ಮುಖ್ಯ ವಿಚಾರ ಎಂದರೆ ಉರಿಮೂತ್ರ ಸಮಸ್ಯೆ, ಅಂದರೆ ಮೂತ್ರ ಮಾಡುವಾಗ ತುಂಬಾ ಉರಿ ಉಂಟಾಗುತ್ತದೆ, ಇನ್ನೂ ಕೆಲವರಿಗೆ ಸ್ವಲ್ಪ ಸ್ವಲ್ಪವೇ ಮೂತ್ರ ವಿಸರ್ಜನೆ ಮಾಡಬೇಕು ಎನಿಸುವುದು. ಇದಕ್ಕೆ ಅಲ್ಪಾಂಶ ಮೂತ್ರ ಎಂದು ಹೇಳುತ್ತಾರೆ. ಈ ಸಮಸ್ಯೆಗೆ ಇದೊಂದು ಅದ್ಭುತವಾದ ದಿವ್ಯೌಷಧ. ಇದೇ ಅರಳಿ ಮರದಲ್ಲಿ ಅದಕ್ಕೆ ಸರಿಯಾದ ಚಿಕಿತ್ಸೆ ದೊರೆಯುತ್ತದೆ. ಇನ್ನೂ ಕೆಲವರಿಗೆ ಹಳದಿ ಮೂತ್ರ ವಿಸರ್ಜನೆ ಆಗುತ್ತೆ ಅದಕ್ಕೂ ಈ ಅರಳಿ ಮರದಲ್ಲಿ ಪರಿಹಾರ ಇದೆ. ಹಾಗಾಗಿ ಅರಳಿ ಮರ ದೇವರು ನಮಗೆ ಕೊಟ್ಟಿರುವ ಒಂದು ಅದ್ಭುತ ವರ. ಮತ್ತೊಂದು ವಿಶೇಷ ವಿಷ್ಯ ಎಂದ್ರೆ, ಸಂತಾನ ಹೀನತೆಗೆ ಇದೊಂದು ವರ ಇದ್ದಂತೆ. ಸಂತಾನ ಹೀನತೆ ಸಮಸ್ಯೆ ಇರುವವರು ಮೊದಲೆಲ್ಲಾ ಪ್ರಾತಃ ಕಾಲದಲ್ಲಿ ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕುತ್ತಿದ್ದರು. ನಿಮಗೆ ಪ್ರದಕ್ಷಿಣೆ ಹಾಕಲು ಮನಸಿಲ್ಲ ನಾವು ದೇವರನ್ನು ನಂಬಲ್ಲ ಎಂದರೆ, ಅರಳಿ ಮರದ ಕೆಳಗೆ 15 ನಿಮಿಷಗಳ ಕಾಲ ಕುಳಿತರೆ ಸಾಕು. ವೀರ್ಯದ ಗುಣಮಟ್ಟ ಹೆಚ್ಚಿಸಿ, ಗರ್ಭ ಕೋಶದ ಸೋಂಕನ್ನು ಕೂಡ ನಿವಾರಣೆ ಮಾಡುತ್ತದೆ. ಹಾಗಾಗಿ ಇಂತಹ ಅದ್ಭುತವಾದ ಅರಳಿ ಮರವನ್ನು ಜೋಪಾನ ಮಾಡೋಣ, ರಕ್ಷಣೆ ಮಾಡೋಣ, ಅದರಿಂದ ಸರಿಯಾದ ಆರೋಗ್ಯವನ್ನು ವೃದ್ಧಿ ಸಿಕೊಳ್ಳೋಣ. ಹಾಗಾದರೆ ಅರಳಿ ಮರದ ಎಲೆಗಳ ಟೀ ಮಾಡುವ ವಿಧಾನ ನೋಡೋಣ- ಮೊದಲು ಒಂದು ಪಾತ್ರೆಗೆ ನೀರನ್ನು ಹಾಕಿ ಅದಕ್ಕೆ 4 ಅರಳಿ ಎಲೆಗಳನ್ನು ಕತ್ತರಿಸಿ ಹಾಕಿ, ನಂತರ ಲಾವಂಚ ಬೇರುಗಳನ್ನು ಹಾಕಿ, ಏಲಕ್ಕಿ ಪುಡಿ ಸೇರಿಸಿ, ಕೊನೆಗೆ ನಿಂಬೆ ಹಣ್ಣಿನ ರಸ ಹಾಗೂ ಜೇನುತುಪ್ಪವನ್ನು ಸೇರಿಸಿದರೆ ಅರಳಿ ಮರದ ಎಲೆಗಳ ಟೀ ಸವಿಯಲು ಸಿದ್ಧ.