ನಮಸ್ತೆ ನಮ್ಮ ಆತ್ಮೀಯ ಓದುಗರೇ, ಪೇರಳೆ ಹಣ್ಣು ಅಥವಾ ಸೀಬೆ ಹಣ್ಣಿನ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಈ ಹಣ್ಣು ವರ್ಷದ 365 ದಿನವೂ ಸಿಕ್ಕುತ್ತದೆ. ಪೇರಳೆ ಹಣ್ಣು ಬರೀ ರುಚಿಯನ್ನಲ್ಲದೆ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಒಂದು ಪೇರೆಳೆ ಹಣ್ಣು ಹತ್ತು ಸೇಬು ಹಣ್ಣುಗಳಿಗೆ ಸಮ ಎಂದು ಹೇಳಲಾಗುತ್ತದೆ ಆದರೆ ಹೆಣ್ಣಿಗಿಂತ ಅದರ ಎಲೆಯಲ್ಲಿ ದುಪ್ಪಟ್ಟು ಔಷಧೀಯ ಗುಣಗಳಿವೆ ಎಂದೂ ಯಾರಿಗೂ ತಿಳಿದಿಲ್ಲ. ಪೇರಳೆ ಹಣ್ಣಿನ ಔಷಧೀಯ ಗುಣಗಳ ಬಗ್ಗೆ ಸಾಕಷ್ಟು ಜನರಿಗೆ ಅರಿವಿರುತ್ತದೆ ಆದರೆ ಪೇರಳೆ ಹಣ್ಣಿನ ಎಳೆಗಳ ಬಗ್ಗೆ ಅದೆಷ್ಟೋ ಜನರಿಗೆ ಗೊತ್ತಿರುವುದಿಲ್ಲ. ಇವತ್ತಿನ ಈ ಲೇಖನದಲ್ಲಿ ಪೇರಳೆ ಹಣ್ಣಿನ ಎಳೆಗಳ ಮಹತ್ವ ಮತ್ತು ಉಪಯೋಗಗಳ ಬಗ್ಗೆ ತಿಳಿಯೋಣ ಬನ್ನಿ. ನಿಮಗೇನಾದ್ರೂ ವಿಪರೀತ ತಲೆ ಹೊಟ್ಟು, ತಲೆ ಕೆರೆತ, ಕೂದಲು ಉದುರುವ ಸಮಸ್ಯೆ ಇದ್ದರೆ ನೀವು ಈ ಪೇರಳೆ ಹಣ್ಣಿನ ಎಲೆಗಳನ್ನು ಬಳಸಿಕೊಂಡು ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಪ್ರತಿದಿನ ಹಲವಾರು ಜನರು ತಮ್ಮ ಅನಾರೋಗ್ಯದ ಕಾರಣದಿಂದ, ಅತಿಯಾದ ಚಿಂತೆ ಅಥವಾ ಇನ್ನಾವುದೇ ಸಮಸ್ಯೆಗಳಿಂದ ಅವರು ಎಷ್ಟೋ ಕೂದಲುಗಳನ್ನು ಕಳೆದುಕೊಂಡಿರುತ್ತಾರೆ. ಆದರೆ ಉದುರಿರುವ ಜಾಗದಲ್ಲಿ ಹೊಸ ಕೂದಲು ಹುಟ್ಟಿದರೆ ಮಾತ್ರ ಕೂದಲಿನ ದಟ್ಟತೆ ಹೆಚ್ಚುತ್ತದೆ.
ಕೂದಲಿನ ದಟ್ಟತೆ ಹೆಚ್ಚಲು ಮತ್ತು ತಲೆ ಹೊಟ್ಟು ನಿವಾರಣೆ ಆಗಲು ಈ ಪೇರಳೆ ಹಣ್ಣಿನ ಎಲೆಗಳು ಸಹಾಯ ಮಾಡುತ್ತದೆ. ಅದಕ್ಕಾಗಿ ನೀವು ಏನು ಮಾಡಬೇಕೆಂದರೆ, ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಎರೆಡು ಲೋಟ ನೀರನ್ನು ಹಾಕಿ ನಂತರ ಎರೆಡು ಚಮಚ ಮೆಂತೆ ಕಾಳನ್ನು ಹಾಕಿ ನಂತರ 10-15 ರಷ್ಟು ಪೇರಳೆ ಎಲೆಗಳನ್ನು ಹಾಕಿ 15 ನಿಮಿಷ ಕುದಿಸಿ, ಇದನ್ನು ತಣ್ಣಗಾದ ಬಳಿಕ ಇದನ್ನು ಸೋಸಿಕೊಂಡು ನಿಮ್ಮ ಕೂದಲಿನ ಬುಡಕ್ಕೆ ನಯವಾಗಿ ಮಸಾಜ್ ಮಾಡಿ. ನಂತರ 20 ನಿಮಿಷಗಳ ಬಳಿಕ ಉಗುರು ಬೆಚ್ಚನೆಯ ನೀರಿನಲ್ಲಿ ನಿಮ್ಮ ಕೂದಲುಗಳನ್ನು ತೊಳೆದುಕೊಳ್ಳಿ. ಈ ರೀತಿ ವಾರದಲ್ಲಿ ಒಂದು ಅಥವಾ ಎರೆಡು ಸಾರಿ ಮಾಡಿ ನೋಡಿ ಇದರಿಂದ ನಿಮ್ಮ ಕೂದಲು ಉದುರುವ ಸಮಸ್ಯೆ ಕಡಿಮೆ ಆಗುತ್ತದೆ. ಇದನ್ನು ಇನ್ನೊಂದು ರೀತಿಯಲ್ಲಿ ಕೂಡ ಹಚ್ಚಿಕೊಳ್ಳಬಹುದು, ಒಂದು ಮುಷ್ಟಿಯಷ್ಟು ಪೇರಳೆ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ನಿಮ್ಮ ಮನೆಯಲ್ಲಿ ಒಳ್ಳು ಅಥವ ಮಿಕ್ಸಿ ಇದ್ದರೆ ಮಿಕ್ಸಿಯಲ್ಲಿ ಇದನ್ನು ಪೇಸ್ಟ್ ಮಾಡಬಹುದು. ಈ ಪೇಸ್ಟ್ ನ್ನು ನಿಮ್ಮ ಕೂದಲಿಗೆ ಹಚ್ಚಿ 15 ನಿಮಿಷದ ನಂತರ ತಲೆ ತೊಳೆದುಕೊಳ್ಳಿ ಹೀಗೆ ಮಾಡುವುದರಿಂದ ತಲೆ ಹೊಟ್ಟಿನ ಮತ್ತು ಕೂದಲು ಉದುರುವ ಸಮಸ್ಯೆ ಬೇಗ ನಿವಾಣೆಯಾಗುವುದು. ಇನ್ನೂ ಹದಿಹರೆಯದಲ್ಲಿ ಸಾಮಾನ್ಯವಾಗಿ ಹುಡುಗ ಹುಡುಗಿಯರಿಗೆ ಕಾಡುವ ಸಮಸ್ಯೆ ಅಂದ್ರೆ ಅದು ಮುಖದ ಮೇಲೆ ಮೊಡವೆಗಳು ಮತ್ತು ಆ ಮೊಡವೆಗಳು ಹೋದ ಮೇಲಿನ ಕಪ್ಪು ಕಲೆಗಳು. ಈ ಕಲೆಗಳು, ಮೊಡವೆಗಳು ನಿಮ್ಮ ಸೌಂದರ್ಯವನ್ನು ಕಡಿಮೆ ಮಾಡುತ್ತಿದ್ದಾರೆ ನೀವು ಈ ಪೇರಳೆ ಮರದ ಎಲೆಗಳಿಂದ ಗುಣ ಕಾಣಬಹುದು. ಈ ಎಲೆಗಳಲ್ಲಿ ಮೊಡವೆಗಳಿಗೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಗುಣಗಳಿವೆ. ಇದಕ್ಕಾಗಿ ನೀವು ಈ ಪೇರಳೆ ಮರದ ಎಲೆಗಳನ್ನು ತಂದು ಪೇಸ್ಟ್ ತಯಾರಿಸಿ ಅದನ್ನು ನಿಮ್ಮ ಮೊಡವೆಗಳು ಮೇಲೆ ಹಚ್ಚಿ ಅದು ಒಣಗಿದ ನಂತರ ತಣ್ಣೀರಿನಲ್ಲಿ ಮುಖ ತೊಳೆಯಬೇಕು. ಈ ರೀತಿ ನೀವು ನಿಯಮಿತವಾಗಿ ಹಚ್ಚುತ್ತಾ ಬಂದರೆ ನಿಮ್ಮ ಮೊಡವೆಗಳ ಮತ್ತು ಕಪ್ಪು ಕಲೆಗಳ ಸಮಸ್ಯೆ ಬಗೆಹರಿಯುತ್ತದೆ.
ಇನ್ನೂ ವಸಡಿನ ಅಥವಾ ಹಲ್ಲು ನೋವಿನ ಸಮಸ್ಯೆ ಇದ್ದರೆ ಪೇರಳೆ ಮರದ ಎಲೆಗಳನ್ನು ತಂದು ಅವುಗಳನ್ನು ನೀರಲ್ಲಿ ಕುದಿಸಿ ಅದನ್ನು ಸೋಸಿಕೊಂಡು ಅದರಿಂದ ಬಾಯಿ ಮುಕ್ಕಳಿಸುವುದರಿಂದ ಬಾಯಲ್ಲಿರುವ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಇದರಿಂದ ನೋವು ಕಡಿಮೆ ಆಗುತ್ತದೆ. ಹಾಗೂ ವಸಡುಗಳ ನಡುವೆ ಕಟ್ಟಿಕೊಂಡಿರುವ ಕ್ರಿಮಿಕೀಟಗಳು ನಾಶವಾಗಿ ವಸಡು ಪುನಶ್ಚೇತನಗೊಳ್ಳುತ್ತದೆ. ಈ ಕಾರಣದಿಂದಾಗಿ ಹಲವಾರು ಆಯುರ್ವೇದಿಕ್ ಔಷಧಿಗಳ ತಯಾರಿಕೆಯಲ್ಲಿ ಬಳಸುತ್ತಾರೆ. ನೀವು ಈ ಪೇರಳೆ ಎಲೆಗಳನ್ನು ಪೇಸ್ಟ್ ಮಾಡಿ ಹಲ್ಲು ಉಜ್ಜಲು ಮತ್ತು ವಸಡು ತಿಕ್ಕಲು ಬಳಕೆ ಮಾಡಬಹುದು. ಕೊನೆಯದಾಗಿ ಅಸ್ತಮಾ ತೊಂದರೆ ಇರುವವರು ಇದನ್ನು ಕುಡಿಯಬಹುದು. ಎಲೆಗಳನ್ನು ಕುದಿಸಿದ ನೀರನ್ನು ಸೋಸಿಕೊಂಡು ಕುಡಿಯುವುದರಿಂದ ಶ್ವಾಸಕೋಶ ಮತ್ತು ಶ್ವಾಸನಾಳದ ಸಮಸ್ಯೆ ಕಡಿಮೆ ಆಗಿ, ಕಟ್ಟಿದ ಕಫ ಹೊರಗೆ ಬಂದು ಅಸ್ತಮಾ ಕೂಡ ಕಡಿಮೆ ಆಗುತ್ತದೆ ಮತ್ತು ಇದು ದೇಹದ ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ಕೊಲ್ಲುವ ಗುಣವಿದ್ದು ನಮ್ಮ ದೇಹದಲ್ಲಿ ಗಾಯಗಳಾಗಿದ್ದರೆ ಈ ಎಲೆಗಳ ಪೇಸ್ಟ್ ನ್ನು ಹಚ್ಚುವುದರಿಂದ ನೋವು ಗುಣವಾಗುತ್ತವೆ. ನೋಡಿದ್ರಲ್ಲ ಸ್ನೇಹಿತರೆ ಈ ಪೇರಳೆ ಮರದ ಎಲೆಗಳಿಂದ ಎಷ್ಟೆಲ್ಲಾ ಉಪಯೋಗಗಳಿವೆ ಎಂದು. ಈ ಮಾಹಿತಿ ಇಷ್ಟವಾಗಿದ್ದರೆ ನೀವು ಅನುಸರಿಸಿ ಇತರರಿಗೂ ತಿಳಿಸಿ. ಶುಭದಿನ.