ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಅಧಿಕ ರಕ್ತದೊತ್ತಡ ಮಧುಮೇಹ ಅನ್ನುವ ಕಾಯಿಲೆಗಳಿಗೆ ಅಂತ ಪ್ರಮುಖವಾಗಿ ವೈದ್ಯರು ಸಿಗುತ್ತಿದ್ದಾರೆ ಅಷ್ಟೊಂದು, ಇವೆರಡೂ ಕಾಯಿಲೆಗಳು ರಾರಾಜಿಸುತ್ತಿವೆ ರಕ್ತದೊತ್ತಡವು ಹೆಚ್ಚಾಗಿ ಆರೋಗ್ಯ ಸಮಸ್ಯೆ ಉಂಟು ಮಾಡುವುದನ್ನು ಅಧಿಕ ರಕ್ತದೊತ್ತಡ ಎನ್ನಬಹುದು. ಅಧಿಕ ರಕ್ತದೊತ್ತಡ ಅನ್ನುವುದು ಬಹಳ ಡೇಂಜರ್ ಅದನ್ನು ನಾವು ಸೈಲೆಂಟ್ ಕಿಲ್ಲರ್ ಅಂತ ಕೂಡ ಕರೆಯಬಹುದು. ಇದನ್ನು ನಾವು ನಿರ್ಲಕ್ಷ್ಯ ಮಾಡಿದರೆ ಇದು ನಮ್ಮ ಜೀವಕ್ಕೆ ಹಾನಿ ಉಂಟು ಮಾಡುತ್ತದೆ.
ಅಂದ್ರೆ ಹೃದ್ರೋಗದ ಸಮಸ್ಯೆಗಳು ಕಂಡು ಬರುತ್ತದೆ. ಈ ಅಧಿಕ ರಕ್ತದೊತ್ತಡ ಬರಲು ಮುಖ್ಯ ಕಾರಣ ಏನು ಅಂತ ಹೇಳುವುದಾದರೆ ವೈಯಕ್ತಿಕ ಬದುಕಿನಲ್ಲಿ ಕೆಲಸದ ಒತ್ತಡದಲ್ಲಿ ಮಾನಸಿಕವಾಗಿ ದೈಹಿಕವಾಗಿ ಟೆನ್ಷನ್ ಒತ್ತಡ ಖಿನ್ನತೆ ಮಾಡಿಕೊಳ್ಳುವವರಿಗೆ ಈ ಕಾಯಿಲೆ ಬೇಗqನೆ ಆವರಿಸುತ್ತದೆ. ಈ ಸಮಸ್ಯೆಗೆ ಪರಿಹಾರವನ್ನು ನೀಡುವ ವೈದ್ಯರು ಹೇಳುವ ಎಲ್ಲ ಸೂಚನೆಯನ್ನು ಆಹಾರವನ್ನು ಮಾತ್ರೆಗಳನ್ನು ಸೇವನೆ ಮಾಡುವುದರ ಜೊತೆಗೆ, ದಿನಕ್ಕೊಂದು ಸೀಬೆ ಹಣ್ಣು ತಿನ್ನುವ ಅಭ್ಯಾಸವನ್ನು ಮಾಡಿಕೊಂಡರೆ, ಈ ಕಾಯಿಲೆಯನ್ನು ನಿಯಂತ್ರಣ ಮಾಡಬಹುದು.
ಹಾಗಾದರೆ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ. ಅಧಿಕ ರಕ್ತದೊತ್ತಡ ಇರುವವರು ಸರಳವಾದ ಜೀವನ ಶೈಲಿ ಜೊತೆಗೆ ಉತ್ತಮವಾದ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಯಾವುದೇ ಕಾರಣಕ್ಕೂ ಉಪ್ಪಿನಂಶ ಹೆಚ್ಚು ಇರುವ ಆಹಾರವನ್ನು ಸೇವನೆ ಮಾಡಬಾರದು. ವೈದ್ಯರು ಹೇಳುವ ಮಾತ್ರೆಗಳನ್ನು ತೆಗೆದು ಕೊಳ್ಳುವುದರ ಜೊತೆಗೆ, ಪ್ರತಿ ತಿಂಗಳು ಬಿಪಿ ಚೆಕ್ ಮಾಡಿಕೊಳ್ಳಬೇಕು. ತದ ನಂತರ ಊಟವಾದ ಮೇಲೆ ಸೀಬೆ ಹಣ್ಣು ತಿನ್ನುವ ಅಭ್ಯಾಸ ಮಾಡಿಕೊಂಡರೆ ಪೊಟ್ಯಾಶಿಯಂ ಅಂಶವು ಹೆಚ್ಚು ಇರುವ ಹಣ್ಣುಗಳು ಅಧಿಕ ರಕ್ತದೊತ್ತಡ ಇರುವವರಿಗೆ ಬಹಳ ಒಳ್ಳೆಯದು.
ದೇಹದಲ್ಲಿ ಶೇಖರಣೆ ಆದ ಸೋಡಿಯಂ ಅಂಶವು ಕಡಿಮೆ ಆಗಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಕಾರಿ ಅದಕ್ಕಾಗಿ ಸೀಬೆ ಹಣ್ಣು ಉತ್ತಮವಾದ ಉದಾಹರಣೆ ಅಂತ ಹೇಳಬಹುದು. ಈ ಹಣ್ಣಿನಲ್ಲಿ ಅಧಿಕ ಪೊಟ್ಯಾಶಿಯಂ ಅಂಶವು ಕಂಡು ಬಂದು ಅಧಿಕ ರಕ್ತದೊತ್ತಡ ಹೃದ್ರೋಗ ಪಾರ್ಶ್ವವಾಯು ಕ್ಯಾನ್ಸರ್ ಇಂತಹ ಮಹಾಮಾರಿ ರೋಗಗಳಿಗೆ ದಿವ್ಯ ಔಷಧವಾಗಿದೆ. ಅಧಿಕ ರಕ್ತದೊತ್ತಡ ಇರುವವರು ಕೇವಲ ಸೀಬೆ ಹಣ್ಣು ಮಾತ್ರವಲ್ಲದೆ ವಿಟಮಿನ್ ಸಿ ಅಂಶವಿರುವ ಆಹಾರವನ್ನು ಹಣ್ಣುಗಳನ್ನು ಸೇವನೆ ಮಾಡುವುದು ಒಳ್ಳೆಯದು.
ಬೊಜ್ಜು ದೇಹ ಹೊಂದಿರುವಂತಹ ಹೆಚ್ಚಿನ ಜನರಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆಯು ಸಾಮಾನ್ಯ ವಾಗಿ ಇರುತ್ತದೆ. ಹೀಗಾಗಿ ಆರೋಗ್ಯಕಾರಿ ತೂಕ ಕಾಪಾಡಿಕೊಂಡರೆ ಆಗ ಹೃದಯದ ಆರೋಗ್ಯವೂ ಚೆನ್ನಾಗಿರುವುದು. ತೂಕ ಇಳಿಸಿದರೆ ಅದರಿಂದ ರಕ್ತನಾಳಗಳು ಸುಲಭವಾಗಿ ಹಿಗುವುದು ಮತ್ತು ಹೃದಯವು ರಕ್ತವನ್ನು ಪರಿಣಾಮಕಾರಿ ಆಗಿ ಪಂಪ್ ಮಾಡಲು ನೆರವಾಗುವುದು.ಧೂಮಪಾನ ಮತ್ತು ಆಲ್ಕೋಹಾಲ್ ಬಿಟ್ಟರೆ ಅದು ಆರೋಗ್ಯಕ್ಕೆ ತುಂಬಾ ಲಾಭಕಾರಿ ಎಂದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ.
ಹೀಗಾಗಿ ಅಧಿಕ ರಕ್ತದೊತ್ತಡ ಸಮಸ್ಯೆ ದೂರವಿಡಲು ಇವೆರಡರಿಂದ ದೂರವಿರಬೇಕು. ಜೊತೆಗೆ ಇನ್ನಿತರ ಧ್ಯಾನ ಯೋಗ ವ್ಯಾಯಾಮ ಮಾಡಬೇಕು ಒಳ್ಳೆಯ ಆಹಾರವನ್ನು ಸೇವನೆ ಮಾಡಬೇಕು ಹೆಚ್ಚಾಗಿ ಟೆನ್ಷನ್ ಒತ್ತಡ ಮಾಡಿಕೊಳ್ಳಬಾರದು. ಸಿಟ್ರಿಕ್ ಅಂಶ ಪೇರಳೆ ಹಣ್ಣು ಹೆಚ್ಚಾಗಿ ತಿನ್ನಬೇಕು ಹೀಗೆ ಮಾಡಿದರೆ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಆಗುತ್ತದೆ