ನಮಸ್ತೆ ಪ್ರಿಯ ಓದುಗರೇ, ನಾವು ತಿಳಿಸುವ ಈ ಸಸ್ಯದ ಬಗ್ಗೆ ನೀವು ಅರಿತುಕೊಂಡರೆ ಎಂದಿಗೂ ಪೈನ್ ಕ್ಯೂಲರ್ ಮಾತ್ರೆಗಳನ್ನು ತೆಗೆದುಕೊಳ್ಳುವುದಿಲ್ಲ. ಅಷ್ಟೊಂದು ಅದ್ಭುತವಾಗಿದೆ ಈ ಸಸ್ಯ ನಿಮಗೆ ತುಂಬಾನೇ ಕುತೂಹಲ ಆಗುತ್ತಿದೆಯೇ ಈ ಸಸ್ಯ ಯಾವುದು ಅಂತ ತಿಳಿದುಕೊಳ್ಳಲು ಅದುವೇ ಲಕ್ಕಿ ಗಿಡ. ಸಾಮಾನ್ಯವಾಗಿ ಈ ಗಿಡವು ಮನೆಯ ಅಂಗಳದಲ್ಲಿ ಗದ್ದೆಗಳಲ್ಲಿ ತೋಟದಲ್ಲಿ ಕಾಡುಗಳಲ್ಲಿ ಕೂಡ ಇದನ್ನು ನಾವು ಕಾಣಬಹುದಾಗಿದೆ. ನಿರಗುಂಡಿ ಪ್ಲಾಂಟ್ ಅಂತ ಕರೆಸಿಕೊಳ್ಳುವ ಈ ಸಸ್ಯ ಸಾಮಾನ್ಯವಾಗಿ ಎಲ್ಲರೂ ಇದನ್ನು ಗುರುತಿಸುತ್ತಾರೆ ಆದರೆ ಇದರಲ್ಲಿ ಇರುವ ಮೆಡಿಸಿನ್ ಅಥವಾ ಔಷಧೀಯ ಅಮೂಲ್ಯವಾದ ಗುಣಗಳನ್ನು ಬಗ್ಗೆ ಮಾಹಿತಿ ತಿಳಿದಿರುವುದಿಲ್ಲ ಮಿತ್ರರೇ.

ಸಂಸ್ಕೃತದಲ್ಲಿ ನೀಲಮಂಜರಿ ಅಂತ ಕರೆಸಿಕೊಂಡ ಈ ಸಸ್ಯ ಕನ್ನಡದಲ್ಲಿ ಬಿಳಿ ಲಕ್ಕಿಗಿಡ ಅಥವಾ ಲಕ್ಕಿಗಿಡ ಅಂತ ಕರೆಯುತ್ತಾರೆ. ಈ ಗಿಡದ ಕಾಂಡದಿಂದ ಚಿಕ್ಕ ಚಿಕ್ಕ ಹೂವುಗಳವರೆಗೂ ವಿಶ್ವದಾದ್ಯಂತ ಪ್ರಸಿದ್ದಿಯನ್ನು ಪಡೆದುಕೊಂಡಿದೆ ಈ ಲಕ್ಕಿ ಸಸ್ಯ. ಈ ಸಸ್ಯ ಇಷ್ಟೊಂದು ಯಾಕೆ ಪ್ರಸಿದ್ದಿಯನ್ನು ಪಡೆದಿದೆ ಅಂದ್ರೆ ಇದರ ಎಲೆಗಳನ್ನು ಪೈನ್ ಕ್ಯುಲರ್ ಆಗಿ ನಾವು ಇದನ್ನು ಬಳಕೆ ಮಾಡಬಹುದು. ಮಂಡಿ ನೋವು ಬಂದರೆ ಕೈ ಕಾಲು ನೋವು ಬಂದರೆ ನಾವು ಮಾತ್ರೆಗಳನ್ನು ಮೊರೆ ಹೋಗುವುದು ತುಂಬಾನೇ ಸಹಜವಾದ ಮಾತು ಆಗಿದೆ. ಇದು ಕೊಂಚ ಸಮಯ ಮಾತ್ರ ನೋವನ್ನು ಉಪಶಮನ ಮಾಡಿದರೆ ಯಾವುದೇ ಶಾಶ್ವತ ಪರಿಹಾರ ನೀಡುವುದಿಲ್ಲ ಜೊತೆಗೆ ಇದು ದೇಹದ ಮೇಲೆ ಅಡ್ಡ ಪರಿಣಾಮವನ್ನು ಕೂಡ ಬೀರಲು ಶುರು ಮಾಡುತ್ತದೆ. ಈ ಸಸ್ಯದಲ್ಲಿ ಆಂಟಿ ಬಯೋಟಿಕ್ ಆಂಟಿ ಇನ್ಫ್ಲಾಮೆಟರಿ ಮತ್ತು ಆಂಟಿ ವೈರಲ್ ಅಂಶಗಳು ಇರುವುದರಿಂದ ಇದನ್ನು ನೋವು ನಿವಾರಕ ಎಣ್ಣೆಗಳಲ್ಲಿ ಬಳಕೆ ಮಾಡುತ್ತಾರೆ. ಇದು ನೋವಿಗೆ ತುಂಬಾನೇ ಉಪಯೋಗಕಾರಿ ಆಗಿ ಕೆಲಸವನ್ನು ಮಾಡುತ್ತದೆ. ಹಾಗಾದ್ರೆ ಬನ್ನಿ ಈ ಲಕ್ಕಿ ಗಿಡದ ಎಣ್ಣೆಯನ್ನು ಯಾವ ರೀತಿಯಲ್ಲಿ ತಯಾರಿಸಬೇಕು ಅಂತ ತಿಳಿಯೋಣ. ಮೊದಲಿಗೆ ಎಳ್ಳೆಣ್ಣೆ ತೆಗೆದುಕೊಳ್ಳಿ. ತದ ನಂತರ ಈ ಲಕ್ಕಿ ಗಿಡದ ಚಿಕ್ಕ ಚಿಕ್ಕ ಎಲೆಗಳನ್ನು ತೆಗೆದುಕೊಂಡು ಈ ಎಣ್ಣೆಯಲ್ಲಿ ಮಿಕ್ಸ್ ಮಾಡಿ ಸ್ವಲ್ಪ ಸಮಯದವರೆಗೆ ಕುದಿಸಿ. ನಂತರ ಸೋಸಿಕೊಂಡು ಈ ಎಣ್ಣೆಯನ್ನು ನಿಮಗೆ ನೋವು ಇರುವ ಭಾಗಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಖಂಡಿತವಾಗಿ ನಿಮಗೆ ಇದರಿಂದ ನೋವು ನಿವಾರಕ ಆಗುತ್ತದೆ. ಮಂಡಿ ನೋವು ಜಾಯಿಂಟ್ ಪೈನ್ ಬೆನ್ನು ನೋವು ಸಂಧಿವಾತ ಎಲ್ಲವೂ ಕಡಿಮೆ ಆಗುತ್ತದೆ.

ಇನ್ನೂ ನಿಮಗೆ ಏನಾದರೂ ಶೀತ ನೆಗಡಿ ಕೆಮ್ಮು ಜ್ವರ ಬಂದರೆ ಈ ಲಕ್ಕಿ ಗಿಡದ ಎಲೆಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಕುಡಿಯುವುದರಿಂದ ಅಥವಾ ನಿಮಗೆ ಕುಡಿಯಲು ಆಗದೆ ಇದ್ದರೆ ಇದರ ಸ್ಟೀಮ್ ಅನ್ನು ತೆಗೆದುಕೊಳ್ಳುವುದರಿಂದ ಇವೆಲ್ಲ ಸಮಸ್ಯೆಗಳಿಗೆ ನೀವು ಬೈ ಬೈ ಹೇಳಬಹುದು. ಶೀತ ಗಂಟಲು ನೋವು ಕಫ ಕರಗಿ ಹೋಗುತ್ತದೆ.ಈ ಸಸ್ಯದ ಮತ್ತೊಂದು ಪ್ರಯೋಜನದ ಬಗ್ಗೆ ಹೇಳುವುದಾದರೆ ಯಾರಿಗಾದರೂ ಆಕ್ಸಿಡೆಂಟ್ ಆಗಿ ಗಾಯಗಳು ಆಗಿದ್ದರೆ ಪೆಟ್ಟು ಆಗಿದ್ದರೆ ಈ ಲಕ್ಕಿ ಗಿಡದ ಎಲೆಗಳನ್ನು ಜಜ್ಜಿ ಅದರ ಲೇಪನವನ್ನು ಹಚ್ಚುವುದರಿಂದ ಗಾಯಗಳು ಕ್ರಮೇಣ ಕಡಿಮೆ ಆಗುತ್ತದೆ.ಸ್ನಾಯುಗಳ ನೋವು ಕಡಿಮೆ ಮಾಡಲು ಈ ಸಸ್ಯದ ನೀರಿನ ಶಾಖವನ್ನು ನೋವಿನ ಮೇಲೆ ಇಡುವುದರಿಂದ ಸ್ನಾಯುಗಳ ನೋವು ಕಡಿಮೆ ಆಗುತ್ತದೆ. ಇನ್ನೂ ದೇಹದ ರಕ್ಷಣಾ ವ್ಯವಸ್ಥೆಯನ್ನು ಸರಿಯಾಗಿ ಆಗುವಂತೆ ಕಾರ್ಯವನ್ನು ವಹಿಸುತ್ತದೆ. ಕ್ಯಾನ್ಸರ್ ಕಾರಕ ಜೀವಕೋಶಗಳ ಬೆಳವಣಿಗೆಯನ್ನು ತಡೆಯುವಂತಹ ಗುಣಗಳನ್ನು ಕೂಡ ಹೊಂದಿದೆ ಈ ಲಕ್ಕಿ ಸಸ್ಯ. ಅಷ್ಟೇ ಅಲ್ಲದೇ ಈ ಲಕ್ಕಿ ಗಿಡದ ಸೊಪ್ಪುಗಳನ್ನು ಸೊಳ್ಳೆಗಳನ್ನು ಓಡಿಸಲು ಹೊಗೆ ರೂಪದಲ್ಲಿ ಕೂಡ ಹಳ್ಳಿಗಳಲ್ಲಿ ಬಳಕೆ ಮಾಡುತ್ತಿದ್ದರು ಅಂತ ತಿಳಿದು ಬಂದಿದೆ.
ನಿಜಕ್ಕೂ ಈ ಸಸ್ಯ ತುಂಬಾನೇ ಅದ್ಭುತವಾಗಿದೆ.

Leave a Reply

Your email address will not be published. Required fields are marked *