ನಮಸ್ಕಾರ ವೀಕ್ಷಕರೇ ಇತ್ತೀಚಿನ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳಿಂದ ನಮಗೆ ತುಂಬಾನೇ ಉಪಯೋಗಗಳಾಗುತ್ತವೆ ಅದಕ್ಕಾಗಿ ನಾವು ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ಆದರೆ ಅವರು ಬಿಡುವಂತಹ ಹಲವಾರು ರೀತಿಯಾದಂತಹ ಅಪ್ಡೇಟ್ ಗಳಿಂದ ನಾವು ಪಾನ್ ಗಳನ್ನು ಸದಾ ಬದಲಾಯಿಸುವಂತಹ ಪರಿಸ್ಥಿತಿ ಎದುರಾಗಿದೆ. ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್ ಕಳೆದರೆ ಏನು ಮಾಡಬೇಕು ಎಂಬುದು ನಿಮ್ಮ ತಲೆಯಲ್ಲಿ ಕೂತುಬಿಡುತ್ತದೆ ಇದು ನಮಗೆ ಒಂದು ದೊಡ್ಡ ಸಂಗತಿ ಆಗುತ್ತದೆ ಆದರೆ ಇವತ್ತಿನ ಮಾಹಿತಿಯಲ್ಲಿ ನೀವು ಸುಲಭವಾಗಿ ಹೇಗೆ ಪಾನ್ ಕಾರ್ಡ್ ಅನ್ನು ಮರಳಿ ಪಡೆಯಬಹುದು ಎಂದು ವಿವರಣೆ ನೀಡಲಾಗಿದೆ.

ವಿವಿದ ರೀತಿಯಕೆಲಸಗಳಿಗೆ ನಾವು ಪಾನ್ ಕಾರ್ಡ್ ಅನ್ನುಬಳಸುತ್ತೇವೆ ಇದು ನಮ್ಮ ಪರಮನೆಂಟ್ ಅಡ್ರೆಸ್ ನಂಬರ್ಎಂಬುದು ಹೇಳುತ್ತದೆ. ನಿಮ್ಮ ಪ್ಯಾನ್ ಕಾರ್ಡ್ ಕಳೆದುಹೋದರೆ ಮತ್ತೆ ವಾಪಸ್ ಪಡೆಯುವುದು ಹಾಗೂ ಪ್ಯಾನ್ ಕಾರ್ಡ್ ನಂಬರ್ ಅನ್ನು ನಿಮಿಷದಲ್ಲಿ ತೆಗೆದುಕೊಳ್ಳಬಹುದಾದ ಆಯ್ಕೆಯು ನಮಗೆ ಆನ್‌ಲೈನಿನಲ್ಲೇ ಲಭ್ಯವಿದೆ. ಒಂದು ವೇಳೆ ನೀವು ಕಳೆದುಕೊಂಡಿದ್ದರೆ ಅಥವಾ ಹಾನಿಯಾಗಿದ್ದರೆ ಅದನ್ನು ಮರಳಿ ಹೇಗೆ ಪಡೆಯಬಹುದು ಎಂದರೆ ಬದಲಿಗೆ ನೀವು ನಿಮ್ಮ ಪ್ಯಾನ್ ಕಾರ್ಡ್ ನಂಬರನ್ನು ತಿಳಿದುಕೊಳ್ಳಲು ನೀವು ಇನ್‌ಕಮ್‌ ಟ್ಯಾಕ್ಸ್ ಅಫಿಶಿಯಲ್ ವೆಬ್‌ಸೈಟ್‌ ತೆರೆಯಿರಿ.

ಈ ಕೆಳಗೆ ಕೊಟ್ಟಿರುವಂತಹ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿದರೆ ನೀವು ಸೀದಾ ಅವರ ಖಾತೆಗೆ ತಲುಪುತ್ತೀರಾ. ತರೆಯಲು ಈ ಲಿಂಕ್ ಕ್ಲಿಕ್ ಮಾಡಿ. https://incometaxindiaefiling.gov.in ನಂತರ ಈ ವೆಬ್ಸೈಟಲ್ಲಿ ನಿಮ್ಮ ಪ್ಯಾನ್ ತಿಳಿಯಿರಿ”
ಎಂಬ ಆಯ್ಕೆಯನ್ನು ಕೊಟ್ಟಿರುತ್ತಾರೆ ಈ ಆಯ್ಕೆಯನ್ನು ನೀವು ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ಹುಟ್ಟಿದ ದಿನಾಂಕ ಮತ್ತು ನಿಮ್ಮ ಮೊದಲ ಹಾಗು ಕೊನೆಯ ಎರಡು ಹೆಸರುಗಳನ್ನು ತುಂಬಿರಿ. ಆದರೆ ನೆನಪಿರಲಿ ಹೆಸರು ನಿಮ್ಮ ಪ್ಯಾನ್ ಕಾರ್ಡ್ ನಲ್ಲಿ ಏನು ಕೊಟ್ಟಿರುತ್ತೀರೋ ಅದೇ ಹೆಸರನ್ನು ನೀವು ಹಾಕಬೇಕು ನಂತರ ಇಮೇಜ್‌ನಲ್ಲಿರುವ ಕೋಡ್ ನಂಬರ್‌ ನಮೂದಿಸಿ, ಸಬ್‌ಮಿಟ್ ಕೊಡಿ.

ನಿಮ್ಮ ಪ್ಯಾನ್ ಕಾರ್ಡ್ ಡೀಟೇಲ್ಸ್ ತೆರೆಯುತ್ತದೆ. ಇದರಿಂದ ಸುಲಭವಾಗಿ ನಿಮ್ಮ ಡೀಟೇಲ್ಸ್ ಅಥವಾ ಪ್ಯಾನ್ ಕಾರ್ಡ್ ನಂಬರ್ ನಿಮಗೆ ದೊರೆಯುತ್ತದೆ ನಂತರ ಏನು ಮಾಡಬೇಕು ಎಂದರೆ -NSDL ನ ಅಧಿಕೃತ ,ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ ಮತ್ತು PAN ಗಾಗಿ ಆನ್‌ಲೈನ್ ಅರ್ಜಿಯ ವಿಭಾಗಕ್ಕೆ ತೆರಳಿ. ಆ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, ನಿಮ್ಮನ್ನು ಬೇರೆ ಪುಟಕ್ಕೆ ನಿರ್ದೇಶಿಸಲಾಗುತ್ತದೆ. ನಂತರ ಇಲ್ಲಿ ಕೊಟ್ಟಿರುವಂತಹ ಎಲ್ಲಾ ಬರ್ತಿಗಳನ್ನು ನೀವು ತುಂಬಬೇಕಾಗುತ್ತದೆ ಅದೇನೆಂದರೆ ಅವರ ಕಳೆದುಹೋದ ಪ್ಯಾನ್ ಸಂಖ್ಯೆ, ಹೆಸರು, ಸಂವಹನ ವಿಳಾಸ, ದೂರವಾಣಿ ಸಂಖ್ಯೆ, ಇಮೇಲ್ ಐಡಿ ಇತ್ಯಾದಿ ವಿವರಗಳನ್ನು ಒದಗಿಸಿ.

ಈ ಪ್ಯಾನ್ ಕಾರ್ಡ್ ನಮಗೆ ಯಾರು ಕಳೆದುಕೊಂಡಿದ್ದೀರಾ ಅಂದರೆ ಅರ್ಜಿದಾರರು ನಿಮ್ಮ ಒಂದು ಸಹಿ ಹಾಕುವ ಮೂಲಕ ಅದು ನೀವೇ ಎಂದು ಪರೀಕ್ಷೆ ಮಾಡುತ್ತದೆ. ನಂತರ ಕೆಳಗೆ ಕೊಟ್ಟಿರುವಂತಹ OK ಒತ್ತಿದರೆ ಸಾಕು ಇದರಿಂದ ನಿಮ್ಮ ಕಡೆಯಿಂದ ಒಂದು ಕಳೆದು ಹೋದ ಪ್ಯಾನ್ ಕಾರ್ಡ್ ವಾಪಸ್ ಪಡೆಯಲು ಅರ್ಜಿ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ ಇದಕ್ಕೆ ಹಣ ಕೂಡ ನೀವು ಕೊಡಬೇಕಾಗುತ್ತದೆ ಇದಕ್ಕಾಗಿ ರೂ .107 ನೀವು ನೀಡಬೇಕು. ಇವೆಲ್ಲವೂ ನೀವು ಆನ್ಲೈನಲ್ಲಿ ಮಾಡಬಹುದು.

Leave a Reply

Your email address will not be published. Required fields are marked *