ಹಾಯ್ ಹಲೋ ನಮಸ್ಕಾರ ಎಲ್ಲರಿಗೂ ಸ್ವಾಗತ. ಜೀರಿಗೆ ನೋಡುವುದಕ್ಕೆ ಸಣ್ಣದಾದರೂ ಕೂಡ ಅದರಲ್ಲಿ ಇರುವಂತಹ ಶಕ್ತಿ ಏನಿದೆ ತುಂಬಾನೇ ಹೆಚ್ಚು ಅಲ್ವಾ. ಅಡುಗೆಮನೆಯಲ್ಲಿ ಖಂಡಿತವಾಗಿಯೂ ಎಲ್ಲರ ಮನೆಯಲ್ಲೂ ಇದ್ದೆ ಇರುವಂತಹ ಒಂದು ಸಾಂಬಾರು ಪದಾರ್ಥ ಎಂದು ಹೇಳಬಹುದು. ಬರಿ ಅಡುಗೆಗೆ ರುಚಿಯಷ್ಟೇ ಅಲ್ಲ ನಮ್ಮ ಆರೋಗ್ಯಕ್ಕೆ ಕೂಡ ಅಷ್ಟೇ ಬೆನಿಫಿಟ್ ಸಿಗುತ್ತದೆ. ಜೀರಿಗೆ ವಿವಿಧ ರೀತಿಯಲ್ಲಿ ಯೂಸ್ ಮಾಡಬಹುದು. ಆರೋಗ್ಯದ ಸಮಸ್ಯೆಗಳನ್ನು ದೂರ ಮಾಡುವುದಕ್ಕೆ ಜೀರಿಗೆ ನಮಗೆ ತುಂಬಾನೇ ಸಹಾಯ ಮಾಡುತ್ತದೆ. ಇವತ್ತಿನ ಮಾಹಿತಿಯಲ್ಲಿ ನಾನು ಜೀರಿಗೆ ಇಂದ ನಾವು ಯಾವ ಯಾವ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಾವು ದೂರವಿಡಬಹುದು ಹಾಗೇನೆ ಯಾವ ರೀತಿ ಬಳಸುವುದನ್ನು ಹೇಳುತ್ತಿದ್ದೇನೆ. ಈ ಮಾಹಿತಿಯನ್ನು ನಿಮ್ಮ ಅನುಕೂಲಕ್ಕೋಸ್ಕರ ಮಿಸ್ ಮಾಡದೆ ಕೊನೆಯವರೆಗೂ ಓದಿ.
ಹಾಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಾರ್ಮಲ್ ಎಲ್ಲರಿಗೂ ಗೊತ್ತಿರುವ ಹಾಗೆ ಜೀರ್ಣಕ್ಕೆ ಒಂದು ಬೆಸ್ಟ್ ಮನೆಮದ್ದು ಜೀರಿಗೆ. ಗ್ಯಾಸ್ಟಿಕ್ ಎದೆಯುರಿ ಹೊಟ್ಟೆ ನೋವು ಅಜೀರ್ಣ ಯಾವುದೇ ರೀತಿಯ ಸಮಸ್ಯೆಗಳು ಇರಲಿ ಜೀರ್ಣಕ್ಕೆ ಸಂಬಂಧಪಟ್ಟಿದ್ದು ಎಲ್ಲದಕ್ಕೂ ಕೂಡ ಒಂದು ಬೆಸ್ಟ್ ಮನೆಮದ್ದು ಇದು. ಇದನ್ನು ಜಸ್ಟ್ ನೀರಿನಲ್ಲಿ ಕುದಿಸಿ ಕುಡಿಯಬಹುದು ನಾವು. ಇದರಿಂದಾಗಿ ನಮ್ಮ ಜೀರ್ಣಕ್ಕೆ ಸಂಬಂಧಿಸಿದಂತಹ ಎಲ್ಲ ಸಮಸ್ಯೆಗಳನ್ನು ಕೂಡ ನಾವು ದೂರ ಮಾಡಿಕೊಳ್ಳಬಹುದು. ಇನ್ನು ಮಲಬದ್ಧತೆಯ ಸಮಸ್ಯೆ ಇರುವವರಿಗೆ ಕೂಡ ತುಂಬಾನೇ ಒಳ್ಳೆಯ ಮೆಡಿಸನ್ ಇದು. ಮಲಬದ್ಧತೆ ಸಮಸ್ಯೆ ಇದ್ದಾಗ ಏನು ಆಗುತ್ತದೆ ಮೋಷನ್ ತುಂಬಾ ಹಾರ್ಡ್ ಆಗುವುದು ಅಥವಾ
ತುಂಬಾ ನೋವು ಇರುವುದು ಇತರ ಎಲ್ಲಾ ಆಗುತ್ತಾ ಇರುತ್ತದೆ ಅಲ್ವಾ. ಅದನ್ನೆಲ್ಲ ಕಡಿಮೆ ಮಾಡಿಕೊಳ್ಳುವುದಕ್ಕೆ ಕೂಡ ನಾವು ಈ ಜೀರಿಗೆಯನ್ನು ಬಳಸಬಹುದು. ಹಾಗೆ ತಿಂದು ನುಂಗಬಹುದು ಅಥವಾ ಜಸ್ಟ್ ಜೀರಿಗೆ ನೀರು ಅಥವಾ ಜೀರಿಗೆ ಕಷಾಯ ವನ್ನು ಮಾಡಿ ಕೂಡ ನಾವು ಕುಡಿಯಬಹುದು. ಇನ್ನು ಶೀತ ಕೆಮ್ಮು ಎಲ್ಲ ಇದ್ದಾಗ ಕೂಡ ಒಂದು ಬೆಸ್ಟ ಮೆಡಿಸನ್ ಜೀರಿಗೆ. ಜೀರಿಗೆಯಲ್ಲಿ ಸ್ವಲ್ಪ ಶುಂಠಿಯನ್ನು ಹಾಕಿ ಅದರಿಂದ ಸ್ವಲ್ಪ ಕಷಾಯವನ್ನ ಕೂಡ ಮಾಡಿ ಕುಡಿಯಬಹುದು. ಇದರಿಂದಾಗಿ ಶೀತ ನೆಗಡಿ ಕೆಮ್ಮು ಎಲ್ಲವೂ ಕೂಡ ಬೇಗನೆ ಕಂಟ್ರೋಲಿಗೆ ಬರುತ್ತದೆ.