ಹೌದು ಇವತ್ತಿನ ದಿನಗಳಲ್ಲಿ ಉಚಿತವಾಗಿ ಒಂದು ರೂಪಾಯಿ ಹಣ ನೀಡೋಕೆ ನಮ್ಮ ಮಂದಿ ತುಂಬ ಯೋಚನೆ ಮಾಡುತ್ತಾರೆ ಆದ್ರೆ ಈ ವ್ಯಕ್ತಿ ಆಗಲ್ಲ ಪ್ರತಿದಿನ ಬೆಳಗ್ಗೆ ಉಚಿತ ಊಟ ನಂತರ ಸಂಜೆ ನಮ ಹೋಟೆಲ್ ನ ಉಚಿತ ಗ್ರಂಥಾಲಯ ಮಾಡುತ್ತರೆ ಯಾರು ಈ ವ್ಯಕ್ತಿ ಮತ್ತು ಎಲ್ಲಿ ಅನ್ನೋದು ಮುಂದೆ ಇದೆ ನೋಡಿ.

ಕೇರಳದ ಪಥನಂತಿಟ್ಟ ಜಿಲ್ಲೆಯಲ್ಲಿ ರಾಣಿ ಹಾಗೂ ಕೊಂಜನ್‍ಚರಿ ಎಂಬ ಎರಡು ಗ್ರಾಮಗಳಿವೆ. ಈ ಗ್ರಾಮಗಳಲ್ಲಿ ಜನರಿಗೆ ಉಚಿತ ಊಟ ನೀಡುವ ವ್ಯವಸ್ಥೆ ಇದೆ. ಈ ಹೋಟೆಲ್ ಆರಂಭಿಸಿದಾಗ ಮಾಲೀಕರು ಕಡಿಮೆ ಬೆಲೆಯಲ್ಲಿ ಊಟ ನೀಡುವ ಯೋಜನೆಯನ್ನು ಹಾಕಿಕೊಂಡಿದ್ರು. ಅದರಂತೆ ಊಟಕ್ಕೆ 25 ಹಾಗೂ ತಿಂಡಿಗೆ 15 ರೂ. ನಿಗದಿ ಮಾಡಲಾಗಿತ್ತು.

ಆದ್ರೆ ಮಾಲೀಕರಿಗೆ ಈ ಹಣ ಕೇಳುವ ಮನಸ್ಸು ಬರಲಿಲ್ಲ. ಕಾರಣ ಅವರು ಉಚಿತ ಊಟ ನೀಡಲು ಮುಂದಾದ್ರು. ಇನ್ನು ಯಾರಿಗೆ ಹಣ ನೀಡಬೇಕು ಎಂದು ಎನಿಸುತ್ತದೆಯೋ ಅವರಿಂದ ಹಣ ಪಡೆಯುತ್ತಿದ್ದರು.

ಈ ಹೋಟೆಲ್ 10 ಜನರ ಗುಂಪಿನಿಂದ ನಡೆಯುತ್ತದೆ. ಹೋಟೆಲ್ ಅಧ್ಯಕ್ಷ ಬೇಬಿ ಸ್ಯಾಮ್ ತಿಳಿಸುವಂತೆ, ನಾವು ಉತ್ತಮ ಗುಣ ಮಟ್ಟದ ಹಾಗೂ ಶಾಖ ಆಹಾರ ನೀಡುವುದೇ ನಮ್ಮ ಗುರಿ. ಉತ್ತಮ ಪೌಷ್ಠಿಕ ಆಹಾರ ಸೇವನೆಯಿಂದ ಮನಸ್ಸು ಹಾಗೂ ದೇಹ ಉಲ್ಲಾಸ ಭರಿತವಾಗಿರುತ್ತದೆ. ನಮ್ಮ ಹೋಟೆಲ್‍ಗೆ ಅಪ್ಪಕಟ್ಟು ಎಂಬ ಕಮ್ಯೂನಿಟಿ ತುಂಬ ಸಹಕಾರ ನೀಡಿದೆ ಎಂದು ಹೇಳುತ್ತಾರೆ.

ಇನ್ನು ಈ ಹೋಟೆಲ್‍ನ ಇನ್ನೊಂದು ವೈಶಿಷ್ಟತೆ ಇದೆ. ಈ ಹೋಟೆಲ್ ಸಂಜೆ ಆರು ಗಂಟೆಯವರೆಗೆ ಊಟ ನೀಡಿ, ನಂತರದಲ್ಲಿ ಜ್ಞಾನ ವೃದ್ಧಿಸುವ ಕೆಲಸವನ್ನು ಮಾಡುತ್ತಿದೆ. ಈ ಸೂರಿನಲ್ಲಿ ನಿಮಗೆ ಇಷ್ಟದ ಕವಿ, ಲೇಖಕ ಸಿಗುತ್ತಾರೆ ಎಂಬುದೇ ವಿಶೇಷ.

ರಾಣಿ ಊರಲ್ಲಿ ಇರುವ ಹೋಟೆಲ್‍ಗೆ ಹೊಂದಿಕೊಂಡಿರುವ ಗ್ರಂಥಾಲಯಇದೆ. ಇನ್ನು ಈ ಹೋಟೆಲ್ ಮಾಲೀಕರು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ತಮ್ಮ ಹೋಟೆಲ್ ಸ್ಥಾಪನೆ ಮಾಡಬೇಕು ಎಂಬ ಕನಸು ಹೊಂದಿದ್ದಾರೆ. ಸಂಗ್ರಹ ಮಾಹಿತಿ.

Leave a Reply

Your email address will not be published. Required fields are marked *