ಧರ್ಮ ಗ್ರಂಥದಲ್ಲಿ ದೇವರಿಗೆ ಯಾವುದೇ ಶ್ರೇಷ್ಠ ಎಂಬುದನ್ನು ಹೇಳಲಾಗಿದೆ ಯಾವ ವಸ್ತುವಿನಿಂದ ಪೂಜೆ ಮಾಡಿದರೆ ಹೆಚ್ಚು ಫಲ ಸಿಗಲಿದೆ ಎಂಬುದನ್ನು ಹೇಳಲಾಗಿದೆ ದೇವರಿಗೆ ಪ್ರಿಯವಾದ ಪೂಜೆ ಸಾಮಗ್ರಿಗಳಲ್ಲಿ ಕರ್ಪೂರ ಕೂಡ ಒಂದು. ಪೂಜೆಯಲ್ಲಿ ಬಳಸಲಾಗುವ ವಸ್ತು ಕರ್ಪೂರ. ಈ ಕರ್ಪೂರದ ಸಣ್ಣ ತುಂಡು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು ತುಂಬಾ ಪ್ರಯೋಜನಕಾರಿಯಾಗಿ ಎಂದು ವಿವರಿಸುತ್ತದೆವಾಸ್ತುಶಾಸ್ತ್ರ. ಕರ್ಪೂರ ಒಂದೇಅನೇಕ ವಾಸ್ತು ದೋಷಗಳನ್ನು ನಿವಾರಿಸಿ ಮನೆಯಲ್ಲಿ ಸಂತೋಷವನ್ನು ತರಬಲ್ಲದು.
ಇದಲ್ಲದೆ, ಕರ್ಪೂರವು ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹ ಪ್ರಯೋಜನಕಾರಿಯಾಗಿದೆ. ಕರ್ಪೂರದಾರತಿ ಎತ್ತಿದರೆ ದೇವರು ಬೇಗ ಪ್ರಸನ್ನನಾಗುತ್ತಾನೆ ಎಂಬ ನಂಬಿಕೆಯಿಂದ ಹಾಗೆ ಕರ್ಪೂರ ನಕರಾತ್ಮಕ ಶಕ್ತಿಗಳನ್ನು ನಷ್ಟ ಮಾಡುತ್ತದೆ ಎಂದು ನಂಬಲಾಗಿದೆ. ಕೆಟ್ಟ ದೃಷ್ಟಿ ಅಥವಾ ಕೆಟ್ಟ ಸಮಯದಿಂದ ಮುಕ್ತಿ ಪಡೆಯಲು ಪ್ರತಿದಿನ ಬೆಳಿಗ್ಗೆ ಬೇಗ ಎದ್ದು ನೀರಿಗೆ ಗಂಗಾ ಜಲ ಹಾಗೂ ಸ್ವಲ್ಪ ಕರ್ಪೂರವನ್ನು ಹಾಕಿ ಸ್ನಾನ ಮಾಡಿ ಜೊತೆಗೆ ದೇವಾನುದೇವತೆಗಳ ಮಂತ್ರ ಪಟಿಸಿ.
ಮನೆಯಲ್ಲಿ ಸುಖ ಶಾಂತಿ ಬಯಸುವವರು ಬೆಳಿಗ್ಗೆ ಸ್ನಾನವಾದ ನಂತರ ಗಂಗಾಜಲದ ಜೊತೆ ಕರ್ಪೂರ ಬೆರೆಸಿದ ನೀರನ್ನು ಮನೆಯ ಮುಖ್ಯ ದ್ವಾರಕ್ಕೆ ಸಿಂಪಡಿಸಿ ಹೀಗೆ ಮಾಡಿದರೆ ಯಾವುದೇ ನಕರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ ಆರ್ಥಿಕ ಸಮಸ್ಯೆ ದೂರವಾಗಿ ಹಣ ವೃದ್ಧಿಯಾಗುತ್ತದೆ. ಸೂರ್ಯಸ್ತದ ವೇಳೆ ಭಗವಂತದ ಕೃಪೆಗೆ ಪಾತ್ರರಾದ ಬಯಸುವವರು ಕರ್ಪೂರವನ್ನು ಹಚ್ಚಿ ಕರ್ಪೂರದ ಹೊಗೆಯನ್ನು ಮನೆಯ ಮೂಲೆ ಮೂಲೆಗೆ ತೋರಿ. ಬುಧವಾರ ಸ್ವಲ್ಪ ತುಪ್ಪ ಕರ್ಪೂರ ಹಾಗೂ ಸಕ್ಕರೆಯನ್ನು ದಾನ ಮಾಡಿ ಜಾತಕದಲ್ಲಿರುವ ಬುಧ ಗ್ರಹ ದೋಷವನ್ನು ಇದು ತಡೆದು ಹಾಕುತ್ತದೆ.
ಪ್ರತಿದಿನ ಸಂಜೆ ದೇವರ ಮುಂದೆ ಕರ್ಪೂರವನ್ನು ಹಚ್ಚಿ ಜೊತೆಗೆ ಬೆಡ್ ರೂಮ್ನಲ್ಲಿಯೂ ಕರ್ಪೂರವನ್ನು ಹಚ್ಚಿ ಇದು ಆರೋಗ್ಯವನ್ನು ವೃದ್ಧಿಸುತ್ತದೆ ಜೊತೆಗೆ ಪತಿ-ಪತ್ನಿ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ನೀವು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯಲು ಬಯಸಿದರೆ, ಎಲ್ಲಾ ಅಡುಗೆ ಕೆಲಸಗಳನ್ನು ಮುಗಿಸಿದ ನಂತರ ಒಂದು ಬಟ್ಟಲಿನಲ್ಲಿ ಕರ್ಪೂರ ಮತ್ತು ಲವಂಗವನ್ನು ಸುಡಿ. ಇದನ್ನು ಮಾಡುವುದರಿಂದ, ಕುಟುಂಬದ ಸದಸ್ಯರು ಪ್ರಗತಿ ಹೊಂದಲು ಪ್ರಾರಂಭಿಸುತ್ತಾರೆ ಮತ್ತು ಹೊಸ ಕೆಲಸದ ಅವಕಾಶಗಳನ್ನು ಪಡೆಯುತ್ತಾರೆ.
ಅಡುಗೆ ಮನೆಯನ್ನು ಸ್ವಚ್ಛಗೊಳಿಸಿದ ನಂತರ ಪ್ರತಿದಿನ ರಾತ್ರಿ ಒಂದು ಬಟ್ಟಲನ್ನು ತೆಗೆದುಕೊಳ್ಳಿ ಮತ್ತು ಅದರಲ್ಲಿ ಕರ್ಪೂರ ಮತ್ತು ಲವಂಗವನ್ನು ಬೆಳಗಿಸಿ.ಪ್ರತಿದಿನ ಮನೆಯಲ್ಲಿ ಲವಂಗ ಮತ್ತು ಕರ್ಪೂರವನ್ನು ಹಚ್ಚಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಧನಾತ್ಮಕತೆ ಹೆಚ್ಚುತ್ತದೆ. ಕುಟುಂಬ ಸದಸ್ಯರು ಪ್ರಗತಿ ಕಾಣುತ್ತಾರೆ.