ಇದು ಪ್ಲಾಸ್ಟಿಕ್ ದುನಿಯಾ ಪ್ಲಾಸ್ಟಿಕ್ ಎಷ್ಟೋ ಅಪಾಯಕಾರಿ ಅಂತ ಹೇಳಿದರೆ ಜನ ಪ್ಲಾಸ್ಟಿಕ್ ನೆಂಟನ್ನು ಬಿಡುತ್ತಿಲ್ಲ. ನೀರು ಕುಡಿಯುವುದರಿಂದ ಹಿಡಿದು ಪ್ರತಿಯೊಂದು ಕೆಲಸಕ್ಕೂ ಪ್ಲಾಸ್ಟಿಕ್ ಬೇಕೇ ಬೇಕು. ಶಿಶುವಿಗೂ ಕೊಡುವ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಸಲಾಗುತ್ತದೆ ಆದರೆ ಮಕ್ಕಳಿಗೆ ನೀರು ಕುಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾನಿಲಯದ ಆಘಾತಕಾರಿ ಸಂಗತಿಯನ್ನು ಹೊರಹಾಕಿದೆ. ಹೌದು ಈಗಷ್ಟೇ ಹುಟ್ಟುವ ಮಕ್ಕಳಿಗೆ ಪ್ಲಾಸ್ಟಿಕ್ ಬಾಟಲಲ್ಲಿ ನೀರು ಕುಡಿಸುವುದು ಅಪಾಯ ಕಟ್ಟಿಟ್ಟ ಬುದ್ದಿ ಎಂದಿದೆ.
ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ತುಂಬಿದ ತಕ್ಷಣ ರಾಸಾಯನಿಕ ಕ್ರಿಯೆ ಶುರುವಾಗುತ್ತದೆ. ಪ್ಲಾಸ್ಟಿಕ್ ನಲ್ಲಿ ಇರುವ ರಾಸಾಯನಿಕ ನಿಧಿಗೆ ಸೇರಿಸಿ ಕೊಳ್ಳುತ್ತದೆ. ಇದು ಮಕ್ಕಳಿಗೆ ರೋಗಗಳಿಗೆ ಕಾರಣವಾಗುತ್ತದೆ ಎಂದು ಸಂಶೋಧನೆ ಹೇಳಿದೆ ಗರ್ಭಿಣಿಯರು ಪ್ಲಾಸ್ಟಿಕ್ ಬಾಟಲಿನಲ್ಲಿ ನೀರು ಕುಡಿದರೆ ಇದು ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಾ ಇದ್ದಾರೆ.ಪ್ಲಾಸ್ಟಿಕ್ ಬಾಟಲ್‌ಗಳನ್ನು ಉತ್ಪಾಸುವಾಗ ಹಲವಾರು ರಾಸಾಯನಿಕ ಉತ್ಪನ್ನಗಳನ್ನು ಅದರಲ್ಲಿ ಸೇರಿಸಲಾಗುತ್ತದೆ. ಬಿಸಿ ಹಾಲು ಮತ್ತು ಬಿಸಿಯಾದ ಪಾನೀಯಗಳನ್ನು ಅದಕ್ಕೆ ಸುರಿದಾಗ ಆ ಅಪಾಯಕಾರಿ ರಾಸಾಯನಿಕಗಳು ಈ ಪದಾರ್ಥಗಳಲ್ಲಿ ಸೇರಿಕೊಳ್ಳುತ್ತವೆ.
ಅಂತಹ ಹಾಲನ್ನು ಮಗುವಿಗೆ ಕುಡಿಸುವುದರಿಂದ ಮುಂದೆ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ಸಹಜ.ಗಾಜಿನ ಬಾಟಲಿಗಳ ತೂಕ ಹೆಚ್ಚು, ಆಕಸ್ಮಿಕವಾಗಿ ಇವು ಕೆಳಗೆ ಬಿದ್ದರೆ, ಇವು ಒಡೆದು ಹೋಗುತ್ತವೆ. ಗಾಜಿನ ಬಾಟಲಿಯನ್ನು ಬಳಸುವ ಮುನ್ನ ಅವುಗಳ ಗುಣಾವಗುಣಗಳನ್ನು ನೀವು ಒಮ್ಮೆ ಪರಿಶೀಲಿಸುವುದು ಒಳ್ಳೆಯದು. ನೀರನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಸಿಕೊಂಡು ಬಿಸಿಲಿಗೆ ಹೋಗುವುದರಿಂದ ನೀರಿನಲ್ಲಿ ರಾಸಾಯನಿಕಗಳು ಉತ್ಪತ್ತಿಯಾಗಿ ನೀರು ಕಲುಷಿತಗೊಳ್ಳುತ್ತದೆ.
ಇದನ್ನು ಸೇವಿಸಿದರೆ ವಾಂತಿ, ತಲೆನೋವಿನಂತಹ ಅನಾರೋಗ್ಯ ಕಾಡುತ್ತದೆ. ಅಲ್ಲದೆ ಪ್ಲಾಸ್ಟಿಕ್ ಅನ್ನು ಪಾಲಿಥೈಲಿನ್ ಟೆರಾಫ್ತಲೇಟ್ ಎನ್ನುವ ವಸ್ತುವಿನಿಂದ ತಯಾರಿಸಲಾಗುತ್ತದೆ. ತಾಪಮಾನದ ಕಾರಣದಿಂದ ನೀರು ವಿಷಯುಕ್ತವಾಗವಂತೆ ಇದು ಮಾಡುತ್ತದೆ. ಇದು ದೇಹಕ್ಕೆ ಹಾನಿಯುಂಟು ಮಾಡುತ್ತದೆ.