ಎಲ್ಲರಿಗೂ ನಮಸ್ಕಾರ. ಪುಟ್ ಪಾಯಿಸನ್ ಎಂಬ ಸಮಸ್ಯೆಯು ಎಲ್ಲರಿಗೂ ಎಲ್ಲ ಸಂದರ್ಭದಲ್ಲೂ ಬರುವುದಿಲ್ಲ. ಆದರೆ ಇದು ಆರೋಗ್ಯದಲ್ಲಿ ತುಂಬಾ ಏರುಪೇರು ಆಗುವ ಸಾಧ್ಯತೆ ಇದೆ. ಕೆಲವರು ಈ ಸಮಸ್ಯೆಯಿಂದ ಜೀವ ಕಳೆದುಕೊಂಡಿರುವುದು ಉಂಟು. ಈ ಸಮಸ್ಯೆಯು ನಾವು ತಿನ್ನುವ ಆಹಾರ ಸ್ವಚ್ಛವಾಗಿ ಇಲ್ಲದಿದ್ದರೆ ಮತ್ತು ಬ್ಯಾಕ್ಟೀರಿಯಾದಿಂದ ಕೂಡಿರುವ ಆಹಾರ ಸೇವಿಸಿದರೆ ಅದು ಹೊಟ್ಟೆಯಲ್ಲಿ ವಿಷ ವಾಗುತ್ತದೆ.
ಅದನ್ನೇ ಫುಡ್ ಪಾಯಿಸನ್ ಎಂದು ಕರೆಯುತ್ತಾರೆ. ಈ ರೀತಿ ಸಮಸ್ಯೆ ಬಂದರೆ ತಕ್ಷಣ ಮನೆಯಲ್ಲಿ ಈ ರೀತಿ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ನಿಂಬೆ ಜ್ಯೂಸ್ ಫುಡ್ ಪಾಯಿಸನ್ ಆಗಿ ವಾಂತಿ ಬಂದರೆ ನಿಂಬೆ ಜ್ಯೂಸ್ ಕುಡಿಯುವುದು ಒಳ್ಳೆಯದು. ಯಾಕೆಂದರೆ ನಿಂಬೆ ಹಣ್ಣಿನಲ್ಲಿ ಆಸಿಡ್ ಗುಣವಿದೆ ಆದ್ದರಿಂದ ಇದು ಫುಡ್ ಪಾಯಿಸನ್ ಗೆ ಕಾರಣವಾಗುವ ಬ್ಯಾಕ್ಟೀರಿಯಾ ದಿಂದ ನಾಶಮಾಡುವ ಸಾಮರ್ಥ್ಯ ಹೊಂದಿರುತ್ತದೆ.
ನಿಂಬೆಹಣ್ಣಿನ ಜ್ಯೂಸ್ಗೆ ಸಕ್ಕರೆ ಸೇರಿಸಿ ದಿನದಲ್ಲಿ ಮೂರು ನಾಲ್ಕು ಬಾರಿ ಸ್ವಲ್ಪ ಸೇವಿಸಿದರೆ ಮೂಲಕ ಈ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳಬಹುದು. ಫುಡ್ ಪಾಯಿಸನ್ ಆದಾಗ, ಬಾಳೆಹಣ್ಣು ತಿನ್ನಲು ವೈದ್ಯರಿಗೆ ಸೂಚಿಸುತ್ತಾರೆ. ವಿಷದಿಂದ ಉಂಟಾಗುವ ವಾಕರಿಕೆ ಹೊಟ್ಟೆ ಸಮಸ್ಯೆಯನ್ನು ತಡೆಯುತ್ತದೆ.
ಶುಂಠಿ ಶುಂಠಿ ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುವ ವಸ್ತು. ಜೀರ್ಣವಾಗುವಂತಹ ವಸ್ತುಗಳನ್ನು ಕರಗಿಸಬಲ್ಲ ಸಾಮರ್ಥ್ಯ ಇದರಲ್ಲಿ ಇದೆ. ಅಲ್ಲದೆ ಪಾಯ್ಸನ್ ಆಗಿರುವ ವೇಳೆ ಹೊಟ್ಟೆಯಲ್ಲಿರುವ ವಿಷಪೂರಿತ ಅಂಶಗಳು ಸರಿಪಡಿಸುವ ವಿಶೇಷಗುಣ ಶುಂಠಿ ಯಲ್ಲಿ ಇದೆ. ಶುಂಠಿಯ ಚಹಾ ಹಾಗೂ ಜ್ಯೂಸ್ ಜೇನಿನ ಮಿಶ್ರಣ ಸೇವಿಸಿದರೆ ಒಳ್ಳೆಯದು. ತುಳಸಿ ರಸ ನೈಸರ್ಗಿಕವಾಗಿ ಔಷಧೀಯ ಗುಣ ಇರುವ ಸಸಿಗಳಲ್ಲಿ ತುಳಸಿಗೆ ಅಗ್ರಸ್ಥಾನ. ಇದಕ್ಕೆ ಸೋಂಕುಗಳ ವಿರುದ್ಧ ಹೋರಾಡಿ ಅವುಗಳನ್ನು ಗುಣಪಡಿಸುವ ಸಾಮರ್ಥ್ಯವಿದೆ.
ತುಳಸಿ ರಸವನ್ನು ಜೇನಿನೊಂದಿಗೆ ಸೇವಿಸಿ ದಿನದಲ್ಲಿ 6-7 ಸಲ ಸೇವಿಸಬಹುದು ಕುಡಿಯುವ ನೀರಿನಲ್ಲಿ ತುಳಸಿ ರಸವನ್ನು ಬೆರೆಸಿ ಕುಡಿಯುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.ಈ ಸಂದರ್ಭದಲ್ಲಿ ಕೆಫಿನ್ ಸೇವನೆ ಮಾಡಬೇಡಿ, ಇದು ಜೀರ್ಣಕ್ರಿಯೆ ವ್ಯವಸ್ಥೆಗೆ ಕಿರಿಕಿರಿ ಉಂಟು ಮಾಡುವುದು. ಕ್ಯಾಮೊಮೈಲ್, ಪುದೀನಾ ಮತ್ತು ದಂಡೇಲಿಯನ್ ಇಂತಹ ಕೆಫಿನ್ ಮುಕ್ತ ಗಿಡಮೂಲಿಕೆ ಚಾ ಸೇವಿಸಬಹುದು. ಇದು ಹೊಟ್ಟೆಗೆ ಶಮನ ನೀಡುವುದು.
ತೆಂಗಿನ ನೀರು ಅಥವಾ ಎಳನೀರು ದ್ರವದ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಹೊಟ್ಟೆಯನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.ಮೊಸರು ಒಂದು ರೀತಿಯ ಪ್ರತಿಜೀವಕವಾಗಿದೆ, ಆದ್ದರಿಂದ ಇದನ್ನು ಫುಡ್ ಪಾಯಿಸನ್ಗೆ ಮನೆಮದ್ದಾಗಿ ಸೇರಿಸಿಕೊಳ್ಳಬೇಕು. ಇದಕ್ಕೆ ಸ್ವಲ್ಪ ಕಪ್ಪು ಉಪ್ಪು ಸೇರಿಸಿ ಸೇವಿಸಿದರೆ ಇನ್ನೂ ಉತ್ತಮ. ಇದಲ್ಲದೆ ಮೊಸರಿಗೆ ನೀರು ಮತ್ತು ಸಕ್ಕರೆಯನ್ನು ಸೇರಿಸಿ ಲಸ್ಸಿಯಂತೆ ಕುಡಿಯಬಹುದು