ನಮಸ್ಕಾರ ಸ್ನೇಹಿತರೇ. ರಸ್ತೆಬದಿಯ ಆಹಾರ ಯಾರಿಗೆ ಇಷ್ಟ ಇಲ್ಲ ಹೇಳಿ ಪ್ರತಿಯೊಬ್ಬರೂ ಸಂಜೆಯಾಗುತ್ತಿದ್ದಂತೆ ಯಾವುದಾದರೊಂದು ಫಾಸ್ಟ್‌ಫುಡ್ ಅಂಗಡಿ ಬಳಿ ಬಿಸಿಬಿಸಿ ಬೋಂಡಾ, ಬಜ್ಜೆ ಸವಿಯುವವರೇ.. ಆದರೆ, ಈ ತಿಂಡಿಯನ್ನು ಕರಿಯಲು ಬಳಸುವ ಎಣ್ಣೆಯನ್ನು ಎಂದಾದರೂ ಗಮನಿಸಿದ್ದೀರಾ ಇಲ್ಲವಾದರೆ, ಒಮ್ಮೆ ಗಮನಿಸಿ. ಆ ಎಣ್ಣೆ ಗಾಢ ಕಪ್ಪು ಬಣ್ಣಕ್ಕೆ ತಿರುಗಿದ್ದರೆ, ಅಲ್ಲಿ ತಿಂಡಿ ತಿನ್ನದಿರುವುದೇ ಉತ್ತಮ. ಏಕೆಂದರೆ ಅದು ಪದೇ ಪದೇ ಬಳಕೆಯಾದ ಎಣ್ಣೆ. ಇದನ್ನು ಸೇವಿಸುವುದರಿಂದ, ಅನೇಕ ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಕೇವಲ ಬೀದಿಬದಿಯಷ್ಟೇ ಅಲ್ಲ, ರೆಸ್ಟೋರೆಂಟ್ ಅಥವಾ ಸ್ವಂತ ಮನೆಯಲ್ಲಿಯೇ ಆದರೂ, ಪದೇ ಪದೇ ಬಿಸಿ ಮಾಡಿದ ಎಣ್ಣೆ ಹಾನಿಕಾರಕ. ಇದರಿಂದ ಆಗುವ ಅಡ್ಡಪರಿಣಾಮಗಳೇಣು ನೋಡೋಣ.

ಅಡುಗೆ ಎಣ್ಣೆಯು ಗಾಢ ಕಂದು, ಕೆಂಪು ಅಥವಾ ಕಪ್ಪು ಬಣ್ಣಕ್ಕೆ ತಿರುಗುವುದನ್ನು ನೀವು ಗಮನಿಸಿರಬಹುದು. ಎಣ್ಣೆಯನ್ನು ಹಲವಾರು ಬಾರಿ ಬಿಸಿ ಮಾಡುವುದರಿಂದ ಇದು ಸಂಭವಿಸುತ್ತದೆ. ಆದರೆ, ಅಡುಗೆ ಎಣ್ಣೆಯ ಮರುಬಳಕೆಯು ಎಣ್ಣೆಯ ಎಲ್ಲಾ ಉತ್ತಮ ಗುಣಗಳನ್ನು ನಾಶಪಡಿಸುತ್ತದೆ. ಈ ಸಾಮಾನ್ಯ ಅಭ್ಯಾಸವು ಹೆಚ್ಚಾಗಿ ರೆಸ್ಟೋರೆಂಟ್‌ಗಳು, ಫುಡ್ ಜಾಯಿಂಟ್‌ಗಳು ಮತ್ತು ಸ್ಟಾಲ್‌ಗಳಲ್ಲಿ ನಡೆಯುತ್ತದೆ. ಇದನ್ನರಿಯದ ನಾವು ಅದನ್ನೇ ಸೇವಿಸುತ್ತೇವೆ. ಇದು ಆರೋಗ್ಯದ ಮೇಲೆ ಹಲವಾರು ಪರಿಣಾಮ ಉಂಟುಮಾಡುತ್ತವೆ.

ಕಾರ್ಸಿನೋಜೆನಿಕ್ ಎಂಬ ಪದವನ್ನು ನೀವು ಕೇಳುತ್ತಿದ್ದಂತೆ, ನಿಮಗೆ ಕ್ಯಾನ್ಸರ್‌ಗೆ ಸಂಬಂಧಿಸಿದ ವಿಷಯ ನೆನಪಾಗುತ್ತದೆ. ಅಡುಗೆ ಎಣ್ಣೆಯನ್ನು ಪದೇಪದೇ ಬಿಸಿ ಮಾಡುವುದರಿಂದ ಕ್ಯಾನ್ಸರ್ ರೋಗಲಕ್ಷಣಗಳು ಉಂಟಾಗಬಹುದು ಎಂಬುದಕ್ಕೆ ಹಲವಾರು ಸಂಶೋಧನೆಗಳು ಸಿಕ್ಕಿವೆ. ಈ ಅಡುಗೆ ಎಣ್ಣೆಯನ್ನು ಬಳಸುವುದರಿಂದ ದೇಹದಲ್ಲಿ ಸ್ವತಂತ್ರ ರಾಡಿಕಲ್‌ಗಳು ಹೆಚ್ಚಾಗಿ, ಇದು ಉರಿಯೂತಕ್ಕೆ ಕಾರಣವಾಗುತ್ತದೆ. ಮತ್ತೆ ಬಳಸಿದ ಅಡುಗೆ ಎಣ್ಣೆಯಲ್ಲಿ ಇರುವ ವಿಷಕಾರಿ ಅಂಶಗಳು ಬೊಜ್ಜು, ಹೃದ್ರೋಗ ಮತ್ತು ಮಧುಮೇಹಕ್ಕೆ ಕಾರಣವಾಗಬಹುದು. ಹೆಚ್ಚಿನ ಪ್ರಮಾಣದ ಉರಿಯೂತವು ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡಿ, ವಿವಿಧ ರೀತಿಯ ಸೋಂಕುಗಳಿಗೆ ಒಳಗಾಗುವಂತೆ ಮಾಡುತ್ತದೆ.

Leave a Reply

Your email address will not be published. Required fields are marked *