ಹೌದು ಬಸ್ಟಾಪ್ ರೈಲ್ವೆ ನಿಲ್ದಾಣ ಹೋಟೆಲ್ ಗಳಲ್ಲಿ ವಾಟರ್ ಬಾಟಲ್ ಗೆ MRPಗಿಂತ ಹೆಚ್ಚು ಹಣ ತೆಗೆದುಕೊಳ್ಳುತ್ತಾರೆ ಇದರ ಬಗ್ಗೆ ನೀವು ಯಾಕೆ ಹೆಚ್ಚಾಗಿ ಗಮನವಿಟ್ಟಿಲ್ಲ ಯಾವುದೇ ಪದಾರ್ಥವಾಗಲಿ ಪಾನೀಯಗಳಾಗಲಿ MRPಗಿಂತ ಹೆಚ್ಚಿನ ಹಣವನ್ನು ತೆಗೆದುಕೊಳ್ಳುವಂತಿಲ್ಲ ಹಾಗೆ ಮಾಡಿದ್ರೆ ಅದಕ್ಕೆ ದಂಡ ಕಟ್ಟಬೇಕು. ಹೇಗೆ ಏನು ಅನ್ನೋದರ ಬಗ್ಗೆ ನೀವು ತಿಳಿದೋಳ್ಳೋದು ತುಂಬ ಅವಶ್ಯವಕವಾಗಿದೆ.
ಮಾಲ್ಗಳು ವಿಮಾನ ನಿಲ್ದಾಣ, ರೆಸ್ಟೋರೆಂಟ್ ಮಾಲೀಕರು ವಾಟರ್ ಬಾಟಲ್ ಗೆ ತಂಪು ಪಾನೀಯಗಳಿಗೆ MRPಗಿಂತ ಹೆಚ್ಚಿನ ಹಣ ಪಡೆಯುತ್ತಿದ್ದಲ್ಲಿ ಅವರ ವಿರುದ್ಧ ದೂರು ನೀಡುವ ಹಕ್ಕು ನಿಮಗಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕರ ವ್ಯವಾಹರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಈಬಗ್ಗೆ ಟ್ವೀಟರ್ನಲ್ಲಿ ಟ್ವೀಟ್ ಮಾಡಿದ್ದಾರೆ. ಇಂತಹ ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ನಮಗೆ ಹೆಚ್ಚಾಗಿ ದೂರುಗಳು ಬಂದಿವೆ. ನಾವು ಸಹ ಇದರ ತಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದುತಿಳಿಸಿದ್ದಾರೆ. ಅಲ್ಲದೆ ಗ್ರಾಹಕರು ದೂರು ನೀಡುವಂತೆ ಕೇಳಿಕೊಂಡಿದ್ದಾರೆ.
MRPಗಿಂತ ಹೆಚ್ಚಿನ ಹಣ ಪಡೆದರೆ ಏನು ಮಾಡಬೇಕು: ಗ್ರಾಹಕ ಮೋಸ ಹೋದಲ್ಲಿ ಈ ಬಗ್ಗೆ ಅವರಲ್ಲಿರುವ ರಸೀದಿ ತೋರಿಸಿ ದೂರು ದಾಖಲಿಸಬಹದುಕೇಂದ್ರ ಸರ್ಕಾರ ಇವರ ವಿರುದ್ಧ ಸರಿಯಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದುತಿಳಿಸಿದ್ದಾರೆ.
ಕ್ರಮ ಏನು ಗೊತ್ತಾ: ಕಾನೂನು ಮಾಪನಶಾಸ್ತ್ರದ ನಿಯಮದಂತೆ ಈ ತರನಾದ ತಪ್ಪುಗಳು ಕಂಡು ಬಂದಲ್ಲಿ ಅಂತಹಮಾಲೀಕರ ವಿರುದ್ಧ ೨೫ ಸಾವಿರ ಹಾಗೂ ಎರಡನೇ ಬಾರಿ ತಪ್ಪು ಎಸಗಿದರೆ ೫೦ ಸಾವಿರ ದಂಡವಿಧಿಸಲು ತೀರ್ಮಾನಿಸಲಾಗಿದೆ. ಒಂದು ವೇಳೆ ಇದಕ್ಕಿಂತ ಹೆಚ್ಚಿನ ೧ ಲಕ್ಷ ದಂಡ ಹಾಗೂ ಒಂದುವರ್ಷ ಜೈಲು ಶೀಕ್ಷೆ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.