WhatsApp Group Join Now

ಹೌದು ನಮಗೆ ತಿಳಿದಿರುವುದಿಲ್ಲ ನಮ್ಮ ಸುತ್ತ ಮುತ್ತ ಹಲವಾರು ತಿನ್ನುವ ಪದಾರ್ಥದಲ್ಲಿ ಮತ್ತು ಹಣ್ಣು ಹಂಪಲುಗಳಲ್ಲಿ ಹಲವಾರು ರೋಗಗಳನ್ನು ಗುಣಪಡಿಸುವ ಗುಣಗಳು ಇರುತ್ತವೆ. ಅದೇ ರೀತಿ ಕಿತ್ತಳೆ ಹಣ್ಣಿನ ರಸದಲ್ಲಿ ಅಡಗಿದೆಯಂತೆ ಬ್ಲಡ್ ಕಾನ್ಸರ್ ಗುಣಪಡಿಸೋ ಗುಣಗಳು.

ಬ್ಲಡ್ ಕ್ಯಾನ್ಸರ್ ಅನ್ನು ಲ್ಯೂಕೆಮಿಯ ಎಂತಲೂ ಕರೆಯುತ್ತಾರೆ. ಈ ಭಯಾನಕ ಖಾಯಿಲೆ ಬಗ್ಗೆ ನಿಮಗೆ ತಿಳಿದಿರಬಹುದು. ಇದೊಂದು ಡೆಡ್ಲೀ ಬ್ಲಡ್ ಕ್ಯಾನ್ಸರ್. ಹೆಚ್ಚಾಗಿ ಕ್ಯಾನ್ಸರ್ ನಮಗಿದೆ ಅಂತ ಗೊತ್ತಾಗೋದೇ ನಾಲ್ಕನೇ ಸ್ಟೇಜ್‌ಗೆ ಹೋದ ಬಳಿಕ. ಲ್ಯುಕೆಮಿಯವೂ ಇದಕ್ಕಿಂತ ಹೊರತಲ್ಲ. ಈಗ ಸ್ವಲ್ಪ ನಿರಾಳವಾಗುವ ಸುದ್ದಿಯೊಂದು ಬಂದಿದೆ.

ವಿಟಮಿನ್ ಸಿ ಯ ಅಂಶ ಹೆಚ್ಚಿರುವ ಕಿತ್ತಳೆ ಹಣ್ಣು, ನಿಂಬೆಹಣ್ಣಿನ ಸೇವನೆ ಹೆಚ್ಚೆಚ್ಚು ಮಾಡುತ್ತಿದ್ದರೆ ಈ ಲ್ಯುಕೆಮಿಯದಿಂದ ದೂರವಿರಬಹುದು ಎಂದು ಇತ್ತೀಚಿನ ಸಂಶೋಧನೆಯೊಂದು ಹೇಳುತ್ತಿದೆ. ಇದಕ್ಕೊಂದು ಕಾರಣವೂ ಇದೆ. ಲ್ಯುಕೆಮಿಯ ತೊಂದರೆಯಿಂದ ಬಳಲುತ್ತಿದ್ದ ಹೆಚ್ಚಿನವರಲ್ಲಿ ವಿಟಮಿನ್ ಸಿ ಕೊರತೆಯಿತ್ತು.

ಹಾಗಾಗಿ ಲ್ಯುಕೆಮಿಯಾಗೆ ‘ಮಿಟಮಿನ್ ಸಿ’ ಕೊರತೆಯೂ ಒಂದು ಕಾರಣ ಇರಬಹುದು ಎಂದು ವೈದ್ಯ ವಿಜ್ಞಾನ ಅಂದಾಜಿಸಿದೆ. ಹಾಗಾಗಿ ‘ಮಿಟಮಿನ್ ಸಿ’ ಅಂಶ ಹೆಚ್ಚಿರುವ ನಿಂಬೆ, ಕಿತ್ತಳೆಯನ್ನು ಹೆಚ್ಚೆಚ್ಚು ಸೇವಿಸಿ ಮತ್ತು ಕಾನ್ಸರ್ ಬರದೇ ರೀತಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

WhatsApp Group Join Now

Leave a Reply

Your email address will not be published. Required fields are marked *