ಬಾಯಿಯ ದುರ್ವಾಸನೆಗೆ ಪರಿಣಾಮಕಾರಿಯಾದ ಕೆಲವು ಅಗತ್ಯ ಟಿಪ್ಸ್ ಇಲ್ಲಿವೆ. ಅವುಗಳನ್ನು ಮಾಡಿ ನೋಡಿ ಹಾಗೂ ನಿಮ್ಮ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಿ.ನಾವು ಒಂದು ದಿನ ಸರಿಯಾಗಿ ಹಲ್ಲುಜ್ಜದೇ ಇದ್ದರೆ, ನಮ್ಮ ಬಾಯಿಯ ವಾಸನೆಯನ್ನು ನಾವೇ ಸಹಿಸಿಕೊಳ್ಳಲು ಸಾಧ್ಯವಿರುವುದಿಲ್ಲ. ಇನ್ನು ಅಕ್ಕಪಕ್ಕದವರು ಅದು ಹೇಗೆ ತಡೆದುಕೊಳ್ಳುತ್ತಾರೆ ದೇವರೇ ಬಲ್ಲ. ವೈದ್ಯರ ಪ್ರಕಾರ ನಾವು ಒಂದು ದಿನಕ್ಕೆ ಎರಡು ಬಾರಿ ಹಲ್ಲುಜ್ಜಬೇಕು. ಇದರಿಂದ ಹಲ್ಲುಗಳ ಮೇಲೆ ಕಲೆಗಳು ಉಂಟಾಗುವ ಸಾಧ್ಯತೆ ಇರುವುದಿಲ್ಲ. ಇದರ ಜೊತೆಗೆ ಬಾಯಿಯ ದುರ್ವಾಸನೆ ಅಥವಾ ಹಲ್ಲುಗಳ ಸಂದುಗಳಲ್ಲಿ ಹಾಗೂ ವಸಡಿನ ಭಾಗದಲ್ಲಿ ಬ್ಯಾಕ್ಟೀರಿಯಾಗಳ ಸೋಂಕು ಕಂಡು ಬರುವ ಸಾಧ್ಯತೆ ಕೂಡ ಇರುವುದಿಲ್ಲ. ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುವ ಕೆಲವು ವಿಶೇಷವಾದ ಟಿಪ್ಸ್ ಗಳ ಬಗ್ಗೆ ತಿಳಿದುಕೊಳ್ಳಿ.
ಬೆಳಗ್ಗೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಬೆಡ್ ಕಾಫಿ ಕುಡಿಯಲು ಹೋಗಬೇಡಿ. ಮೊದಲು ಸ್ವಚ್ಛವಾಗಿ ಹಲ್ಲು ಮತ್ತು ನಾಲಿಗೆಯನ್ನು ಉಜ್ಜಿಕೊಂಡು ಬಾಯಿ ತೊಳೆದುಕೊಂಡು ಆನಂತರ ಹಲ್ಲುಜ್ಜಿ. ನೀವು ಹಲ್ಲುಜ್ಜುವ ಟೂಥ್ ಪೇಸ್ಟ್ ನಲ್ಲಿ ಪ್ಲೋರೈಡ್ ಅಂಶ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಜೊತೆಗೆ ರಾತ್ರಿ ಮಲಗುವ ಮುಂಚೆ ಕೂಡ ಪ್ರತಿ ದಿನ ಇದೇ ರೀತಿ ಹಲ್ಲುಜ್ಜುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಇದರಿಂದ ಬಾಯಿಯ ದುರ್ವಾಸನೆ ದೂರವಾಗುವುದದರ ಜೊತೆಗೆ, ನಿಮ್ಮ ಬಾಯಿ ರೋಗಮುಕ್ತವಾಗುತ್ತದೆ.
ನಾವು ಬೆಳಗಿನ ಉಪಹಾರ ಸೇವನೆ ಮಾಡಿದ ನಂತರ ಅಥವಾ ಮಧ್ಯಾಹ್ನ ಊಟ ಮಾಡಿದ ನಂತರ ಚಹ ಕುಡಿಯುವುದು ಅಥವಾ ಬೇರೆ ಬೇರೆ ಬಗೆಯ ಸ್ನ್ಯಾಕ್ಸ್ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡಿರುತ್ತೇವೆ. ಹೀಗಾಗಿ ನಾವು ಸೇವನೆ ಮಾಡುವ ಆಹಾರ ಪದಾರ್ಥಗಳ ಪಳೆಯುಳಿಕೆಗಳು ನಮ್ಮ ಹಲ್ಲುಗಳ ಸಂದುಗಳಲ್ಲಿ ಹಾಗೂ ವಸಡಿನ ಭಾಗದಲ್ಲಿ ಹಾಗೇ ಉಳಿಯುತ್ತವೆ. ಇವುಗಳಿಂದ ಮುಕ್ತಿ ಪಡೆಯಲು ಆಗಾಗ ಸ್ವಚ್ಛವಾದ ನೀರಿನಿಂದ ಬಾಯಿ ಮುಕ್ಕಳಿಸುವ ಅಭ್ಯಾಸವನ್ನು ಇಟ್ಟುಕೊಳ್ಳಬೇಕು. ಇದರಿಂದಲೂ ಸಹ ಬಾಯಿಯ ದುರ್ವಾಸನೆ ದೂರವಾಗುತ್ತದೆ ಎಂದು ಹೇಳಬಹುದು. ಯಾವುದೇ ಕಾರಣಕ್ಕೂ ಅಥವಾ ಯಾವುದೇ ಸಂದರ್ಭದಲ್ಲೂ ಕೂಡ ಅದು ಚಳಿಗಾಲ ಆಗಿರಲಿ ಅಥವಾ ಮಳೆಗಾಲ ಆಗಿರಲಿ ಇಲ್ಲ ಬೇಸಿಗೆಕಾಲ ಆಗಿರಲಿ, ನೀರು ಕುಡಿಯುವ ಅಭ್ಯಾಸದಿಂದ ಮಾತ್ರ ದೂರ ಉಳಿಯಬಾರದು. ನಮ್ಮ ಬಾಯಿಯ ದುರ್ವಾಸನೆಯನ್ನು ದೂರ ಮಾಡುವಲ್ಲಿ ಕೂಡ ಇದು ಪ್ರಮುಖ ಪಾತ್ರವಹಿಸುತ್ತದೆ. ಬೇಕಾದ ಪ್ರಮಾಣದಲ್ಲಿ ನಾವು ನೀರು ಕುಡಿಯುವುದರಿಂದ ಹೊಟ್ಟೆಯ ಭಾಗದಲ್ಲಿ ಅಥವಾ ನಮ್ಮ ದೇಹದ ಇತರ ಅಂಗಾಂಗಗಳ ಸ್ಥಳಗಳಲ್ಲಿ ಶೇಖರಣೆಯಾಗಿರುವ ಕೆಟ್ಟ ವಿಷಕಾರಿ ಅಂಶಗಳು ದೂರವಾಗುತ್ತದೆ. ಇದು ಸಂಪೂರ್ಣವಾಗಿ ನಮ್ಮ ಬಾಯಿಯ ಸ್ವಚ್ಛತೆಯನ್ನು ನಿರ್ವಹಣೆ ಮಾಡುವಲ್ಲಿ ಕೂಡ ಸಹಾಯ ಮಾಡುತ್ತದೆ.