ಬಾಯಿ ಹುಣ್ಣು ಅಥವಾ ಅಲ್ಸರ್ ಸಮಸ್ಯೆ ಹಲವರಲ್ಲಿ ಸಾಮಾನ್ಯ ಅತಿಯಾದ ಉಷ್ಣ ಇದ್ದಕ್ಕೆ ಕಾರಣ. ಕೆಲವೊಂದು ಸಲ ಸಣ್ಣದಾಗಿ ಕಾಣಿಸುವ ಇದು ಕ್ರಮೇಣ ದೊಡ್ಡದಾಗಿ ಕಿರಿಕಿರಿ ಉಂಟುಮಾಡುತ್ತದೆ ಇದರಿಂದ ಅನುಭವಿಸುವ ನೋವು ಅಷ್ಟಿಷ್ಟಲ್ಲ. ಬಾಯಿಯಲ್ಲಿ ಹುಣ್ಣಾದರೆ ಏನನ್ನು ಸಹ ತಿನ್ನಲಾಗುವುದಿಲ್ಲ ಸ್ವಲ್ಪ ಖಾರ ಇದಕ್ಕೆ ತಗೂಲಿದರೂ ಅತಿವ ನೋವು ಉರಿ ಉಂಟಾಗುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಎಲ್ಲಿದೆ ಸುಲಭ ವಿಧಾನ. ತೆಂಗಿನ ಹಾಲಿನಿಂದ ಸ್ವಲ್ಪವೇ ಜೇನನ್ನು ಸೇರಿಸಿ ಮಿಶ್ರಣ ಮಾಡಿ ಬಾಯಿ ಹುಣ್ಣಾಗಿರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಬಾಯಿ ಹುಣ್ಣಿನ ಸಮಸ್ಯೆಯಿಂದ ಪಾರಾಗಬಹುದು. ಇದನ್ನು ದಿನದಲ್ಲಿ 3 ರಿಂದ 4 ಬಾರಿ ಮಾಡಬೇಕು ಅಥವಾ ತೆಂಗಿನ ನೀರನ್ನು ಬಳಸಿ ಬಾಯಿಯನ್ನು ಶುಚಿಗೊಳಿಸಿ ಇಲ್ಲವೇ ತೆಂಗಿನ ಎಣ್ಣೆಯಿಂದ ಸಹ ಮಸಾಜ್ ಮಾಡಿಕೊಳ್ಳಿ.
ಇನ್ನು ಕೊತ್ತಂಬರಿ ಬೀಜ ಬಾಯಿ ಹುಣ್ಣಿಗೆ ರಾಮಬಾಣ ಒಂದು ಚಮಚ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಅದನ್ನು ಸೋಸಿ ಈ ನೀರನ್ನು ಬಾಯಿಗೆ ಹಾಕಿಕೊಂಡು ಬಾಯಿಯನ್ನು ಸ್ವಚ್ಛ ಮಾಡಿ ಇದನ್ನು ತಪ್ಪದೆ ಮೂರು ಬಾರಿ ಮಾಡಿದರೆ ಬೇಗನೆ ಬಾಯಿ ಹುಣ್ಣು ದೂರವಾಗುತ್ತದೆ. ಅಡುಗೆ ಸೋಡದಿಂದ ಸಹ ಬಾಯಿ ಹುಣ್ಣನ್ನು ನಿವಾರಿಸಬಹುದು ಅದು ಹೇಗೆಂದರೆ ಅಡುಗೆ ಸೋಡವನ್ನು ನೀರಿನಲ್ಲಿ ಹಾಕಿ ಪೇಸ್ಟ್ ಮಾಡಿ ಹುಣ್ಣಿಮೆ ಜಾಗಕ್ಕೆ ಹಚ್ಚಿ ಕೆಲವು ಸಮಯ ಬಿಡಬೇಕು. ಇದನ್ನು ಹಲವಾರು ಬಾರಿ ಮಾಡುತ್ತಿದ್ದಾರೆ ಹುಣ್ಣು ಮಾಯವಾಗುತ್ತದೆ. ಜೇನು ಸಹ ಇದಕ್ಕೆ ಉತ್ತಮ ಪರಿಹಾರ ಸ್ವಲ್ಪ ಜೇನು ಮತ್ತು ಹತ್ತಿಯನ್ನು ತೆಗೆದುಕೊಂಡು ಹತ್ತಿಯನ್ನು ಜೇನಿನಲ್ಲಿ ಅದ್ದಿ ಹುಣ್ಣಾಗಿರುವ ಜಾಗಕ್ಕೆ ಹಚ್ಚಬೇಕು ಇದರಿಂದ ಹಣ್ಣಿನ ಸಮಸ್ಯೆಗೆ ಬೇಗ ಪರಿಹಾರ ಸಿಗುತ್ತದೆ.