ನಮಸ್ತೆ ಗೆಳೆಯರೇ, ಪೋಷಕಾಂಶಗಳ ಆಗರ ಆಗಿರುವ ಜೊತೆಗೆ ಋತುಗಳ ಕೊರತೆ ಇಲ್ಲದೆ ವರ್ಷವಿಡೀ ಪೂರ್ತಿಯಾಗಿ ಸಿಗುವ ಹಣ್ಣು ಆಗಿದೆ. ಬಾಳೆಹಣ್ಣು ದೇಹಕ್ಕೆ ಅಧಿಕವಾದ ಶಕ್ತಿಯನ್ನು ನೀಡುತ್ತದೆ ಅಂತ ಮೊದಲಿನಿಂದಲೂ ನಮಗೆ ತಿಳಿದು ಬಂದಿದೆ. ನಿಮ್ಮ ದೇಹಕ್ಕೆ ಮತ್ತಷ್ಟು ಶಕ್ತಿ ಸಿಗುತ್ತದೆ ಬಲ ಬರುತ್ತದೆ. ಬಾಳೆಹಣ್ಣು ರುಚಿಯಲ್ಲಿ ಸಿಹಿಯಾಗಿದ್ದು ದೇಹಕ್ಕೆ ಹಲವಾರು ಪೋಷಕಾಂಶಗಳನ್ನು ಒದಗಿಸುತ್ತದೆ. ದಿನಕ್ಕೊಂದು ಸೇಬು ವೈದ್ಯರಿಂದ ನಮ್ಮನ್ನು ದೂರ ಮಾಡುತ್ತದೆ ಅನ್ನುವುದು ಒಂದು ಸುಭಾಶಿತವಾದರೇ ಒಂದೆರಡು ಬಾಳೆಹಣ್ಣು ನಿತ್ಯವೂ ನಮ್ಮನ್ನು ವೈದ್ಯರಿಂದ ದೂರವಿರಿಸುತ್ತದೆ ಅನ್ನುವ ಮಾತಲ್ಲಿ ಯಾವುದು ತಪ್ಪಿಲ್ಲ.
ಬಾಳೆಹಣ್ಣು ಇಷ್ಟ ಪಡದೇ ಇರುವವರು ಬೆರಳಣಿಕೆಯಷ್ಟು. ಈ ಹಣ್ಣನ್ನು ಎಲ್ಲರೂ ತುಂಬಾನೇ ಇಷ್ಟ ಪಟ್ಟು ತಿನ್ನುತ್ತಾರೆ. ಒಂದು ವೇಳೆ ಊಟ ಸಿಗದೇ ಇದ್ದರೂ ಕೂಡ ನೀವು ಒಂದೆರಡು ಬಾಳೆಹಣ್ಣು ತಿಂದು ಒಂದು ಲೋಟ ನೀರು ಕುಡಿದರೆ ನೀವು ಮತ್ತೆ ಊಟ ಮಾಡುವ ಅವಶ್ಯಕತೆ ಇರುವುದಿಲ್ಲ. ನಿಮಗೆ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಅಷ್ಟೇ ಅಲ್ಲದೆ ಇದು ಕಿಡ್ನಿಗೆ ಉದರಕ್ಕೆ ಶ್ವಾಸಕೋಶಕ್ಕೆ ಸಂಪೂರ್ಣ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.
ಇದು ದೇಹಕ್ಕೆ ಶಕ್ತಿಯನ್ನು ನೀಡುವುದರ ಜೊತೆಗೆ ಪುಷ್ಟಿಯನ್ನು ಒದಗಿಸಿ ದೇಹವನ್ನು ಸಮರ್ಥವಾಗಿ ಇರುವಂತೆ ಮಾಡುತ್ತದೆ. ಇನ್ನೂ ನೀವು ಮಲಬದ್ಧತೆ ಸಮಸ್ಯೆಯಿಂದ ತುಂಬಾನೇ ನರಳುತ್ತಿದ್ದರೆ ರಾತ್ರಿ ಹೊತ್ತು ಊಟವನ್ನು ಮಾಡಿದ ಬಳಿಕ ಒಂದು ಅಥವಾ ಎರಡು ಬಾಳೆಹಣ್ಣು ತಿನ್ನಿ. ಇದರಿಂದ ನಿಮಗೆ ಮಲಬದ್ಧತೆ ಸಮಸ್ಯೆ ಅನ್ನುವುದು ದೂರವಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ತುಂಬಾನೇ ಸಲೀಸಾಗಿ ಮಾಡುತ್ತದೆ. ಬಾಳೆಹಣ್ಣು ತಿನ್ನುವುದರಿಂದ ತುಂಬಾನೇ ಆರಾಮದಾಯಕ ನಿದ್ರೆ ಬರುತ್ತದೆ.
ಅಷ್ಟೇ ಅಲ್ಲದೇ ಇದು ಸೌಂದರ್ಯವರ್ಧಕ ಆಗಿ ಕೂಡ ಕೆಲಸವನ್ನು ಮಾಡುತ್ತದೆ.
ಬಾಳೆಹಣ್ಣಿನಲ್ಲಿ ಅತಿ ಕಡಿಮೆ ಉಪ್ಪು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಶಿಯಂ ಇದೆ. ಈ ಪ್ರಮಾಣವನ್ನು ವೈದ್ಯಕೀಯ ಕ್ಷೇತ್ರ ಅಂಗೀಕರಿಸಿದ್ದು ರಕ್ತದೊತ್ತಡ ಕಡಿಮೆಗೊಳಿಸುವಲ್ಲಿ ನೆರವಾಗುತ್ತದೆ ಹಾಗೂ ತನ್ಮೂಲಕ ಹೃದಯ ಸ್ತಂಭನೆಯ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ. ಬಾಳೆಹಣ್ಣಿನ ಮಾಸ್ಕ್ ಬಳಕೆ ಮಾಡುವುದರಿಂದ ಮುಖದ ಹೊಳಪು ಹೆಚ್ಚುತ್ತದೆ. ಒಣಗಿದ ಚರ್ಮವು ಮೃದು ಆಗುತ್ತದೆ.
ಕ್ಯಾಲ್ಸಿಯಂ ಅನ್ನುವುದು ಬಾಳೆಹಣ್ಣಿನಲ್ಲಿ ಅಧಿಕವಾಗಿ ಇರುವುದರಿಂದ ಇದು ಮೂಳೆಗಳಿಗೆ ಶಕ್ತಿಯನ್ನು ಹೆಚ್ಚಿಸುತ್ತದೆ. ರಾತ್ರಿ ಮಲಗುವ ವೇಳೆಗೆ ಬಾಳೆಹಣ್ಣು ತಿನ್ನುವುದರಿಂದ ಕ್ಯಾಲ್ಸಿಯಂ ಸೋರಿಕೆ ಆಗುವುದನ್ನು ತಡೆದು ಮೂಳೆಗಳ ಸಧೃಢತೆಯನ್ನು ಹೆಚ್ಚಿಸುತ್ತದೆ. ಕರುಳುಗಳ ಒಳಗೆ ಹುಣ್ಣು ಅಥವಾ ಅಲ್ಸರ್ ಆಗಿರುವ ರೋಗಿಗಳಿಗೆ ಬಾಳೆಹಣ್ಣು ಬಿಟ್ಟರೆ ಬೇರೆ ಯಾವ ಆಹಾರವನ್ನೂ ನೀಡುವಂತಿಲ್ಲ. ಏಕೆಂದರೆ ಈ ಹಣ್ಣು ತಿಂದಾಗ ಕರುಳಿನ ಮೂಲಕ ಹಾದು ಹೋಗುವಾಗ ಯಾವುದೇ ತೊಂದರೆಯನ್ನು ಉಂಟು ಮಾಡುವುದಿಲ್ಲ.
ಬಾಳೆಹಣ್ಣು ಉಷ್ಣ ನಿಯಂತ್ರಕ ಆಗಿ ಕೆಲಸವನ್ನು ಮಾಡುತ್ತದೆ. ನಿಮಗೆ ಗೊತ್ತೇ? ಥೈ ಲ್ಯಾಂಡ್ ನಲ್ಲಿ ಗರ್ಭಿಣಿ ಸ್ತ್ರೀಯರು ಬಾಳೆಹಣ್ಣಿನ ಸೇವನೆಯನ್ನು ಮಾಡುವುದು ಸಾಮಾನ್ಯ. ಇದರಿಂದ ಅವರ ದೇಹ ಮತ್ತು ಮನಸ್ಸುಗಳೆರಡರ ಉಷ್ಣತೆ ಕಡಿಮೆಯಾಗಿ ಹುಟ್ಟಿದ ಮಗುವಿನ ದೇಹ ಮತ್ತು ಮನಸ್ಸುಗಳು ಶಾಂತವಾಗಿರಲೆಂಬ ನಂಬಿಕೆ ಇದೆ. ಬಾಳೆಹಣ್ಣಿನಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿರುವುದರಿಂದ ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಪ್ರಚೋದಿಸಿ ರಕ್ತಹೀನತೆಯನ್ನು ನೀಗಿಸುತ್ತದೆ.
ಇನ್ನೂ ಸಾಕಷ್ಟು ಲಾಭಗಳನ್ನು ಈ ಬಾಳೆಹಣ್ಣು ತಿನ್ನುವುದರಿಂದ ಪಡೆಯಬಹುದು. ಹಾಗೆಯೇ ನೀವು ಕೂಡ ಬಾಳೆಹಣ್ಣು ನಿತ್ಯವೂ ಸೇವನೆ ಮಾಡುತ್ತಾ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಹಾಗಾದ್ರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.