ಬಾಳಿಗೆ ಒಂದೇ ಗೊನೆ ರಾಗಿಗೆ ಒಂದೇ ತೆನೆ ಎಂಬ ಮಾತು ಕೇಳಿರುತ್ತೀರಿ. ಯಾಕೆಂದರೆ ಯಾವುದು ಸಹ ನಮ್ಮ ಹಿರಿಯರು ಸುಮ್ಮನೆ ಹೇಳಿಲ್ಲ ತನ್ನದೇ ಆದ ಅರ್ಥಗಳನ್ನು ಮತ್ತು ವಿಶ್ಲೇಷಣೆಗಳನ್ನು ಅವರ ಅಭಿಪ್ರಾಯಗಳಲ್ಲಿ ಮತ್ತು ಅನಿಸಿಕೆಗಳಲ್ಲಿ ನಾವು ನಿರೀಕ್ಷೆ ಮಾಡಬಹುದು. ಬಾಳೆ ಗಿಡದ ವಿಷಯಕ್ಕೆ ಬರುವುದಾದರೆ ಬಾಳೆ ಗಿಡದಲ್ಲಿ ಅದರ ಪ್ರತಿಯೊಂದು ಭಾಗ ಕೂಡ ಉಪಯೋಗಕ್ಕೆ ಬರುತ್ತದೆ
ಒಂದೊಂದು ಭಾಗವೂ ಕೂಡ ತನ್ನದೇ ಆದ ವಿಶೇಷವಾದ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ ಹಾಗಾದರೆ ಬನ್ನಿ ಬಾಳೆ ಹೂವಿನಿಂದ ಸಿಗುವ ಆರೋಗ್ಯ ಪ್ರಯೋಜನಗಳನ್ನು ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ. ಬಾಳೆ ಹೂವನ್ನು ಪಲ್ಯ ಮಾಡಿ ಹೆಚ್ಚಾಗಿ ಸವಿಯುತ್ತಾರೆ. ಮಹಾರಾಷ್ಟ್ರ ಭಾಗದಲ್ಲಿ ಇದು ಫೇಮಸ್ ಕೂಡ. ಚಪಾತಿ ದಾಲ್ ಇತ್ಯಾದಿಗಳ ಜೊತೆಗೆ ಇದು ಬಹಳ ಚೆನ್ನಾಗಿ ಹೊಂದಿಕೊಳ್ಳುತ್ತದೆ.
ಆದರೆ ಅದರ ಮೇಲ್ಭಾಗದ ಸಿಪ್ಪೆಯನ್ನು ತೆಗೆದುಹಾಕುವುದೇ ಒಂದು ದೊಡ್ಡ ಪ್ರಯಾಸ. ಬಾಳೆ ಹೂವನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಏಕೆ ಸೇವಿಸಬೇಕು ಎಂದರೆ ಬಾಳೆ ಹೂವಿನಲ್ಲಿ ಸಿಗುವ ಹೆಚ್ಚಿನ ನಾರಿನ ಅಂಶ ಮಲಬದ್ಧತೆ ಸಮಸ್ಯೆಯನ್ನು ಸುಲಭವಾಗಿ ನಿವಾರಣೆ ಮಾಡುವ ಗುಣವನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲ ದೀರ್ಘಕಾಲ ಜೀರ್ಣತೆ ಮತ್ತು ಇನ್ನಿತರ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಹೊಂದಿರುವ ಜನರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ.
ಇನ್ನು ಬಾಳೆಹಣ್ಣಿನಲ್ಲಿ ಫಾಲಿ-ಪಿನಾಲ್ ಅಂಶಗಳು ಹೆಚ್ಚಾಗಿ ಕಂಡುಬರುತ್ತದೆ. ಈ ಕಾರಣದಿಂದ ಇವುಗಳಲ್ಲಿ ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳು ತುಂಬಾ ಇದೆ. ಬಾಳೆ ಹೂವಿನಲ್ಲಿ ವಿಟಮಿನ್ ಎ, ಸಿ ಮತ್ತು ಇ ಸಮೃದ್ದವಾಗಿದೆ. ಇದರಲ್ಲಿ ಪೊಟಾಶಿಯಂ ಮತ್ತು ನಾರಿನಾಂಶವೂ ಇದೆ. ಇದರಿಂದಾಗಿ ಇದು ಆರೋಗ್ಯಕಾರಿ ಆಹಾರ ಮತ್ತು ಆರೋಗ್ಯಕಾರಿ ಪೋಷಕಾಂಶಗಳನ್ನು ಒಳಗೊಂಡಿದೆ ದೇಹಕ್ಕೆ ಉಂಟಾಗುವ ಹಾನಿಗಳನ್ನು ತಪ್ಪಿಸುತ್ತದೆ ಇನ್ನು ಬಾಳಿ ಹೂವಿನಲ್ಲಿ ಮೊದಲು ಹೇಳಿದ ಹಾಗೆ ಹೆಚ್ಚಿನ ಪ್ರಮಾಣದ ನಾರಿನ ಅಂಶ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳು ಇರುವ ಕಾರಣ ರಕ್ತದಲ್ಲಿ ಇರುವ ಸಕ್ಕರೆ ಮಟ್ಟವನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತದೆ.
ಬಾಳೆ ಹೂವಿನಲ್ಲಿ ಇರುವಂತಹ ಎಥೆನಾಲ್ ಅಂಶದಿಂದಾಗಿ ಇದು ಸೋಂಕು ನಿವಾರಣೆ ಮಾಡುವುದು. ಇದು ರೋಗಕಾರಕ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುವುದು. ನಮ್ಮ ದೇಹಕ್ಕೆ ಅತೀ ಹೆಚ್ಚು ಹಾನಿ ಉಂಟು ಮಾಡುವಂತಹ ಬ್ಯಾಸಿಲಸ್ ಸಬ್ಟಾಲಿಸ್, ಬ್ಯಾಸಿಲಸ್ ಸೆರಿಯಸ್ ಮತ್ತು ಎಸ್ಚೆರಿಚಿಯಾ ಕೋಲಿ ಯಂತಹ ಬ್ಯಾಕ್ಟೀರಿಯಾ ದಾಳಿಯನ್ನು ಇದು ತಡೆಯುವುದು. ಮಿತ ಪ್ರಮಾಣದಲ್ಲಿ ಬಾಳೆಹೂಗಳನ್ನು ಸೇವನೆ ಮಾಡಿದರೆ ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಬಹುದು. ಇದು ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವುದು.