ಸಾಮಾನ್ಯವಾಗಿ ಬಿಪಿ ಹಾಗೂ ಕೊಲೆಸ್ಟ್ರಾಲ್‌ಗಳು ಸಾಮಾನ್ಯವಾಗಿ ಇತ್ತಿಚಿನಿ ದಿನಗಳಲ್ಲಿ ಹೆಚ್ಚಾಗುತ್ತಿವೆ. ಸುಮಾರು ೧೦ ಮಿಲಿಯನ್‌ಗೂ ಅಧಿಕ ಮಂದಿ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾದರೆ ಈ ಸಮಸ್ಯೆಯನ್ನು ಕಡಿಮೆ ಮಾಡೋದಿಕ್ಕೆ ಇರುವ ಮದ್ದು ಅಥವಾ ಔಷಧಗಳೇನು ಅನ್ನೋದಾದರೆ ಇಲ್ಲಿ ನೋಡಿ.
ಬಿಪಿ ಕೊಲೆಸ್ಟ್ರಾಲ್‌ಗೆ ಸಮಸ್ಯೆ ಬೇಗ ಗೊತ್ತಾಗುವುದಿಲ್ಲ. ಆದರೆ ಕೆಲವೊಮ್ಮೆ ಈ ಸಮಸ್ಯೆ ಇಡೀ ಜೀವನವನ್ನೇ ನರಳುವಂತೆ ಮಾಡಿ ಬಿಡುತ್ತದೆ. ಹಾಗಾಗಿ ಈ ಸಮಸ್ಯೆ ಬಂದ ಹಂತದಲ್ಲೇ ಎಚ್ಚರ ವಹಿಸೋದು ತುಂಬಾ ಮುಖ್ಯವಾಗುತ್ತದೆ. ಅದೆಷ್ಟೋ ಮಂದಿ ಈ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅನೇಕ ರೀತಿಯ ಮನೆ ಮದ್ದುಗಳು ಗೊತ್ತಿದ್ದರೂ ಕೆಲವೊಮ್ಮೆ ಅದನ್ನು ತೆಗೆದುಕೊಳ್ಳುವಲ್ಲಿ ಎಡವುತ್ತಾರೆ.
ಇದೀಗ ಬಿಪಿ ಹಾಗೂ ಕೊಲೆಸ್ಟ್ರಾಲ್ ನಿಂದ ಬಳಲುತ್ತಿರುವವರಿಗೆ ಸರಿಯಾದ ಮನೆ ಮದ್ದು ಅಂದರೆ ಪ್ರತಿ ದಿನ ಟಮೋಟೋ ಜ್ಯೂಸ್ ತೆಗೆದುಕೊಳ್ಳುವುದು. ಈ ಟಮೋಟೋ ಜ್ಯೂಸ್ ಅನ್ನು ಕುಡಿಯೋದರಿಂದ ಬಿಪಿ ಹಾಗೂ ಕೊಲೆಸ್ಟ್ರಾಲ್ ಕಡಿಮೆಯಾಗುತ್ತೆ ಅನ್ನೋದ ಅಧ್ಯಯನದ ಮೂಲಕ ಬಹಿರಂಗವಾಗಿರೋದು ವರದಿಗಳಾಗಿವೆ. ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡಲು ಟಮೋಟೋ ಜ್ಯೂಸ್ ಸಹಕಾರಿಯಾಗಲಿದೆ.
ಇನ್ನು ಪ್ರತಿನಿತ್ಯ ದೈಹಿಕ ಕಸರತ್ತು ಕೂಡ ಮುಖ್ಯವಾಗಿರುತ್ತದೆ. ಪ್ರತಿ ನಿತ್ಯ ವ್ಯಾಯಾಮ ಯೋಗ ಮಾಡುವುದರಿಂದಲೂ ಈ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದು. ಇನ್ನು ಅನೇಕ ಮಂದಿ ಇಂದಿಗೂ ದೈಹಿಕ ಕಸರತ್ತಿನ ಮೂಲಕ ಈ ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ. ವೈದ್ಯರ ಸೂಚನೆ ಮೇರೆಗೆ ದೈಹಿಕ ಕಸರತಗ್ತು ನಡೆಸಿ ಆರೋಗ್ಯದಿಂದಿರಿ.