ಹಲೋ ನಮ್ಮ ಪ್ರೀತಿಯ ಓದುಗರೇ, ಬಿಳಿ ಮೂಲಂಗಿಯಲ್ಲಿರುವ ಪೋಷಕಾಂಶಗಳು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಚಳಿಗಾಲದ ಬೆಳೆ ಆಗಿರುವ ಮೂಲಂಗಿಯನ್ನು ಹೆಚ್ಚಾಗಿ ಸೇವಿಸುವ ಮೂಲಕ ಕಣ್ಣಿನ ಆರೋಗ್ಯ ಉತ್ತಮಗೊಳಿಸಬಹುದು. ಬಿಳಿ ಮೂಲಂಗಿಯನ್ನು ಸಾಮಾನ್ಯವಾಗಿ ಸಾಂಬಾರ್ ಮತ್ತು ಪಲ್ಯ ಮಾಡಲು ಹೆಚ್ಚಾಗಿ ಬಳಸುತ್ತಾರೆ. ಆದರೆ ಇದನ್ನು ಹಸಿಯಾಗಿಯೇ ಸೇವಿಸಬಹುದು. ಈ ಮೂಲಕ ಮೂಲಂಗಿಯಲ್ಲಿರುವ ಅಧಿಕ ಪ್ರಮಾಣದ ಆಂಟಿಆಕ್ಸಿಡೆಂಟ್ಗಳು, ಪೊಟ್ಯಾಸಿಯಂ, ರಂಜಕ, ಮಗ್ನಿಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್ ಹಾಗೂ ಕರಗದ ನಾರುಗಳ ಗರಿಷ್ಟ ಲಾಭ ಪಡೆಯಬಹುದು. ಚಳಿಗಾಲದಲ್ಲಿ ಕೋಸಿನ ಹಾಗೂ ನೆಲದಡಿಯಲ್ಲಿ ಬೆಳೆಯುವ ಗೆಡ್ಡೆಗಳು ಹೆಚ್ಚಾಗಿ ಲಭಿಸುತ್ತವೆ. ಕ್ಯಾರೇಟ್, ಎಲೆಕೋಸು, ಬಿಳಿ ಮೂಲಂಗಿ ಹಾಗೂ ಹಸಿಯಾಗಿ ಸೇವಿಸಬಹುದಾದ ಸೊಪ್ಪುಗಳು ಹಾಗೂ ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತವೆ. ಸಿಗುವ ಈ ಎಲ್ಲ ತರಕಾರಿಗಳನ್ನು ಆದಷ್ಟೂ ಮಟ್ಟಿಗೆ ನಮ್ಮ ಆಹಾರದಲ್ಲಿ ಬಳಸಿ ಅವುಗಳ ಪ್ರಯೋಜನ ಪಡೆಯುವುದು ಜಾಣತನವಾಗಿದೆ. ಈ ಪಟ್ಟಿಯಲ್ಲಿ ಬಿಳಿ ಮೂಲಂಗಿ ಅಗ್ರ ಸ್ಥಾನ ಪಡೆದಿದೆ.
೧.ಮೂಲಂಗಿ ಸೇವನೆಯಿಂದ ರಕ್ತದೊತ್ತಡ ಕಡಿಮೆಯಾಗಿರುವುದನ್ನು ಗಮನಿಸಲಾಗಿದೆ. ಹಾಗೂ ಇದೇ ಕಾರಣಕ್ಕೆ ಅಧಿಕ ರಕ್ತದೊತ್ತಡ ಇರುವ ವ್ಯಕ್ತಿಗಳಿಗೆ ಹೇಳಿ ಮಾಡಿಸಿದಂಥ ಮದ್ದಾಗಿದೆ. ೨. ಜೊತೆಗೆ ಇದರ ಪೋಷಕಾಂಶಗಳು ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ರಕ್ತನಾಳಗಳನ್ನು ಬಲಗೊಳಿಸಲು ನೆರವಾಗುತ್ತದೆ. ೩.ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಕಾರಿ – ರಕ್ತದೊತ್ತಡ ಕಡಿಮೆಯಾದರೂ ತೊಂದರೆ, ಹೆಚ್ಚಾದರೂ ತೊಂದರೆ. ಬಿಳಿ ಮೂಲಂಗಿ ಅಲ್ಲಿರುವ ಪೊಟ್ಯಾಸಿಯಂ, ಮತ್ತು ಇತರ ಪೋಷಕಾಂಶಗಳು ರಕ್ತದ ಒತ್ತಡವನ್ನು ಆರೋಗ್ಯಕರ ಮಿತಿಯಲ್ಲಿಡಲು ನೆರವಾಗುತ್ತದೆ. ಬಿಳಿ ಮೂಲಂಗಿಯಲ್ಲಿರುವ ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಮೂಲಕ ದೇಹದ ಸಾಮಾನ್ಯ ತೊಂದರೆಗಳಾದ ಕೆಮ್ಮು,ಶೀತ,ಜ್ವರ ಈ ತರಹದ ವೈರಸ್ಸುಗಳನ್ನು ಹೊಡೆದೋಡಿಸುತ್ತದೆ. ಅಲ್ಲದೇ ಬಾವು, ಉರಿಯೂತ ಎದುರಾದರೆ ಮೂಲಂಗಿಯ ಸೇವನೆ ಇಂದ ಶೀಘ್ರ ಗುಣಪಡಿಸುತ್ತದೆ.
ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ – ಮೂಲಂಗಿಯಲ್ಲಿ ಅಂಥೋಸಾಯನಿನ್ ಎಂಬ ಪೋಷಕಾಂಶಗಳಿವೆ ಅವುಗಳು ಹೃದಯದ ಸ್ನಾಯುಗಳು ಬಲಗೊಳ್ಳುತ್ತವೆ. ನಿತ್ಯವೂ ಮೂಲಂಗಿಯನ್ನು ಸಲಾಡ್ ಮೂಲಕ ಸೇವಿಸಿದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಪ್ಲೇವನಾಯ್ಡ್ಗಳು ಫೋಲಿಕ್ ಆಮ್ಲ ಹಾಗೂ ಪೊಟ್ಯಾಸಿಯಂ ಇವೆ. ಇವುಗಳು ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನೂ ಕಾಯ್ದುಕೊಂಡು ಹೃದಯದ ಒಳ್ಳೆಯ ಆರೋಗ್ಯಕ್ಕೆ ಕಾರಣವಾಗಿದೆ.