ವೀಕ್ಷಕರೆ ಒಬ್ಬ ವ್ಯಕ್ತಿ ತನ್ನ ತೂಕ ಇಳಿಸಿಕೊಳ್ಳಲು ಹಾಗೂ ತಾನು ಆರೋಗ್ಯವಾಗಿರಲು ಸದೃಢವಾಗಿರಲು ಪ್ರತಿ ನಿತ್ಯ ಬಿಸಿ ನೀರನ್ನು ಕುಡಿಯಬೇಕು ಅಂತ ಹೇಳುತ್ತಾರೆ. ಪ್ರತಿದಿನ ಬೆಳಗ್ಗೆದ್ದು ಒಂದು ಲೋಟ ಬಿಸಿನೀರನ್ನು ಕುಡಿದರೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಆದ್ರೆ ದಿನ ಪೂರ್ತಿ ಈ ಬಿಸಿ ನೀರನ್ನು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಅನಾನುಕೂಲತೆಗಳು ಕೂಡ ಹೆಚ್ಚಾಗುತ್ತವೆ. ಇವತ್ತಿನ ಮಹಿತಿಯಲ್ಲಿ ದಿನ ಪೂರ್ತಿ ಈ ಬಿಸಿ ನೀರನ್ನು ಕುಡಿಯುತ್ತಾ ಇದ್ದರೆ ನಮ್ಮ ಆರೋಗ್ಯದ ಮೇಲೆ ಯಾವೆಲ್ಲ ರೀತಿಯ ಅನಾನುಕೂಲತೆಗಳು ಆಗುತ್ತವೆ ಅನ್ನೋದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಮೊದಲಾಗಿ ನಮ್ಮ ಮೂತ್ರಪಿಂಡಗಳು ವಿಶೇಷವಾದಂತಹ ಕೇಬಲ್ ವ್ಯವಸ್ಥೆಯನ್ನು ಹೊಂದಿದೆ. ಇದು ನಮ್ಮ ದೇಹದಿಂದ ಹೆಚ್ಚುವರಿ ನೀರು ಮತ್ತು ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಯಾವಾಗ ನಾವು ಬಿಸಿ ನೀರನ್ನು ಕುಡಿಯುತ್ತೇವೆ. ಆಗ ನಮ್ಮ ಮೂತ್ರಪಿಂಡಗಳ ಮೇಲೆ ಸಾಮಾನ್ಯಕ್ಕಿಂತ ಹೆಚ್ಚಿನ ಒತ್ತಡ ಬೀರುತ್ತದೆ.
ಇದರಿಂದಾಗಿ ಸಾಮಾನ್ಯವಾಗಿ ಮೂತ್ರ ಪಿಂಡದ ಕಾರ್ಯಗಳಿಗೆ ಸಮ. ಉಂಟಾಗಬಹುದು. ಹಾಗಾಗಿ ಅತಿಯಾದ ಬಿಸಿನೀರು ಸೇವನೆ ಒಳ್ಳೆಯದಲ್ಲ. ಇದು ನಿಮಗೇನಾದ್ರೂ ನಿದ್ರಾಹೀನತೆಯ ಸಮಸ್ಯೆ ಇದ್ದರೆ ನೀವು ರಾತ್ರಿ ಹೊತ್ತು ಬಿಸಿ ನೀರನ್ನು ಕುಡಿದು ಮಲಗಬೇಡಿ. ಯಾಕಂದ್ರೆ ಈ ಬಿಸಿ ನೀರು ಸೇವನೆಯಿಂದ ನಿಮಗೆ ನಿದ್ರೆ ಬರದೆ ಇರಬಹುದು. ಜೊತೆಗೆ ಮಲಗುವ ಸಮಯದಲ್ಲಿ ಕುಡಿಯುವುದರಿಂದ ಮೂತ್ರ ವಿಸರ್ಜನೆ ಕೂಡ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ನಿದ್ದೆ ಕೂಡ ಹಾಳಾಗುತ್ತದೆ. ಅಷ್ಟೇ ಅಲ್ಲದೆ ನಮ್ಮ ಲಕ್ಷಣಗಳ ಮೇಲೆ ಒತ್ತಡ ಕೂಡ ಹೆಚ್ಚಾಗುತ್ತದೆ. ಆದ್ದರಿಂದ ನಿದ್ದೆ ಮಾಡುವ ಸಮಯದಲ್ಲಿ ನೀವು ಬಿಸಿ ನೀರನ್ನು ಕುಡಿಯಬೇಡಿ. ಅದರಲ್ಲೂ ನಿಮಗೇನಾದರೂ ನಿದ್ರಾಹೀನತೆ ಸಮಸ್ಯೆ ಇದ್ರೆ ರಾತ್ರಿ ಈ ಬಿಸಿ ನೀರನ್ನು ಕುಡಿದು ಮಲಗುವುದು ನಿದ್ರೆ ಬಿಟ್ಟು ಬಿಡುವುದು ಒಳ್ಳೆಯದು. ಇನ್ನು ಈ ಬಿಸಿ ನೀರನ್ನು ನಾವು ಪ್ರತಿದಿನ ಕುಡಿಯುತ್ತಾ ಇದ್ದರೆ ಅಂದ್ರೆ ಪ್ರತಿ ಸಲ ನಾವು ಈ ಬಿಸಿ ನೀರನ್ನು ಕುಡಿಯುವುದರಿಂದ ನಮ್ಮ ದೇಹದ ಆಂತರಿಕ ಅಂಗಗಳ ಮೇಲೆ ಪರಿಣಾಮ ಬೀರಬಹುದು ಅಂದ್ರೆ ಬಿಸಿ ನೀರನ್ನು ಕುಡಿಯುವುದರಿಂದ ನಮ್ಮ ದೇಹದ ಒಳಗೆ ಸುಡುವ ಅಪಾಯ ಕೂಡ ಇರುತ್ತದೆ.
ಆದ್ದರಿಂದ ಬಿಸಿಯಾಗಿರುವಂತಹ ನೀರನ್ನು ಆದಷ್ಟು ಕುಡಿಯಬೇಡಿ ಮತ್ತು ನಮ್ಮ ದೇಹದ ಆಂತರಿಕ ಅಂಗಗಳ ಮೇಲೆ ಗುಳ್ಳೆ ಆಗುವ ಸಾಧ್ಯತೆ ಕೂಡ ಇರುತ್ತದೆ. ಹಾಗಾಗಿ ಅತಿಯಾದ ಬಿಸಿನೀರು ಸೇವನೆ ಒಳ್ಳೆಯದಲ್ಲ. ಇನ್ನು ಪ್ರತಿ ಬಾರಿ ನೀವು ನೀರನ್ನು ಸೇವನೆ ಮಾಡುವಾಗ ಈ ಬಿಸಿ ನೀರನ್ನು ಸೇವನೆ ಮಾಡುವುದರಿಂದ ನಮ್ಮ ರಕ್ತದೊತ್ತಡ ಹೆಚ್ಚಾಗಬಹುದು. ಹಾಗಾಗಿ ಅತಿಯಾದ ಬಿಸಿ ನೀರನ್ನು ಮತ್ತು ನಿರಂತರವಾಗಿ ಬಿಸಿ ನೀರನ್ನು ಸೇವನೆ ಮಾಡಬೇಡಿ. ಅದರಲ್ಲೂ ನಿಮಗೆ ಬಾಯಾರಿಕೆ ಆದಾಗ ಈ ಬಿಸಿ ನೀರನ್ನು ಕುಡಿಯುವುದರಿಂದ ಮೆದುಳಿನ ರಕ್ತನಾಳಗಳ ಮೇಲೆ ಕೂಡ ಹಾನಿ ಉಂಟಾಗಬಹುದು. ಹಾಗಾಗಿ ಅತಿಯಾದ ಬಿಸಿ ನೀರನ್ನು ಸೇವನೆ ಮಾಡುವುದು ಒಳ್ಳೆಯದಲ್ಲ. ಇನ್ನು ಯಾವ ರೀತಿಯಾದಂತಹ ಬಿಸಿ ನೀರನ್ನು ನಾವು ಸೇವನೆ ಮಾಡಬೇಕು ಅಂತ ನೋಡೋದಾದ್ರೆ ನಮ್ಮ ಹಳ್ಳಿ ಕಡೆಯಲ್ಲಿ ಆಗಿರಬಹುದು ಅಥವಾ ಸಿಟಿಗಳಲ್ಲಿ ಆಗಿರಬಹುದು.
ಸಾಕಷ್ಟು ಕಡೆ ನೀರು ಶುದ್ಧವಾಗಿ ಇರುವುದಿಲ್ಲ. ಹಾಗಾಗಿಯೇ ಸಾಕಷ್ಟು ಜನರು ಈ ಬಿಸಿ ನೀರನ್ನು ಸೇವನೆ ಮಾಡುತ್ತಾರೆ.ಆದರೆ ಈ ಬಿಸಿ ನೀರನ್ನು ಯಾವ ರೀತಿಯಾಗಿ ಸೇವನೆ ಮಾಡಬೇಕು ಅಂತ ನೋಡೋದಾದ್ರೆ ನೀರನ್ನು ಕಾಯಿಸಿ ನಂತರ ಆ ನೀರು ಸಂಪೂರ್ಣವಾಗಿ ಆರಿದ ನಂತರ ಅಥವಾ ಸ್ವಲ್ಪ ಉಗುರು ಬೆಚ್ಚಗೆ ಇದ್ದರೂ ಕೂಡ ನೀವು ಕುಡಿಯಬಹುದು. ಆದರೆ ಅತಿಯಾಗಿ ಇರುವಂತಹ ಬಿಸಿ ನೀರನ್ನು ನೀವು ಎಂದಿಗೂ ಕೂಡ ಸೇವನೆ ಮಾಡ ಬೇಡಿ. ಯಾವಾಗಲಾದರೂ ನಿಮಗೆ ನೆಗಡಿ ಅಥವಾ ಕೆಮ್ಮು ಇದು ಕಫ ಕಡಿಮೆ ಅಂತಹ ಸಮಯದಲ್ಲಿ ನೀವು ಇಂತಹ ಬಿಸಿ ನೀರನ್ನು ಕುಡಿಯಬಹುದು. ಆದರೆ ಪ್ರತಿಬಾರಿಯೂ ಕೂಡ ಇಂತಹ ಬಿಸಿ ಬಿಸಿಯಾಗಿರುವಂತಹ ನೀರನ್ನು ಕುಡಿಯೋದ್ರಿಂದ ನಿಮ್ಮ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮಗಳಾಗುತ್ತವೆ.