ನಮಸ್ತೆ ಪ್ರಿಯ ಓದುಗರೇ, ನಮ್ಮ ಭಾರತೀಯ ಅಡುಗೆಯಲ್ಲಿ ತುಪ್ಪಕ್ಕೆ ತುಂಬಾನೇ ಮಹತ್ವವಾದ ಸ್ಥಾನವಿದೆ. ತುಪ್ಪವನ್ನು ಕೇವಲ ರುಚಿ ಹೆಚ್ಚಿಸಲು ಅಷ್ಟೇ ಅಲ್ಲದೆ ನಮ್ಮ ಅರೋಗ್ಯದ ಸುಧಾರಣೆಗೂ ಬಳಸಬಹುದು. ನಮ್ಮ ಹಿರಿಯರು ಮಾಡಿರುವ ಕೆಲವು ಆಹಾರದ ಪದ್ಧತಿಗೆ ನಾವು ತಲೆ ಬಾಗಲೇಬೇಕೂ. ಅವರು ಏನೇ ಮಾಡಿದರೂ ಕೂಡ ನಮ್ಮ ಆರೋಗ್ಯಕ್ಕೆ ಒಳ್ಳೆಯ ಕೊಡುಗೆ ಯನ್ನ ಕೊಡುತ್ತದೆ ಎನ್ನುವುದರಲ್ಲಿ ಎರೆಡು ಮಾತಿಲ್ಲ. ಈ ಬಿಸಿ ಅನ್ನಕ್ಕೆ ತುಪ್ಪವನ್ನು ಹಾಕಿಕೊಂಡು ಊಟಾ ಮಾಡಿದರೆ ಸ್ವರ್ಗಕ್ಕೆ ಮೂರೇ ಗೇಣು ಇದ್ದಂತೆ. ಈ ಊಟಾ ಮಾಡಲು ಯಾರಿಗೆ ಇಷ್ಟ ಇಲ್ಲ ಹೇಳಿ, ಯಾರಿಗೆ ತಿಂದಿರುವ ಆಹಾರ ಜೀರ್ಣ ಆಗೋದಿಲ್ಲವೂ ಅಂಥವರು ಬಿಸಿ ಬಿಸಿ ಅನ್ನಕ್ಕೆ ತುಪ್ಪವನ್ನು ಹಾಕಿಕೊಂಡು ತಿಂದರೆ ತುಂಬಾ ಒಳ್ಳೆಯದು. ತುಪ್ಪ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹಾಲಿನ ಎಲ್ಲಾ ಉತ್ಪನ್ನಗಳಲ್ಲಿ ಅಂದರೆ ಹಾಲು, ಮೊಸರು, ಬೆಣ್ಣೆ ಹಾಗೂ ಕೊನೆಯಲ್ಲಿ ತುಪ್ಪ. ಹಾಲಿನ ಉತ್ಪನ್ನಗಳಲ್ಲಿ ಕೊನೆಯದಾಗಿ ತುಪ್ಪವನ್ನು ಪರಿಗಣಿಸಿದರೂ ಮೇಲಿನ ಎಲ್ಲಾ ಉತ್ಪನ್ನಗಳಿ ಗಿಂತ ತುಪ್ಪ ಅತೀ ರುಚಿಕರವೂ ಹಾಗೂ ಆರೋಗ್ಯಕರವೂ ಹೌದು.
ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದರೆ ನಮಗೆ ಮಲಬದ್ದತೆ, ಪೈಲ್ಸ್ ನಂತಹ ರೋಗಗಳು ಬರುತ್ತವೆ. ಅಂಥವರು ಆಹಾರ ಸೇವನೆ ಮಾಡುವಾಗ ಆಹಾರದಲ್ಲಿ ಸ್ವಲ್ಪ ತುಪ್ಪವನ್ನು ಹಾಕಿಕೊಂಡು ತಿನ್ನುವುದರಂದ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ ಮತ್ತು ಮಲಬದ್ದತೆ ನಿರ್ನಾಮವಾಗುತ್ತದೆ. ಅಷ್ಟೇ ಅಲ್ಲದೆ ಈ ಬಿಸಿ ಅನ್ನಕ್ಕೆ ತುಪ್ಪವನ್ನು ಹಾಕಿಕೊಂಡು ಊಟಾ ಮಾಡಿದರೆ ನಮ್ಮಲ್ಲಿರುವ ಅಗ್ನಿ ಶಮನಗೊಳ್ಳುತ್ತದೆ. ಇದರಿಂದ ನಮಗೆ ಎದೆಯುರಿ ಮತ್ತು ಹೊಟ್ಟೆ ಉರಿ ಕಂಡು ಬರುವುದಿಲ್ಲ. ಬೆಳೆಯುವ ಮಕ್ಕಳಿಗೆ ನಿಯಮಿತವಾಗಿ ತುಪ್ಪ ಸೇವನೆ ಮಾಡಿಸುವುದು ಬಹಳ ಒಳ್ಳೆಯದು. ಮಕ್ಕಳ ಸ್ಮರಣ ಶಕ್ತಿ ಹಾಗೂ ಬುದ್ಧಿ ಶಕ್ತಿ ಹೆಚ್ಚಿಸಲು ತುಪ್ಪ ತುಂಬಾನೇ ಸಹಕಾರಿ ಎಂದು ಬಹಳ ಹಿಂದಿನಿಂದಲೂ ಭಾರತದಲ್ಲಿ ನಂಬಿಕೊಂಡು ಬರಲಾಗಿದೆ. ಇದೇ ಕಾರಣಕ್ಕಾಗಿ ಮಕ್ಕಳಿಗೆ ತುಪ್ಪದಲ್ಲಿ ಮಾಡಿರುವ ಸಿಹಿ ತಿಂಡಿ ತಿನಿಸುಗಳನ್ನೂ ತಿನ್ನಿಸುತ್ತಾರೆ. ಈ ತುಪ್ಪದಲ್ಲಿ ವಿಟಮಿನ್ ಎ, ಡಿ, ಇ ಮತ್ತು ಕೆ ವಿಟಮಿನ್ ಗಳ ಅಂಶ ಇದೆ.
ಇವು ಶರೀರಕ್ಕೆ ಅಗತ್ಯ ಇರುವ ಪೋಷಕಾಂಶಗಳನ್ನು ಒದಗಿಸುವುದರಿಂದ ನಮ್ಮ ದೇಹದಲ್ಲಿ ಇರುವ ಎಲ್ಲಾ ಇಂದ್ರಿಯಗಳು ಚೆನ್ನಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತುಪ್ಪ ತಿಂದ್ರೆ ದಪ್ಪ ಆಗ್ತೀವಿ ಅನ್ನೋ ಪರಿಕಲ್ಪವನೆ ಇತ್ತೀಚಿನ ಯುವ ಜನತೆಗೆ ಇದ್ದು, ಅವರು ತುಪ್ಪ ಎಂದರೆ ಒಂದು ಮೈಲಿ ದೂರ ಒಡ್ತಾರೆ. ಆದ್ರೆ ಸಂಶೋಧನೆಯ ಪ್ರಕಾರ ದಿನಕ್ಕೆ ಒಬ್ಬ ಮನುಷ್ಯ ಎರೆಡು ಚಮಚ ತುಪ್ಪ ತಿನ್ನುವುದು ಆರೋಗ್ಯಕ್ಕೆ ಉತ್ತಮ ಅದು ಒಳ್ಳೆಯ ಕೊಲೆಸ್ಟ್ರಾಲ್. ಆದರೆ ಎರೆಡು ಚಮಚ ಜಾಸ್ತಿ ಆಗುತ್ತೆ ಎನ್ನುವವರು ಅಥವಾ ಡಯೆಟ್ ಅಲ್ಲಿರುವವರು ಕಡಿಮೆ ಅಂದರೂ ಒಂದು ಚಮಚ ತುಪ್ಪವನ್ನು ದಿನದ ಯಾವುದೇ ಒಂದು ಊಟಾದಲ್ಲಿ ಹಾಕಿಕೊಂಡು ತಿಂದರೆ ನಮ್ಮ ಉದರ ಪೋಷಣೆ ಹಾಗೂ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಎಂದು ಅಭಪ್ರಾಯ ಪಟ್ಟಿದ್ದಾರೆ. ಇನ್ನೂ ಯಾರು ತುಪ್ಪವನ್ನು ಸೇವನೆ ಮಾಡಬಾರದು ಎಂದು ನೋಡುವುದಾದರೆ ಅಧಿಕ ತೂಕವನ್ನು ಹೊಂದಿದವರು, ಹೃದಯದ ತೊಂದರೆ, ಒಬೆಸಿಟಿ ಸಮಸ್ಯೆ ಇರುವವರು ತುಪ್ಪವನ್ನು ಸೇವನೆ ಮಾಡಬಾರದು. ತುಪ್ಪವನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಆದ್ರೆ ಅತಿಯಾದರೆ ಅಮೃತವೂ ವಿಷವೇ ಎನ್ನುವಂತೆ ತುಪ್ಪವನ್ನು ಸೇವಿಸುವಾಗಲೂ ಮಿತಿಯಾಗಿ ಸೇವಿಸಬೇಕು. ಹಾಗಿದ್ರೆ ಮಾತ್ರ ಆರೋಗ್ಯಕ್ಕೆ ಒಳ್ಳೆಯದು. ಹಾಗಾದ್ರೆ ತುಪ್ಪವನ್ನು ಮೀತಿಯಾಗಿ ಸೇವನೆ ಮಾಡಿ ಆರೋಗ್ಯವಂತ ರಾಗಿರಿ. ಈ ಲೇಖನದಲ್ಲಿ ತಿಳಿಸಿರುವ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.