ನಮಸ್ತೆ ಪ್ರಿಯ ಓದುಗರೇ, ಅಧಿಕ ರಕ್ತದೊತ್ತಡ ವಯಸ್ಸಿಗೇ ಸಂಬಂಧ ಇಲ್ಲದ ಹಾಗೆ ಅನೇಕರಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ ಒಂದು ಕಾಯಿಲೆ ಅಂತಾನೆ ಹೇಳಬಹುದು. ರಕ್ತದೊತ್ತಡಕ್ಕೆ ಮುಕ್ಯ ಕಾರಣ ಉಪ್ಪು. ಉಪ್ಪಿನಿಂದ ರಕ್ತದೊತ್ತಡ ಹೆಚ್ಚಾಗುವುದರ ಜೊತೆಗೆ ರಕ್ತನಾಳಗಳನ್ನು ಗತ್ತಿಮಾಡುವ ಗುಣ ಹೊಂದಿದೆ ಇದರಿಂದ ರಕ್ತವನ್ನು ಪಂಪ್ ಮಾಡುವುದಕ್ಕೆ ಹೃದಯ ಹೆಚ್ಚುಬಾರಿ ಒಡೆದುಕೊಳ್ಳಬೇಕಾಗುತ್ತದೆ ಆದ್ದರಿಂದ ಹೃದಯಘಾತ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಅಧಿಕ ರಕ್ತದೊತ್ತಡದ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುತ್ತದೆ. ಕೆಲಸದ ಒತ್ತಡ, ಮಾನಸಿಕ ಒತ್ತಡ, ಈ ರಕ್ತದೊತ್ತಡ ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ. ರಕ್ತದೊತ್ತಡ ಹೆಚ್ಚಾದರೆ ಸ್ಟ್ರೋಕ್, ಹೃದಯಾಘಾತ, ಹೃದಯ ಸ್ತಂಭನ, ಮುಂತಾದ ಸಮಸ್ಯೆ ಕಂಡು ಬರುತ್ತದೆ. ಉಪ್ಪು ವಿಷಯದಲ್ಲಿ ಜಾಗ್ರತೆ ತೆಗೆದುಕೊಂಡರೆ ರಕ್ತನಾಳಗಳು ಸಹಜವಾಗಿ ಸಾಗುತ್ತವೆ ಜೀವನದಲ್ಲಿ ಒಂದು ಸಾರಿ ಬಿ ಪಿ ಕಾಣಿಸಿಕೊಂಡರೆ ಮತ್ತೆ ಹೋಗುವುದಿಲ್ಲ ಎಂದುಕೊಳ್ಳುತ್ತಾರೆ ಆದರೆ ಉಪ್ಪು ಕಡಿಮೆ ಮಾಡಿ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಕಡಿಮೆ ಆಗುವ ಅವಕಾಶ ತುಂಬಾ ಇರುತ್ತದೆ.
ನಮ್ಮ ದೇಹಕ್ಕೆ ದಿನಕ್ಕೆ 250 ಮಿ ಗ್ರಾಂ ನಸ್ಟು ಸೋಡಿಯಂ ಸಾಕಾಗುತ್ತದೆ ಆದರೆ ನಾವು ಐದಾರು ಸಾವಿರ ಮಿ ಗ್ರಾಂ ನಿಂದ ಹತ್ತು ಸಾವಿರ ಮಿ ಗ್ರಾಂ ವರೆಗೆ ತೆಗೆದುಕೊಳ್ಳುತ್ತೇವೆ. ಅದರಿಂದ ಸಾಧ್ಯವಾದಷ್ಟು ಕಡಿಮೆ ಮಾಡುವುದಕ್ಕೆ ಮದ್ಯಾಹ್ನ ಸೊಪ್ಪಿನ ಪದಾರ್ಥಗಳನ್ನು ತೆಗೆದುಕೊಳ್ಳಬೇಕು ಸೊಪ್ಪಿನಲ್ಲಿ ಉಪ್ಪಿನಂಶ ಕಡಿಮೆ ಇರುತ್ತದೆ. ಮೊಸರನ್ನ, ಮಜ್ಜಿಗೆ ಅನ್ನದಲ್ಲಿ ಉಪ್ಪು ಇಲ್ಲದೆ ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಿ. ಉಪ್ಪಿನ ಕಾಯಿಯಲ್ಲಿ ಕೊಬ್ಬಿನಂಶ ಹೆಚ್ಚಾಗಿ ಇರುವುದರಿಂದ ಅದನ್ನು ತೆಗೆದುಕೊಳ್ಳಬಾರದು ಪೈಬರ್ ಹೆಚ್ಚಾಗಿ ಇರುವ ಆಹಾರ ತೆಗೆದುಕೊಳ್ಳಬೇಕು ಆಲ್ಕೊಹಾಲ್, ಸಿಗರೇಟ್ ನಿಂದ ರಕ್ತನಾಳಗಳು ಮುಚ್ಚಿಹೋಗುತ್ತವೆ ಇದರಿಂದ ಸಾಧ್ಯವಾದಷ್ಟು ಬಿಡಬೇಕು ಇಲ್ಲಾ ಮಿತವಾಗಿ ಬಳಸಬೇಕು ಉಪ್ಪನ್ನು ಕಡಿಮೆ ಮಾಡುವ ಹಣ್ಣನ್ನು ದಿನದಲ್ಲಿ ಹೆಚ್ಚಾಗಿ ಬಳಸಬೇಕು ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯಬೇಕು. ವ್ಯಾಯಾಮ, ಓಡಾಡುವುದು, ಮಾಡುತ್ತಿದ್ದರೆ ಹೃದಯಘಾತ ಸಮಸ್ಯೆ ಕಡಿಮೆಯಾಗುತ್ತದೆ.
ಏಲಕ್ಕಿ ಮತ್ತು ಶುಂಠಿ ಹಾಕಿದ ಚಾ ಕುಡಿದರೆ ಅದು ಅಧಿಕ ರಕ್ತದೊತ್ತಡ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಧ್ಯಯನದ ಪ್ರಕಾರ ಕೆಲವು ವಾರಗಳ ಕಾಲ ಏಲಕ್ಕಿ ಪುಡಿಯನ್ನು ಸೇವನೆ ಮಾಡಿದರೆ ಆಗ ರಕ್ತದೊತ್ತಡ ಕಡಿಮೆ ಆಗುತ್ತದೆ. ಜೊತೆಗೆ ಶುಂಠಿಯು ಹೃದಯಕ್ಕೆ ಹಲವಾರು ರೀತಿಯ ಲಾಭಗಳನ್ನು ನೀಡುವುದು ಮತ್ತು ಗಿಡ ಮುಲಿಕೆಯು ರಕ್ತ ಸಂಚಾರವನ್ನು ಸುಧಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೆಯೇ ಬೆಳ್ಳುಳ್ಳಿಯು ಅಧಿಕ ರಕ್ತದೊತ್ತಡ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ರಕ್ತವನ್ನು ತೆಳುವಾಗಿಸುವ ಗುಣ ಹೊಂದಿದೆ ಬೆಳ್ಳುಳ್ಳಿಯು ಸಂಪೂರ್ಣ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಬೆಳ್ಳುಳ್ಳಿ ಘಾಟು ಇರುವುದರಿಂದ ಅದನ್ನು ಹಾಗೆ ಸೇವಿಸಲು ಸಾಧ್ಯವಾಗದೆ ಇದ್ದರೆ ಬೆಳ್ಳುಳ್ಳಿ ಸಪ್ಲಿಮೆಂಟ್ ತೆಗೆದುಕೊಳ್ಳಿ. ಬೆಳ್ಳುಳ್ಳಿಯನ್ನು ಸಣ್ಣಗೆ ಕತ್ತರಿಸಿ ಅದನ್ನು ಯವುದಾದರು ಹಣ್ಣಿನ ಮೇಲಿಟ್ಟು ಬಳಿಕ ಅದರ ಮೇಲೆ ಜೇನುತುಪ್ಪ ಹಾಕಿಕೊಂಡು ತಿನ್ನಬೇಕು. ಈಗೆ ಮಾಡುವುದರಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ. ಅಧಿಕ ರಕ್ತದೊತ್ತಡಕ್ಕೆ ಬೆಳ್ಳುಳ್ಳಿ ತುಂಬಾ ಒಳ್ಳೆಯ ಮನೆಮದ್ದು. ಶುಭದಿನ.