ಈ ಬೀಜಗಳನ್ನು ಹೆಚ್ಚಾಗಿ ಉತ್ತರ ಕರ್ನಾಟಕದ ಜನರು ಬಳಸುತ್ತಾರೆ. ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಅಗಸೆ ಬೀಜಗಳನ್ನು ಪ್ರತಿನಿತ್ಯವೂ ಆಹಾರವಾಗಿ ತೆಗೆದುಕೊಳ್ಳುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಅಗಸೆ ಬೀಜಗಳು ಎಂದರೆ ಸಾಕಷ್ಟು ಜನರಿಗೆ ಗೊತ್ತೇ ಇಲ್ಲ. ಅಗಸೆ ಬೀಜಗಳಲ್ಲಿ ಹೆಚ್ಚಾಗಿ ಪೋಷಕಾಂಶಗಳು ಇರುವುದರಿಂದ ಇದರಲ್ಲಿ ಸಿಗುವ ಆರೋಗ್ಯದ ಪ್ರಯೋಜನಗಳು ಯಾವ ಆಹಾರಗಳಲ್ಲಿ ಕೂಡ ಸಿಗುವುದಿಲ್ಲ.
ಅಗಸೆ ಬೀಜಗಳಿಗೆ ಎಲ್ಲಾ ಆಹಾರಗಳಿಗೆ ಹೋಲಿಸಿದರೆ ಇದು ಮೊದಲನೆಯ ಸ್ಥಾನದಲ್ಲಿದೆ ಎಂದು ಹೇಳಬಹುದು. ಪ್ರತಿನಿತ್ಯವೂ ಅಗಸೆ ಬೀಜಗಳನ್ನು ಸೇವಿಸಿದರೆ ತುಂಬಾನೇ ಆರೋಗ್ಯಕರ ಪ್ರಯೋಜನಗಳಿವೆ. 15 ಗ್ರ್ಯಾಂ ಅಗಸೆ ಬೀಜಗಳಲ್ಲಿ 20 ಕೆ.ಜಿ ಶೇಂಗಾ, 10 ಕೆ.ಜಿ ಬಾದಾಮಿ ಮತ್ತು 1 ಕೆ.ಜಿ ಮೀನಿನಲ್ಲಿ ಸಿಗುವ ಪೋಷಕಾಂಶಗಳು ದೊರಕುತ್ತವೆ. ಅಗಸೆ ಬೀಜಗಳಲ್ಲಿ ನಾರಿನಂಶ ತುಂಬಾ ಸಮೃದ್ಧವಾಗಿ ಇರುವುದರಿಂದ ಅಧಿಕ ದೇಹದ ತೂಕವನ್ನು ಸುಲಭವಾಗಿ ಇಳಿಸುತ್ತದೆ. ಹಾಗಾಗಿ ಯಾರಿಗೆ ಅಧಿಕ ದೇಹದ ತೂಕ ಇರುತ್ತದೆ ಅಂತಹವರು ತಮ್ಮ ಡಯಟ್ ನಲ್ಲಿ ಅಗಸೆ ಬೀಜಗಳನ್ನು ಸೇರಿಸಬೇಕು.
ಇದರಲ್ಲಿ ಕಬ್ಬಿಣಾಂಶ ಮತ್ತು ಪ್ರೋಟಿನ್ ಅಂಶಗಳು ತುಂಬ ಸಮೃದ್ಧವಾಗಿ ಇರುವ ಕಾರಣ ದೇಹದಲ್ಲಿರುವ ಕೆಟ್ಟ ಕೊಬ್ಬನ್ನು ಕರಗಿಸುತ್ತದೆ. ಪ್ರತಿನಿತ್ಯವೂ ಅಗಸೆ ಬೀಜಗಳನ್ನು ಸೇವಿಸಿದರೆ ಹೃದಯಕ್ಕೆ ಸಂಬಂಧಿಸಿದ ತೊಂದರೆಗಳನ್ನು ತಡೆಯುತ್ತದೆ ಮತ್ತು ನಿವಾರಿಸುತ್ತದೆ. ಇದರಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ಸ್ ಇರುವುದರಿಂದ ಕಣ್ಣಿನ ಆರೋಗ್ಯವನ್ನು ತುಂಬ ಚೆನ್ನಾಗಿ ಇಡುತ್ತದೆ. ಅಗಸೆ ಬೀಜಗಳನ್ನು ಸೇವಿಸಿದರೆ ಸ್ತನ ಮತ್ತು ರಕ್ತದ ಕ್ಯಾನ್ಸರ್ ಅನ್ನು ತಡೆಯುವ ಶಕ್ತಿ ಇದೆ.
ಅಗಸೆ ಬೀಜಗಳನ್ನು ಚಟ್ನಿ ರೀತಿಯಲ್ಲಿ ಮಾಡಿಕೊಂಡು ತಿನ್ನಬಹುದು ಅಥವಾ ಪುಡಿ ಮಾಡಿಕೊಂಡು ಸಹ ತಿನ್ನಬಹುದು. ಅಗಸೆ ಬೀಜಗಳನ್ನು ಹುರಿದು ಪುಡಿ ಮಾಡಿ ಅದನ್ನು ಮಜ್ಜಿಗೆಗೆ ಹಾಕಿ ಕುಡಿಯಬಹುದು ಅಥವಾ ನೀರಿಗೆ ಹಾಕಿಕೊಂಡು ಸಹ ಕುಡಿಯಬಹುದು. ಆದರೆ ಅಗಸೆ ಬೀಜಗಳನ್ನು ಪುಡಿ ಮಾಡಿದ 15 ಅಥವಾ 20 ನಿಮಿಷಗಳ ಒಳಗೆ ಇದನ್ನು ಸೇವಿಸಬೇಕು ಇಲ್ಲದಿದ್ದರೆ ಇದರ ಸತ್ವವು ಗಾಳಿಗೆ ಹೋಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.