ಈಗಿನ ಬಿಸಿಲಿನ ವಾತಾವರಣ ಮತ್ತು ಆಹಾರ ಪದಾರ್ಥಗಳಿಂದ ದೇಹದಲ್ಲಿ ಹೀಟ್ ಜಾಸ್ತಿ ಆಗಿ ಪೈಲ್ಸ್ ಅಂದರೆ ಮೂಲವ್ಯಾಧಿ ಹೆಚ್ಚಾಗುತ್ತದೆ. ಅದು ತುಂಬಾ ಹಿಂಸೆ ಆಗುತ್ತದೆ. ಈ ಸಮಸ್ಯೆಗೆ ವೈದ್ಯರ ಬಳಿ ಚಿಕಿತ್ಸೆ ಪಡೆದರು ಕೂಡ ಕೆಲವೊಮ್ಮೆ ಗುಣವಾಗುವುದಿಲ್ಲ. ಆದ್ದರಿಂದ ನಿಮ್ಮ ಮನೆಯಲ್ಲೇ ಈ ರೀತಿಯಾದ ಮದ್ದುಗಳನ್ನು ಬಳಸಿ ಈ ಸಮಸ್ಯೆಗೆ ಶಾಶ್ವತವಾಗಿ ಪರಿಹಾರವನ್ನು ಕಂಡುಕೊಳ್ಳಿ.
12 ಗ್ರಾಂ ಬೇವಿನ ತೊಗಟೆಯನ್ನು ಗಂಧ ತೆಗೆದು ಮೇಕೆ ಹಾಲಿನಲ್ಲಿ ಕದಡಿ ನಿತ್ಯ ಬೆಳಗ್ಗೆ ಕುಡಿಯುವುದರಿಂದ ಮೂಲವ್ಯಾಧಿಯ ಪರಿಹಾರವಾಗುತ್ತದೆ ಒಂದರಿಂದ ಎರಡು ವಾರ ಮಾಡತಕ್ಕದ್ದು.
4 ಚಮಚ ಈರುಳ್ಳಿ ರಸಕ್ಕೆ 4 ಚಮಚ ಸಕ್ಕರೆ ಸೇರಿಸಿ ಪ್ರತಿನಿತ್ಯ ಬೆಳಗ್ಗೆ ಸೇವಿಸುವುದರಿಂದ ಮೂಲವ್ಯಾಧಿ ಪರಿಹಾರವಾಗುತ್ತದೆ ಹೀಗೆ ಕನಿಷ್ಠ ಒಂದರಿಂದ ಎರಡು ವಾರ ಅಗತ್ಯವಾದಲ್ಲಿ ಒಂದೆರಡು ವಾರ ಮುಂದುವರಿಸಬಹುದು.
ಪ್ರತಿದಿನ ಊಟದ ನಂತರ ಅರ್ಧ ಗಂಟೆ ಬಿಟ್ಟು 15 ಗ್ರಾಂ ಅಳಲೇಕಾಯಿ ಚೂರ್ಣದ ಜೊತೆ ನಾಲ್ಕೈದು ಕಿಟಕಿ ಸೈಂದಲವಣದ ಚೂರ್ಣ ಸೇರಿಸಿ ಹುಳಿ ಮಜ್ಜಿಗೆಯಲ್ಲಿ ಕದಡಿ ಕುಡಿಯುವುದರಿಂದ ಮೂಲವ್ಯಾಧಿ ಪರಿಹಾರ.
24 ಗ್ರಾಂ ಹೊನಗೊನೆ ಸೊಪ್ಪು ರಸಕ್ಕೆ ಅಷ್ಟೇ ತೂಕದ ಮೂಲಂಗಿ ಸೊಪ್ಪಿನ ರಸ ಸೇರಿಸಿ ಒಂದು ಚಿಟಿಕೆ ಸೈಂಧವ ಲವಣ ಹಾಕಿ ಕಲಕಿ ನಿತ್ಯ ಎರಡು ಹೊತ್ತು ಎರಡರಿಂದ ಮೂರು ವಾರಗಳ ಕಾಲ ಕುಡಿಯುವುದರಿಂದ ಮೂಲವ್ಯಾಧಿ ಪರಿಹಾರವಾಗುತ್ತದೆ.
ಈರುಳ್ಳಿ ಮೆಣಸಿನಕಾಯಿ ತುಳಸಿ ಎಲೆ ಈ ಮೂರನ್ನು ತೂಕದಲ್ಲಿ ಸಮಭಾಗ ಸೇರಿಸಿ ಕಲ ಬತ್ತಿ ನಲ್ಲಿ ಹಾಕಿ ನುಣ್ಣಗೆ ಅರೆದು ನೆಲ್ಲಿಕಾಯಿ ಗಾತ್ರದ ಅಂದರೆ ಸುಮಾರು ಒಂದು ಗ್ರಾಂ ಮಾತ್ರ ಮಾಡಿ ನಿತ್ಯ ಬೆಳಿಗ್ಗೆ ಒಂದು ರಾತ್ರಿ ಒಂದು ಮಾತ್ರೆಯನ್ನು ತಿಂದು ಬಿಸಿ ನೀರು ಕುಡಿಯುವುದರಿಂದ ರಕ್ತ ಮೂಲವ್ಯಾಧಿ ನಿವಾರಣೆಯಾಗುತ್ತದೆ.