ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಬೆಟ್ಟನೆಲ್ಲಿ, ಆಮ್ಲ ಹಾಗೂ ಆಂಗ್ಲ ಭಾಷೆಯಲ್ಲಿ ಎಮ್ಲಲಿಕ ಓಪಿಶಿಯಸ್ ಎಂದು ಕರೆಯಲಾಗುತ್ತದೆ. ಬಹಳ ಹಿಂದಿನಿಂದಲೂ ಆಯುರ್ವೇದ ಪದ್ಧತಿಯಲ್ಲಿ ಈ ಬೆಟ್ಟದ ನೆಲ್ಲಿಕಾಯಿ ಬಳಕೆ ನಡೆಯುತ್ತ ಬಂದಿದೆ. ಅಷ್ಟೊಂದು ಇದು ಪ್ರಸಿದ್ದಿಯನ್ನು ಪಡೆದಿದೆ. ಹಾಗೂ ಆಯುರ್ವೇದದಲ್ಲಿ ಸಸ್ಯವರ್ಗಕ್ಕೆ ಸೇರಿರುವ ಪ್ರಸಿದ್ಧ ರಾಸಾಯನಿಕ ಔಷಧ ಗುಂಪಿಗೆ ಸೇರಿದೆ. ರಸಾಯನ ಅನ್ನುವುದು ಆಯುರ್ವೇದದ ಸಸ್ಯ ಅಂಶಗಳ ಮಿಶ್ರಣ ಆಗಿದೆ. ಇದು ಆಯಸ್ಸು ವರ್ಧಕವಾಗಿ ಶಕ್ತಿ ವರ್ಧಕವಾಗಿ ಕೆಲಸವನ್ನು ಮಾಡುತ್ತದೆ. ಅಷ್ಟೇ ಅಲ್ಲದೇ ಈ ಬೆಟ್ಟದ ನೆಲ್ಲಿಕಾಯಿ ನಾಲಿಗೆಗೆ ಬಹಳ ರುಚಿಯನ್ನು ತಂದು ಕೊಡುತ್ತದೆ ಹಾಗೂ ಇದು ನಮ್ಮ ಆರೋಗ್ಯಕ್ಕೆ ಸೂಪರ್ ಫುಡ್ ಅಂತ ಹೇಳಬಹುದು. ನಿಜಕ್ಕೂ ಇದನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಬಹಳಷ್ಟು ಲಾಭಗಳು ಸಿಗುತ್ತವೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಬೆಟ್ಟದ ನೆಲ್ಲಿಕಾಯಿ ಆರೋಗ್ಯಕರ ಲಾಭಗಳನ್ನು ಪರಿಚಯ ಮಾಡಿ ಕೊಡುತ್ತೇವೆ. ಮೊದಲನೆಯದು ಬೆಟ್ಟದ ನೆಲ್ಲಿಕಾಯಿ ನಿಯಮಿತವಾಗಿ ತಿನ್ನುವುದರಿಂದ ಕಣ್ಣಿನ ಆರೋಗ್ಯವೂ ವೃದ್ಧಿ ಆಗುತ್ತದೆ.
ಕಣ್ಣಿಗೆ ಬೇಕಾದ ವಿಟಮಿನ್ ಸಿ ಈ ಬೆಟ್ಟದ ನೆಲ್ಲಿಕಾಯಿ ಯಲ್ಲಿ ಅಡಗಿದೆ. ಹೌದು ಈ ವಿಟಮಿನ್ ಸಿ ಇದರಲ್ಲಿ ಹೇರಳವಾಗಿ ಇರುವ ಕಾರಣ ಇದು ಕಣ್ಣಿನ ಸುತ್ತಲೂ ಇರುವ ಎಲ್ಲ ಸ್ನಾಯುಗಳಿಗೆ ಬಹಳ ಉತ್ತಮ ಅಂತ ಹೇಳಬಹುದು. ಇನ್ನೂ ಕೂದಲಿಗೆ ಅಂತೂ ಬೆಟ್ಟದ ನೆಲ್ಲಿಕಾಯಿ ಹೇಳಿ ಮಾಡಿಸಿದ ಸೂಪರ್ ಫುಡ್ ಅಂತ ಹೇಳಿದರೆ ತಪ್ಪಾಗಲಾರದು ಹೌದು ಕೆಲಸದ ಒತ್ತಡ ಹಾಗೂ ಸಮಯದ ಕೊರತೆ ಯಿಂದಾಗಿ ನಾವು ನಮ್ಮ ಆರೋಗ್ಯಕ್ಕೆ ಹಾಗೂ ಸೌಂದರ್ಯಕ್ಕೆ ಸಮಯ ಕೊಡುವಷ್ಟು ಬಡವರು ಆಗಿದ್ದೇವೆ. ಅದರಲ್ಲಿ ಮುಖ್ಯವಾಗಿ ತಲೆಕೂದಲಿನ ಆರೈಕೆ ಮಾಡುವುದು. ಅದಕ್ಕಾಗಿ ಬೆಟ್ಟದ ನೆಲ್ಲಿಕಾಯಿ ಯನ್ನೂ ನೀವು ಉತ್ತಮವಾದ ಮನೆಮದ್ದು ಗಳಲ್ಲಿ ಬಳಕೆ ಮಾಡಿಕೊಳ್ಳಬಹುದು. ಒಮ್ಮೆ ಕೂದಲು ಹಾಳಾದರೆ ಅದನ್ನು ನೈಜ ಸ್ಥಿತಿಗೆ ತರುವುದು ಬಹಳ ಕಷ್ಟದಾಯಕ ಕೆಲಸ. ಕೂದಲೂ ಸುಂದರವಾಗಿ ಬೆಳೆಯಲು ನೆಲ್ಲಿಕಾಯಿ ಸಾಂಪ್ರದಾಯಕ ಪರಿಹಾರ ಆಗಿದೆ. ಕೂದಲಿಗೆ ಬೇಕಾದ ಜೀವಕೋಶಗಳನ್ನು ಹಾಗೂ ಪೋಷಕಾಂಶಗಳನ್ನು ಒದಗಿಸುವಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.
ಕೂದಲು ಧನಾತ್ಮಕವಾಗಿ ಬೆಳೆಯುತ್ತವೆ ಹಾಗೂ ಮುಖ್ಯವಾಗಿ ಕೂದಲು ಉದುರುವುದಿಲ್ಲ. ಸೊಂಪಾಗಿ ದಟ್ಟವಾಗಿ ಬೆಳೆಯುತ್ತವೆ. ಇನ್ನೂ ಮಧುಮೇಹಿಗಳಿಗೆ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಮಾಡಿ ಕುಡಿಯಿರಿ. ನಿಜಕ್ಕೂ ಡಯಾಬಿಟಿಸ್ ರೋಗಿಗಳಿಗೆ ನೆಲ್ಲಿಕಾಯಿ ಜ್ಯೂಸ್ ಬಹಳ ಸೂಕ್ತ. ಇದು ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಲು ಸಹಕರಿಸುತ್ತದೆ. ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಸ್ನಾಯುಗಳು ಬಲಗೊಳ್ಳುತ್ತವೆ ಹೃದಯದ ಆರೋಗ್ಯಕ್ಕೆ ಉತ್ತಮ ಹೃದಯದ ಎಲ್ಲ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಹೃದ್ರೋಗದ ಎಲ್ಲ ಸಮಸ್ಯೆಗಳಿಂದ ಪಾರು ಮಾಡುತ್ತದೆ. ದೇಹದಲ್ಲಿ ರಕ್ತ ಹಾಳಾಗಿದ್ದರೆ ಮುಖದಲ್ಲಿ ಗುಳ್ಳೆಗಳು ಆಗುವುದು ಮೊಡವೆಗಳು ಕಪ್ಪು ಕಲೆಗಳು ಮೈ ತುಂಬಾ ಕೆರೆತ ಹೀಗೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದಕ್ಕಾಗಿ ಈ ಬೆಟ್ಟದ ನೆಲ್ಲಿಕಾಯಿ ರಕ್ತವನ್ನು ಶುದ್ಧೀಕರಿಸುತ್ತದೆ. ಹೀಗಾಗಿ ನೀವು ಕನಿಷ್ಠ ವಾರದಲ್ಲಿ ಎರಡು ದಿನವಾದರೂ ಕೂಡ ಬೆಟ್ಟದ ನೆಲ್ಲಿಕಾಯಿ ತಿನ್ನಿ. ಇನ್ನೂ ರಕ್ತ ಶುದ್ದಿ ಆಗಲು ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ನಲ್ಲಿ ಸ್ವಲ್ಪ ಜೇನುತುಪ್ಪ ಹಾಕಿ ಕುಡಿದರೆ ಕಪ್ಪು ಕಲೆಗಳು ಮೊಡವೆಗಳು ಬಿಳಿ ಚುಕ್ಕೆಗಳು ಎಲ್ಲವೂ ಕಡಿಮೆ ಆಗುತ್ತದೆ. ಅದಕ್ಕಾಗಿ ಬೆಟ್ಟದ ನೆಲ್ಲಿಕಾಯಿ ಸಿಕ್ಕರೆ ಬಿಡಬೇಡಿ ಖಂಡಿತವಾಗಿ ಸೇವನೆ ಮಾಡಿ. ಇದರಿಂದ ನಿಮಗೆ ಖಂಡಿತವಾಗಿ ಲಾಭವಾಗುತ್ತದೆ.