ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮದ ರೋಮಕೂಪಗಳು ತೆರೆದುಕೊಳ್ಳುತ್ತವೆ. ಆದರೆ ಸ್ಟೀಮ್ ಬಾತ್ ಮಾಡುವ ಮೊದಲು ಎಣ್ಣೆ ಹಚ್ಚಲು ಮರೆಯಬೇಡಿ.
ಕೇವಲ 10 -15 ನಿಮಿಷ ಮಾತ್ರ ಸ್ಟೀಮ್ ಚೇಂಬರ್ನಲ್ಲಿ ಕುಳಿತುಕೊಳ್ಳಿ. ಇದರಿಂದ ಬೆನ್ನಿನ ಮೇಲೆ ಶೇಖರವಾಗಿರುವ ಎಲ್ಲಾ ಕಲ್ಮಶಗಳು ಹೊರಬರುತ್ತವೆ. ಬೆನ್ನಿನ ಮೇಲೆ ಮೊಡವೆ ಇದ್ದರೆ ಅದಕ್ಕಾಗಿ ಬಾಡಿವಾಶ್ ಬಳಸಿ. ಇದರಿಂದ ಮೊಡವೆ ನಿವಾರಣೆಯಾಗುತ್ತದೆ.
ಮೊಡವೆ ಸಮಸ್ಯೆಗೆ ಅಲೋವೆರಾ ಉತ್ತಮ ಪರಿಹಾರ ನೀಡುತ್ತದೆ. ಸ್ನಾನದ ಬಳಿಕ ಅಲೋವೆರಾ ಜೆಲ್ನ್ನು ಬೆನ್ನಿಗೆ ಹಚ್ಚಿ , ಇದರಿಂದ ಬೆನ್ನಿನ ಮೇಲೆ ಇರುವ ಮೊಡವೆ, ಕಲೆ ಮಾಯವಾಗುತ್ತವೆ.
ಅರಿಶಿನದಲ್ಲಿ ರೋಗನಿರೋಧಕ ಗುಣ ಇದೆ. ಬೆನ್ನಿನ ಮೇಲೆ ಮೂಡಿರುವ ಮೊಡವೆ ನಿವಾರಣೆ ಮಾಡಲು ಅರಿಶಿನವನ್ನು ನೀರಿನಲ್ಲಿ ಮಿಶ್ರಣ ಮಾಡಿ ಬೆನ್ನಿಗೆ ಹಚ್ಚಿ. ಬೆಳಗ್ಗೆ ಬಿಸಿ ನೀರಿನಲ್ಲಿ ಸ್ನಾನ ಮಾಡಿ. ಇದನ್ನು ಒಂದು ವಾರಗಳ ಕಾಲ ಮುಂದುವರೆಸಿಕೊಂಡು ಹೋಗಿ ನಂತರ ಪರಿಣಾಮ ಏನು ಅನ್ನೋದು ಗೊತ್ತಾಗುತ್ತೆ.
ಸೊಂಟದ ಮೇಲಿರುವ ಮೊಡವೆಯ ಕಲೆ ನಿವಾರಣೆ ಮಾಡಲು ಬೇಕಿಂಗ್ ಸೋಡಾ, ರೋಸ್ ವಾಟರ್ ಮತ್ತು ಜೇನುತುಪ್ಪ ಮಿಶ್ರಣ ಮಾಡಿ ಪೇಸ್ಟ್ ಮಾಡಿ. ನಂತರ ಇದನ್ನು ಮೊಡವೆ ಕಲೆಯ ಮೇಲೆ ಹಚ್ಚಿ. ಇದನ್ನು 10 ರಿಂದ 12 ದಿನಗಳ ಕಾಲ ಮುಂದುವರೆಸಿಕೊಂಡು ಬಂದರೆ ಗುಳ್ಳೆಯ ಕಲೆ ನಿವಾರಣೆಯಾಗುತ್ತದೆ.
ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.