WhatsApp Group Join Now

ಸಾಮಾನ್ಯವಾಗಿ ಇತ್ತೀಚೆನ ದಿನಗಳಲ್ಲಿ ಎಲ್ಲರಲ್ಲೂ ಕಾಡುವ ಸಮಸ್ಯೆಗಳಲ್ಲಿ ಒಂದು ಬೆನ್ನು ನೋವು. ಚಿಕ್ಕಮಕ್ಕಳಿಂದ ದೊಡ್ಡವರ ವರೆಗೂ ಈ ಬೆನ್ನು ನೋವು ಕಾಣಿಸಿಯೇ ಇರುತ್ತದೆ. ಇತ್ತೀಚಿನ ಆಹಾರ ಶೈಲಿ ಅಥವಾ ಕೆಲವೊಂದು ಕೆಲಸಗಳು ಹೀಗೆ ಬೆನ್ನುನೋವು ತರಿಸುತ್ತದೆ. ಹಾಗಾದರೆ ಪದೇ ಪದೇ ಬೆನ್ನು ನೋವಿಗೆ ಈ ಎಣ್ಣೆಗಳನ್ನು ಬಳಸುವುದರಿಂದ ನೋವಿಗೆ ಉಪಶಮನ ಸಿಕ್ಕಂತಾಗುತ್ತದೆ.

ಹೌದು, ಬೆನ್ನು ನೋವು ಹೋಗಲಾಡಿಸಲು ಕೆಲವೊಂದು ಎಣ್ಣೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲಿ ಮೊದಲವಾಗಿ ಶುಂಠಿ ಎಣ್ಣೆ. ಕೆಲವೊಂದು ರೋಗಗಳಿಗೆ ರಾಮಭಾಣವಾಗಿರುವ ಶುಂಠಿ ಬೆನ್ನು ನೋವಿಗೂ ಉತ್ತಮ ಔಷಧ. ಇದರಲ್ಲಿ ಉರಿಯೂತ ಕಡಿಮೆ ಮಾಡುವ ಅದರಲ್ಲೂ ತೀವ್ರ ತರವಾದ ಬೆನ್ನು ನೋವಿಗೆ ಹಚ್ವುವುದರಿಂದ ಒಳ್ಳೆಯ ಔಷಧ.

ಬೆನ್ನು ನೋವಿಗೆ ನೀಲಗಿರಿ ಎಣ್ಣೆ ಕೂಡ ತುಂಬಾ ಮುಖ್ಯವಾದ ಔಷಧ ವಾಗಿದೆ‌ ಸ್ನಾಯು ಸೆಳೆತ ಹಾಗೂ ಉರಿ, ಊತಕ್ಕೆ ನೀಲಗಿರಿ ಎಣ್ಣೆ ರಾಮಭಾಣ. ಆದರೆ ಈ ಎಣ್ಣೆಯನ್ನು ಬೇರೆ ಎಣ್ಣೆಯೊಂದಿಗೆ ಬೆರಸಿ ಹಚ್ಚಬೇಕು.

ಪುದೀನ ಕೂಡ ಸಾಕಷ್ಟು ರೋಗಗಳಿಗೆ ರಾಮಭಾಣವಾಗಿದೆ. ಅದೇ ರೀತಿ ಬೆನ್ನು ನೋವಿಗೂ ಪುದೀನ ಎಣ್ಣೆ ಉತ್ತಮ ಔಷಧ. ಬೆನ್ನು ನೋವಿಗೆ ಇದನ್ನು ಹಚ್ಚೋದರಿಂದ ಕಡಿಮೆಯಾಗುತ್ತದೆ. ಈ ಎಣ್ಣೆಯಲ್ಲಿ ಮೆಂಥಾಲ್ ಹೆಚ್ಚಿರುವುದರಿಂದ ರಕ್ತ ನಾಳಗಳ ಸಂಚಾರ ಸುಗಮವಾಗಿಸುವ ಮೂಲಕ ನೋವು ನಿವಾರಣೆ ಮಾಡುತ್ತದೆ.

ತುಳಸಿ ಎಣ್ಣೆ ಕೂಡ ಬೆನ್ನು ನೋವಿಗೆ ಅತ್ಯುತ್ತಮ ಎಣ್ಣೆ. ಅನೇಕ ರೋಗಗಳಿಗೆ ತುಳಸಿ ರಾಮಭಾಣ ಅನ್ನೋದು ಗೊತ್ತಿರುವ ವಿಚಾರವೇ. ಹಾಗಾಗಿ ಬೆನ್ನುನೋವಿಗೂ ಕೂಡ ಉತ್ತಮ ನೋವು ನಿವಾರಕವಾಗಿದೆ.

WhatsApp Group Join Now

Leave a Reply

Your email address will not be published. Required fields are marked *