ನಮಸ್ತೆ ಪ್ರಿಯ ಓದುಗರೇ, ಹೊಟ್ಟೆ ಬೊಜ್ಜು ಅಥವಾ ಬೆಲ್ಲಿ ಫ್ಯಾಟ್ ಅನ್ನುವುದು ಈಗಿನ ಜೀವನ ಶೈಲಿಯೇ ಅದಕ್ಕೆ ಕಾರಣವಾಗಿರುತ್ತದೆ ಜೊತೆಗೆ ಆಹಾರ ಪದ್ಧತಿಯು ಕೂಡ. ಹೊಟ್ಟೆಯ ಕೊಬ್ಬು ಅನ್ನುವುದು ಆರೋಗ್ಯಕ್ಕೆ ತುಂಬಾನೆ ಹಾನಿಕಾರಕ. ಈ ಹೊಟ್ಟೆ ಬೊಜ್ಜು ಮನುಷ್ಯನ ಮನಸ್ಥಿತಿ ಮತ್ತು ಆತ್ಮವಿಶ್ವಾಸವನ್ನೂ ಕುಗ್ಗಿಸುತ್ತಾ ಹೋಗುತ್ತದೆ. ಹೊಟ್ಟೆಯ ಕೊಬ್ಬು ಅಥವಾ ಬೊಜ್ಜು ಹೆಚ್ಚಾಗುವುದರಿಂದ ಮಧುಮೇಹ ಸಮಸ್ಯೆ, ನಿದ್ರಾಹೀನತೆ, ಹೃದ್ರೋಗ ಸಮಸ್ಯೆಗಳು, ಕ್ಯಾನ್ಸರ್ ನಂತಹ ಹಲವಾರು ಸಮಸ್ಯೆಗಳು ಕಾಡಲು ಶುರು ಆಗುತ್ತವೆ. ದೇಹದ ತೂಕವನ್ನು ಇಳಿಸುವುದರ ಜೊತೆಗೆ ಹೊಟ್ಟೆಯ ಕೊಬ್ಬು ಕೂಡ ಕರಗಿಸುವುದು ತುಂಬಾನೇ ಮುಖ್ಯವಾಗಿದೆ ಹಾಗೆಯೇ ಇದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಹೊಟ್ಟೆಯ ಭಾಗ ಸಮವಾಗಿ ಅಥವಾ ಸಮತಟ್ಟಾಗಿ ಇದ್ದರೆ ಆ ವ್ಯಕ್ತಿಯ ದೇಹದ ಸೌಂದರ್ಯ ಹೆಚ್ಚುವುದರ ಜೊತೆಗೆ ಆತನು ಸುಂದರವಾಗಿ ಕಾಣುತ್ತಾನೆ. ಆದರೆ ದೇಹದ ಬಲಾಢ್ಯತೆ, ದೇಹದ ಆಕೃತಿ, ಮತ್ತು ಅವರ ವೈದ್ಯಕೀಯ ಸ್ಥಿತಿ, ಅವರ ವಂಶಪಾರಂಪರ್ಯ ಆಗಿರುವ ಅನುವಂಶೀಯತೆ ತುಂಬಾನೇ ವಿರಳವಾಗಿ ವಿಭಿನ್ನವಾಗಿ ಇರುತ್ತದೆ. ಹಾಗೆಯೇ ಮನುಷ್ಯನ ದೇಹವು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ವಿಭಿನ್ನವಾಗಿ ಇರುತ್ತದೆ.
ಹಾಗಾದರೆ ಬನ್ನಿ ಸ್ನೇಹಿತರೆ ಇಂದಿನ ಲೇಖನದಲ್ಲಿ ತುಂಬಾನೇ ಸರಳವಾದ ಸುಲಭವಾದ ಮನೆಮದ್ದು ನಾವು ನಿಮಗೆ ತಿಳಿಸಿಕೊಡುತ್ತೇವೆ ಇದರಿಂದ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು, ಜೊತೆಗೆ ನಿಮ್ಮ ಹೊಟ್ಟೆಯ ಭಾಗದ ಕೊಬ್ಬು ಅಥವಾ ಬೊಜ್ಜು ಕಡಿಮೆ ಮಾಡಿ ಕೊಳ್ಳಬಹುದು. ಈ ಮನೆಮದ್ದು ಅನ್ನು ನೀವು ಮನೆಯಲ್ಲಿ ಕುಳಿತು ನಿಮ್ಮ ಪ್ರೀತಿಯ ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ವಸ್ತುಗಳನ್ನು ಬಳಕೆ ಮಾಡಿಕೊಂಡು ಈ ಮನೆಮದ್ದು ತಯಾರಿಸಿ ಬಳಕೆ ಮಾಡಬಹುದು. ತುಂಬಾನೇ ಸರಳವಾಗಿದೆ ಸ್ನೇಹಿತರೇ ಹಾಗಾದರೆ ಬನ್ನಿ ಇದಕ್ಕೆ ಬೇಕಾಗುವ ಸಾಮಗ್ರಿಗಳನ್ನು ತಿಳಿದುಕೊಳ್ಳೋಣ ಅದುವೇ ಶುಂಠಿ, ನಿಂಬೆ ಹಣ್ಣಿನ ರಸ ಮತ್ತು ನೀರು. ಬನ್ನಿ ಶುರು ಮಾಡೋಣ. ಮೊದಲಿಗೆ ಒಂದು ಪಾತ್ರೆಯನ್ನು ಸ್ಟೋವ್ ಮೇಲೆ ಇಟ್ಟು ಅರ್ಧ ಲೀಟರ್ ನೀರು ಹಾಕಿಕೊಳ್ಳಿ. ಸ್ವಲ್ಪ ಬಿಸಿ ಮಾಡಿಕೊಳ್ಳಿ. ತದ ನಂತರ ಒಂದು ಬೇರಳಿನಷ್ಟು ಇಂಚು ಶುಂಠಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ಸಿಪ್ಪೆಯನ್ನು ತೆಗೆಯದೆ ಉದ್ದವಾಗಿ ಕತ್ತರಿಸಿಕೊಳ್ಳಿ. ಆಮೇಲೆ ಈ ಶುಂಠಿಯನ್ನು ಈ ನೀರಿನ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಈ ನೀರು ಹೊಟ್ಟೆ ಬೊಜ್ಜು ಮಾತ್ರ ಕರಗಿಸುವಲ್ಲಿ ಸಹಾಯ ಮಾಡುವುದಲ್ಲದೆ ಶುಗರ್ ಲೆವೆಲ್ ಅನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ಹಾಗೆಯೇ ನಿಮ್ಮ ಮೆದುಳಿನ ಎಲ್ಲ ಕಾರ್ಯಗಳನ್ನು ಸರಾಗವಾಗಿ ನಡೆಯಲು ಸಹಾಯ ಮಾಡುತ್ತದೆ ಮತ್ತು ಮೆದುಳಿನ ಕಾರ್ಯಕ್ಷಮತೆ ಅನ್ನು ಹೆಚ್ಚಿಸುವಲ್ಲಿ ಈ ಮನೆಮದ್ದು ತುಂಬಾನೇ ಸಹಾಯ ಮಾಡುತ್ತದೆ.
ಮತ್ತು ಹೃದ್ರೋಗದ ಯಾವುದೇ ಸಮಸ್ಯೆ ಇದ್ದರೂ ಕೂಡ ಕ್ರಮೇಣವಾಗಿ ಕಡಿಮೆ ಮಾಡುತ್ತಾ ಬರುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. ವಿಶೇಷವಾಗಿ ಅರ್ಥರೈಟೀಸ್ ಇರುವವರಿಗೆ ಇದು ರಾಮಬಾಣವಾಗಿ ಕೆಲಸವನ್ನು ಮಾಡುತ್ತದೆ. ಇಮ್ಯುನಿಟಿ ಬೂಸ್ಟ್ ಅಂದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೀಳು ನೋವು, ಸೊಂಟ ನೋವು, ಮಂಡಿ ನೋವು, ಎಲ್ಲವನ್ನು ಕಡಿಮೆ ಮಾಡುತ್ತದೆ ಈ ಮನೆಮದ್ದು. ಈ ನೀರು ಚೆನ್ನಾಗಿ ಕುದಿ ಬಂದ ನಂತರ ಅದನ್ನು ಸೋಸಿಕೊಳ್ಳಿ. ಒಂದು ಲೋಟದಲ್ಲಿ ಹಾಕಿಕೊಂಡು ಅದಕ್ಕೆ ಒಂದು ಚಮಚ ನಿಂಬೆ ರಸವನ್ನು ಹಾಕಿಕೊಂಡು ಮಿಕ್ಸ್ ಮಾಡಿ ಕುಡಿಯಿರಿ. ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ನಿಂಬೆ ಹಣ್ಣಿನ ರಸವನ್ನು ಬಳಕೆ ಮಾಡಬೇಡಿ. ಇನ್ನೂ ಹೊಟ್ಟೆ ಬೊಜ್ಜು ಜೊತೆಗೆ ತೂಕವನ್ನು ಕಡಿಮೆ ಮಾಡಿಕೊಳ್ಳುವವರು ಈ ನೀರಿನಲ್ಲಿ ನಿಂಬೆ ರಸವನ್ನು ಬಳಕೆ ಮಾಡಿ ಕುಡಿಯಿರಿ ಖಂಡಿತವಾಗಿ ಫಲಿತಾಂಶ ನಿಮ್ಮದಾಗುತ್ತದೆ. ಶುಭದಿನ.