ನಮಸ್ತೆ ಪ್ರಿಯ ಓದುಗರೇ, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಆರೋಗ್ಯಕರವಾಗಿ ಇರಬೇಕು ಹಾಗೂ ಎತ್ತರವಾಗಿ ಇರಬೇಕು ಎಂದು ಇಚ್ಛೆ ಪಡುತ್ತ ಇರುತ್ತಾರೆ. ಎತ್ತರವಾಗಿ ಇದ್ರೆ ಎಲ್ಲರಿಗೂ ಆಕರ್ಷಕವಾಗಿ ಕಾಣುತ್ತಾರೆ ಮತ್ತು ಸುಂದರವಾಗಿ ಕಾಣುತ್ತಾರೆ ಎಂದು ನಮ್ಮ ಪೋಷಕರು ನಂಬುತ್ತಾರೆ. ಆದರೆ ಪ್ರತಿಯೊಬ್ಬ ವ್ಯಕ್ತಿಯೂ ಎತ್ತರವಾಗ ಲು ಇಷ್ಟು ವಯಸ್ಸು ಅಂತ ಇರುತ್ತದೆ. ಹಾಗೂ ಎತ್ತರವಾಗಿ ಬೆಳೆಯಲು ಏನೇನು ಮಾಡಬೇಕು ಯಾವ ವ್ಯಕ್ತಿ ಎಷ್ಟು ಎತ್ತರವಾಗುತ್ತಾನೆ ಎಂದು ಇಂದಿನ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ. ಒಬ್ಬ ವ್ಯಕ್ತಿಯೂ ಅಂದರೆ ಅದು ಹುಡುಗ ಅಥವಾ ಹುಡುಗಿ ಆಗಿರಬಹುದು, ಅವನು 18-20 ವರ್ಷದ ವರೆಗೆ ಅವರ ಎತ್ತರ ಬೆಳೆಯಲು ಸಾಧ್ಯ ಆಗುತ್ತದೆ. ಈ ಬೆಳವಣಿಗೆ ಹಂತದಲ್ಲಿ ಯಾರು ಬೆಳೆಯುವುದಿಲ್ಲ ಅಂಥವರಿಗೆ ಸಾಮಾನ್ಯವಾಗಿ ಸ್ವಾಭಿಮಾನದ ಕೊರತೆ ಉಂಟಾಗಬಹುದು, ಅನೇಕ ಬಾರಿ ಜನರು ಎತ್ತರವಿಲ್ಲದ ಕಾರಣ ನಾಚಿಕೆಯನ್ನು ಕೂಡ ಪಡಬಹದು ಹಾಗೂ ಸಾರ್ವಜನಿಕರಿಂದ ದೂರವಿರಲು ಇಷ್ಟ ಪಡುತ್ತಾರೆ.

ನಮ್ಮ ಎತ್ತರವು ಸಾಮಾನ್ಯವಾಗಿ ನಮ್ಮ ಪೂರ್ವಜರನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ನಿಮ್ಮ ತಂದೆ ತಾಯಿ ಎಷ್ಟು ಎತ್ತರ ಇರುತ್ತಾರೆ, ನೀವು ಕೂಡ ಅಷ್ಟೇ ಬೆಳವಣಿಗೆ ಆಗಬಹುದು, ಆದ್ರೆ ನಿಮ್ಮ ಬೆಳವಣಿಗೆ ಹಂತದಲ್ಲಿ ನೀವೇನಾದರೂ ವಿಶೇಷವಾದ ಕಾಳಜಿ ವಹಿಸಿದರೆ ಸಾಮಾನ್ಯವಾಗಿ ನಿಮ್ಮ ಪೂರ್ವಜರು ಹಾಗೂ ನಿಮ್ಮ ತಂದೆ ತಾಯಿ ಎಷ್ಟು ಎತ್ತರ ಇರುತ್ತಾರೆ ಅದಕ್ಕಿಂತ ಜಾಸ್ತಿ ಎತ್ತರ ಆಗಲು ಸಾಧ್ಯ ಇದೆ. ಇನ್ನೂ ಬೆಳವಣಿಗೆ ಹಂತದಲ್ಲಿ ಯಾವ ವಿಷಯಗಳನ್ನು ನಾವು ಗಮನದಲ್ಲಿ ಇಟ್ಟುಕೊಂಡು ರೆ ಉತ್ತಮವಾದ ಎತ್ತರ ಪಡೆಯಲು ಸಾಧ್ಯ ಎಂದು ನೋಡುವುದಾದರೆ, ಬೆಳವಣಿಗೆ ಹಂತದಲ್ಲಿ ಪೋಷಕರ ಪಾತ್ರ ತುಂಬಾ ಮುಖ್ಯ ಆಗಿರುತ್ತದೆ, ಈಗಿರುವಂತಹ ಪೋಷಕರು ತಮ್ಮ ಮಕ್ಕಳನ್ನು ಹೊರಗೆ ಆಟ ಆಡಲು ಹಾಗೂ ಕ್ರೀಡೆಯಲ್ಲಿ ಭಾಗವಹಿಸಲು ಬಿಡುವುದೇ ಇಲ್ಲ. ಹಾಗಾಗಿ ಮಕ್ಕಳು ಎತ್ತರವಾಗಿ ಬೆಳೆಯಲು ಸಾಧ್ಯ ಆಗುತ್ತಿಲ್ಲ. ಕನಿಷ್ಟ ಪಕ್ಷ ಒಂದು ದಿನಕ್ಕೆ ಒಂದು ತಾಸು ಆದ್ರೂ ಹೊರಗೆ ಆಟ ಆಡಲು ತಮ್ಮ ಮಕ್ಕಳನ್ನು ಬಿಡಬೇಕು. ಇಲ್ಲದಿದ್ದರೆ ಮಕ್ಕಳು ಎತ್ತರವಾಗಳು ಸಾಧ್ಯ ಆಗುವುದಿಲ್ಲ. ಕೆಲವರು ವ್ಯಾಯಾಮ ಹಾಗೂ ಜಂಪಿಂಗ್ ನಂತಹ ಚಟುಟಿಕೆಗಳನ್ನೂ ಮಾಡುತ್ತಾರೆ ಅಂತಹವರು ಬೆಳವಣಿಗೆ ಹಂತದಲ್ಲಿ ಇತ್ತರವಾಗಳು ಸಾಧ್ಯವಾಗುತ್ತದೆ.

ಹಾಗಾಗಿ ಬೆಳವಣಿಗೆ ಹಂತದಲ್ಲಿ ಜಂಪಿಂಗ್ ಅಥವಾ ಹಗ್ಗ ಜಂಪಿಂಗ್ ನಂತಹ ವ್ಯಾಯಾಮಗಳನ್ನು ಮಾಡುವುದರಿಂದ ನೀವು ಎತ್ತರವಾಗಿ ಬೆಳೆಯಲು ಸಾಧ್ಯ ಆಗುತ್ತದೆ. ಇದಷ್ಟೇ ಅಲ್ಲದೇ ಕಂಬಿಗಳಿಗೆ ಜೋತು ಬೀಳುವುದರಿಂದ ಎತ್ತರವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಇದರ ಜೊತೆಗೆ ಆಹಾರದ ಕಾಳಜಿ ವಹಿಸಬೇಕಾಗುತ್ತದೆ. ಎತ್ತರವನ್ನು ಹೆಚ್ಚಿಸಲು ಕ್ಯಾಲ್ಸಿಯಂ ತುಂಬಾ ಉಪಯುಕ್ತ. ಬೆಳೆಯುವ ಮಕ್ಕಳು ನಿಯಮಿತವಾಗಿ ವಿಟಮಿನ್ ಡೀ ಇರುವಂತಹ ಆಹಾರಗಳನ್ನು ಸೇವಿಸಬೇಕು. ಪ್ರತಿನಿತ್ಯ ಹಾಲನ್ನು ಕುಡಿಯಬೇಕು. ಹಾಲನ್ನು ಕುಡಿಯುವದರಿಂದ ಬೇಗನೆ ಎತ್ತರ ಆಗಲು ಸಾಧ್ಯವಾಗುತ್ತದೆ. ಇದರ ಜೊತೆಗೆ ಉತ್ತಮವಾದ ಪೋಷಕಾಂಶಗಳು ಇರುವ ಆಹಾರವನ್ನು ಸೇವನೆ ಮಾಡಬೇಕು ಪ್ರತಿನಿತ್ಯ ಹಣ್ಣುಗಳನ್ನು ಹಾಗೂ ತರಕಾರಿಗಳನ್ನು ಸೇವಿಸಬೇಕು. ಯಾವುದೇ ಕಾರಣಕ್ಕೂ ಹೊರಗಿನ ಆಹಾರಗಳನ್ನು ಅಥವಾ ಜಂಕ್ ಫುಡ್ ಗಳನ್ನು ಅತಿಯಾಗಿ ಸೇವನೆ ಮಾಡಬಾರದು. ಬಹಳ ಮುಖ್ಯವಾಗಿ ಮಕ್ಕಳು ಮಾನಸಿಕವಾಗಿ ಆರೋಗ್ಯವಾಗಿ ಇರಬೇಕು. ಯಾರು ಮಾನಸಿಕವಾಗಿ ಆರೋಗ್ಯದಿಂದ ಇರುವುದಿಲ್ಲ ಅಂಥವರಿಗೆ ಅವರ ಎತ್ತರದ ಮೇಲೂ ಹಾಗೂ ಇಡೀ ದೇಹದ ಮೇಲೆ ಪ್ರಭಾವ ಬೀರುತ್ತದೆ. ಆದರಿಂದ ನಿಮಗೆ ಯಾವುದೇ ರೀತಿ ಮಾನಸಿಕ ತೊಂದರೆಗಳು ಇದ್ದರೆ ನೀವು ಸೂಕ್ತ ವೈದ್ಯರನ್ನು ಸಂಪರ್ಕಿಸ ಬಹುದು. ನೋಡಿದ್ರಾ ಸ್ನೇಹಿತರೆ ಎತ್ತರವಾಗಿ ದೃಢವಾಗಿ ಬೆಳೆಯುವ ಬಯಕೆ ಎಲ್ಲರದೂ ಆಗಿರುತ್ತದೆ ಆದರೆ ಅದಕ್ಕೆ ಬೇಕಾದ ತಯಾರಿ ನಡೆಸಿದರೆ ಮಾತ್ರ ಖಂಡಿತ ಉತ್ತಮ ಫಲ ದೊರೆಯುತ್ತದೆ. ಶುಭದಿನ.

Leave a Reply

Your email address will not be published. Required fields are marked *